ಮಣಿಪಾಲ MDMA ನಿಷೇದಿತ ಮಾತ್ರೆಗಳು ಹಾಗೂ ಬ್ರೌನ್ ಶುಗರ್ ಮಾರಾಟ ವಶ ಬ್ರಹ್ಮಾವರದ ವ್ಯಕ್ತಿಯ ಬಂಧನ

JANANUDI.COM NETWORK


ಮಣಿಪಾಲ/ಕುಂದಾಪುರ: ದಿನಾಂಕ 14.10.2020 ರಂದು ಮಣಿಪಾಲದ ಆರ್.ಟಿ.ಒ.ಕಛೇರಿ ರಸ್ತೆಯ ಎಂಡ್ ಪಾಯಿಂಟ್ ಬಳಿ ಬ್ರಹ್ಮಾವರದ ಮಹಮ್ಮದ್ ಫಜಲ್ MDMA ನಿಷೇದಿತ ಮಾತ್ರೆಗಳು ಹಾಗೂ ಬ್ರೌನ್ ಶುಗರನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವ ಸಂದರ್ಭದಲ್ಲಿ, ಗುಪ್ತ ಮಾಹಿತಿ ಸಂಗ್ರಹಿಸಿ ಮಣಿಪಾಲದ ಪೋಲೀಸರು ದಾಳಿ ಮಾಡಿ ಮಹಮ್ಮದ್ ಫಜಲ್ ನನ್ನು ವಶಕ್ಕೆ ಪಡೆದುಕೊಂಡು 54 ನಿಷೇದಿತ MDMA Ecstasy   ಮಾತ್ರೆಗಳು ಹಾಗೂ 30 ಗ್ರಾಮ್ ಬ್ರೌನ್ ಶುಗರ್ ಮತ್ತು ಎರಡು ಮೊಬಾಯ್ಲ್ ಪೋನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ಮಾದಕ ವಸ್ತುಗಳ ಬೆಲೆ ಅಂದಾಜು ಮೌಲ್ಯ 4,62,000/ರೂಪಾಯಿಗಳಾಗುತ್ತವೆ’ ಎಂದು ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ.
ಈ ದಾಳಿಯನ್ನು ಉಡುಪಿ ಪೋಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಐ.ಪಿ.ಎಸ್, ಹೆಚ್ಚುವರಿ ಅಧೀಕ್ಷಕರಾದ ಕುಮಾರ ಚಂದ್ರ ಕೆ.ಎಸ್.ಪಿ.ಎಸ್, ಉಡುಪಿ ಪೋಲೀಸ್ ಉಪಾಧೀಕ್ಷಕರಾದ ಜೈ ಶಂಕರ್ ಇವರ ಮಾರ್ಗದರ್ಶನದಲ್ಲಿ ಸಹಾಯಕ ಪೋಲೀಸ್ ಅಧೀಕ್ಷಕರಾದ ಕುಂದಾಪುರ ವಿಭಾಗದ ಹರಿರಾಮ ಶಂಕರ್, ಐ.ಪಿ.ಎಸ್. ಇವರ ನೇತ್ರತ್ವದಲ್ಲಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜ್, ಮಣಿಪಾಲ ಪೋಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್ ಎಮ್.ಗೌಡ, ಪಿ.ಎಸ್.ಐ. ರಾಜಶೇಖರ ವಂದಲಿ, ಎ.ಎಸ್.ಐ. ಶೈಲೇಶ್, ಎಚ್.ಸಿ. ಪ್ರಸನ್ನ, ಎಚ್.ಸಿ. ಥೋಮ್ಸನ್, ಪಿ.ಸಿ. ಆದರ್ಶ್, ಎಪಿಸಿ ಸುಧೀಪ್ ಇವರು ಭಾಗವಹಿಸಿದ್ದರು ಎಂದು ಪೋಲೀಸ್ ಮೂಲಗಳು ತಿಳಿಸಿವೆ.