JANANUDI.COM NETWORK
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ರಂಗೋತ್ಸವ 2019 – ಕಾಲೇಜುಗಳಲ್ಲಿ ರಂಗ ಶಿಕ್ಷಣಕ್ಕೆ ಆದ್ಯತೆ ಬೇಕು -.ಪ್ರೊ| ಬಾರ್ಕೂರು ಉದಯ
ಕುಂದಾಪುರ,ಆ. 20: ‘ಕೇವಲ ಶಿಕ್ಷಣದಿಂದ ವ್ಯಕ್ತಿಯ ಮನೋಸ್ಥ್ರೆಯ ಬೆಳೆಯುವುದಿಲ್ಲಾ. ಶಿಕ್ಷಣೇತರ ಚಟುವಟಿಕೆಗಳಿಂದ ವ್ಯಕ್ತಿಯ ಮನೋಸ್ಥ್ರೆಯ ಬೆಳೆಯುವುದು. ರಂಗ ಚಟುವಟಿಕೆಗಳಿಂದ ವ್ಯಕ್ತಿಯ ಮನೋಸ್ಥ್ರೆಯ ಬೆಳೆಯುವುದು ಮಾತ್ರವಲ್ಲಾ ಆತ ಬೌಧಿಕವಾಗಿ ಬೆಳೆಯುತ್ತಾನೆ, ಅವನಲ್ಲಿ ಸಂಸ್ಕ್ರತಿ ಮೂಡುತ್ತೆ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆರೆಯುತ್ತಾನೆ, ಘಾತಕ ಶಕ್ತಿ ಕಡಿಮೆಯಾಗುತ್ತೆ. ಇವತ್ತು ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ರಂಗ ಶಿಕ್ಷಣ ಪಠ್ಯ ಕ್ರಮವನ್ನು ಆರಂಭಿಸುವ ಚಿಂತನೆಯಲ್ಲಿದೆ’ ಎಂದು ಪ್ರಾದ್ಯಪಕರಾದ ಬಾರ್ಕೂರು ಉದಯ್ ಹೇಳಿದರು.
ಅವರು ಮಂಗಳೂರು ವಿ.ವಿ. ಯ ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯದ ಸಹಯೋಗದಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಭಭವನದಲ್ಲಿ ಎರಡು ದಿನಗಳ ಅಂತರ್ ಕಾಲೇಜು ಮಟ್ಟದ ರಂಗೋತ್ಸವ 2019 ಮತ್ತು ಅಂತರ್ ಕಾಲೇಜು ರಂಗ ಭೂಮಿ ಸ್ಪರ್ಗೆಯನ್ನು ಉದ್ಘಾಟಿಸಿ ಮಾತನಾಡಿದರು. ‘ನಮ್ಮ ಕಾಲದ ವಿದ್ಯಾಥಿಗಳಿಗೆ ಜ್ಞಾನದ, ಸಾಹಿತ್ಯದ, ಒದಿನ ಹಸಿವು ಇತ್ತು, ಅಂದಿನ ಯುವಕರು ಒದಲು ಲೈಬ್ರೆರಿಗಳಲ್ಲಿ ಇರುತಿದ್ದರು. ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ನಲ್ಲೆ ಕಾಲ ಕಳೆಯುತ್ತಾರೆ, ಸ್ವಲ್ಪ ಮಟ್ಟಿಗಾದರೂ ಇದನ್ನು ಬದಿಗೊತ್ತಿ ಒದು, ಕಲೆ, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಿ, ವಿದ್ಯಾರ್ಥಿಗಳು ಅಂಕಕ್ಕಾಗಿ ಒದು ಅಲ್ಲಾ ಎಂದು ತಿಳಿದುಕೊಳ್ಳ ಬೇಕು. ಬೇಕಾದಸ್ಟು ಜನ ಹೆಚ್ಚು ವಿದ್ಯಾಭ್ಯಾಸ ಇಲ್ಲದೆಯೂ ಕಲೆ ಸಾಹಿತ್ಯ, ಸಂಗೀತ ನಾಟಕ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದಾರೆ’ ತಿಳಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ|ಎನ್.ಪಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಕೊರೀದರು. ಸಂಸ್ಥೆಯ ವಿಶ್ವಸ್ತ ಮಂಡಳಿಯ ಟ್ರಸ್ಟಿ ಕೆ. ಶಾಂತಾರಾಮ್ ಪ್ರಭು ಮುಖ್ಯ ಅತಿಥಿಯಾಗಿದ್ದರು. ತೀರ್ಪುಗಾರರಾದ ಪ್ರವೀಣ್ ಕೊಡವುರು, ಪೂರ್ಣಿಮ ಸುರೇಶ್, ಸತೀಶ್ ಮಧ್ಯಸ್ಥ ಮರವಂತೆ, ಜಯರಾಮ ನೀಲಾವರ, ಸಂತೋಷ್ ಶೆಟ್ಟಿ ಹಿರಿಯಡ್ಕ, ರಂಗೋತ್ಸದ ಸಂಯೋಜಕಿ ಪ್ರಾದ್ಯಪಕಿ ಅರ್ಚನಾ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.
ಈ ರಂಗೋತ್ಸವ 19 ಕ್ಕೆ ಮಂಗಳೂರು ವಿ.ವಿ. ಮಟ್ಟದ ವ್ಯಾಪ್ತಿಯ ಸುಮಾರು 25 ಕಾಲೇಜಿನ ತಂಡಗಳು ಭಾಗವಹಿಸಿದ್ದು ವಿವಿಧ ರಂಗ ಕಲೆಗಳಾದ ಏಕಾಂಕ ನಾಟಕ, ಕಿರು ಪ್ರಹಸನ, ಮೂಕಾಭಿನಯ, ಅನುಕರಣೆ (ಮಿಮಿಕ್ರಿ) ಸ್ಪರ್ದೆಗಳು ಎರಡು ದಿನಗಳ ತನಕ ನಡೆಯುವುವು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕ ಅಧಿಕಾರಿ ಪೊ| ರಾಮಚಂದ್ರ ಸ್ವಾಗತಿಸಿ, ಉಪನ್ಯಾಸಕಿ ಸುಮಲತಾ ವಂದಿಸಿದರು. ವಿದ್ಯಾರ್ಥಿನಿಯವರಾದ ಗೀತಾ, ಚೇತನಾ, ದೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಪ್ರಾರ್ಥನೆಯನ್ನು ಪಾವನ ಮತ್ತು ತಂಡ ಹಾಡಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕೀರ್ತಿ ನಡೆಸಿಕೊಟ್ಟರು.