ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರದ ಶೈಕ್ಷಣಿಕ ಸೌಲಭ್ಯ ಸದುಪಯೋಗ ಪಡಸಿಕೊಳ್ಳಬೇಕು ಎಂದು ಬಿಇಒ ಉಮಾದೇವಿ ಹೇಳಿದರು.
ತಾಲ್ಲೂಕಿನ ಪೆದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 6 ವರ್ಷಗಳ ಬಳಿಕ ಗುರುವಾರ ಪನರಾರಂಭ ಮಾಡಿ ಮಾನಾಡಿ, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ ಪರಿಣಾಮವಾಗಿ ಶಾಲೆಯನ್ನು ಮುಚ್ಚಲಾಗಿತ್ತು. ಆದರೆ ಈಗ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರು ಪೋಷಕರ ಮನವೊಲಿಸಿ 15 ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಬಿಆರ್ಸಿ ವಸಂತ, ಬಿಆರ್ಪಿ ಸುಧಾಕರ್, ಸಿಆರ್ಪಿ ಕೆ.ವೇಣುಗೋಪಾಲ್, ಎಸಿಒ ಅಮರನಾಥ್, ಪಿಡಿಒ ರಮೇಶ್ ಇದ್ದರು.