

ದೆಹಲಿ, ಮೇ 7: ಭಾರತೀಯ ಸೇನೆಯ “ಆಪರೇಶನ್ ಸಿಂಧೂರ” ಹೆಸರಿನ ವಿಶೇಷ ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂಬ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಈ ಕುರಿತು ಇಂದು ಬೆಳಿಗ್ಗೆ 10 ಗಂಟೆಗೆ ರಕ್ಷಣಾ ಮತ್ತು ವಿದೇಶಾಂಗ ಇಲಾಖೆ ಸಂಯುಕ್ತವಾಗಿ ಪತ್ರಿಕಾಗೋಷ್ಠಿ ನಡೆಸಿದೆ
ಭಾರತದ ಸೇನೆ ಮೂರು ಪ್ರಮುಖ ಉಗ್ರ ಸಂಘಟನೆಗಳ ನೆಲೆಗಳ ಮೇಲೆ ನಿಖರ ಗುರಿಯೊಂದಿಗೆ ದಾಳಿ ನಡೆಸಿದ್ದು, ಜೈಶ್ ಎ ಮೊಹ್ಮದ್ ಉಗ್ರ ಸಂಘಟನೆಯ ಪ್ರಮುಖ ಉಗ್ರನ ನೆಲೆಯಾಗಿದ್ದ ಪಾಕಿಸ್ತಾನದ ಸುಬಾನ್ ಅಲ್ಲಾ ಮಸೀದಿಯ ಮೇಲೂ ಟಾರ್ಗೆಟ್ಡ್ ದಾಳಿ ನಡೆದಿದೆ.
ಈ ಭಾರೀ ಕಾರ್ಯಾಚರಣೆ ಪಾಕಿಸ್ತಾನವನ್ನು ತತ್ತರಿಸಿ ಹಾಕಿದ್ದು, ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಅನಿಯಂತ್ರಿತ ದಾಳಿಗೆ ಪಾಕಿಸ್ತಾನ ಮುಂದಾಗಿದೆ ಎಂದು ಭಾರತ ಆರೋಪಿಸಿದೆ. ಈ ದಾಳಿಗಳಲ್ಲಿ ಕಾಶ್ಮೀರದಲ್ಲಿ ತೀವ್ರ ಬಲಾಹೀನತೆ ಉಂಟಾಗಿದ್ದು, ಮೂವರು ನಾಗರಿಕರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸೇನೆ ಈಗಾಗಲೇ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಭದ್ರತಾ ಕ್ರಮವನ್ನು ಬಿಗಿಗೊಳಿಸಲಾಗಿದೆ. ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇನ್ನು ಭಾರತೀಯ ಸೇನೆಯ ಈ ಮಹತ್ವದ ಕಾರ್ಯಾಚರಣೆ ಕುರಿತು ವಿವರ ನೀಡಲು ಇಂದು ಬೆಳಿಗ್ಗೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ವ್ಯಕ್ತವಾಗಿದೆ. ದೇಶದ ಭದ್ರತಾ ನೀತಿ ಮತ್ತು ಪಾಕಿಸ್ತಾನಕ್ಕೆ ನೀಡಲಿರುವ ಮುಂದಿನ ಸಂದೇಶದ ಕುರಿತು ಪ್ರಮುಖ ಘೋಷಣೆಗಳು ಹೊರ ಬೀಳಲಿವೆ.
