ಭಂಡಾರ್‍ಕಾರ್ಸ್ ಆಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ -“ಮಾನವ ಹಕ್ಕುಗಳ – ಪಕ್ಷಿ ನೋಟ”

JANANUDI NETWORK 

ಭಂಡಾರ್‍ಕಾರ್ಸ್ ಆಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ -“ಮಾನವ ಹಕ್ಕುಗಳ – ಪಕ್ಷಿ ನೋಟ”


ಕುಂದಾಪುರ; ದಿನಾಂಕ 31ಭಂಡಾರ್‍ಕಾರ್ಸ್ ಕಾಲೇಜಿನ ಮಾನವ ಹಕ್ಕುಗಳ ಕೋಶ, ಮಾನವಿಕ ಸಂಘ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಮಾನವ ಹಕ್ಕುಗಳ – ಪಕ್ಷಿ ನೋಟ”ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉಡುಪಿಯ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಪ್ರೊ. ಎನ್. ನಿತ್ಯಾನಂದರವರು ಆಗಮಿಸಿದ್ದರು. ಮಾನವ ಹಕ್ಕು ಎಂದರೇನು? ಮತ್ತು ಯಾವ ಸಂದರ್ಭಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುವ ವಿಷಯಗಳನ್ನು ಉದಾಹರಣೆ ಸಹಿತ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶುಭಕರ ಆಚಾರ್ ಮತ್ತು ಪ್ರೊ. ಸತ್ಯನಾರಾಯಣರವರು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದಪ್ರೊ. ರಾಮಚಂದ್ರ, ಮಾನವಿಕ ಸಂಘದ ಸಂಯೋಜಕ ಶ್ರೀ ಮಂಜುನಾಥ, ಯೂತ್ ರೆಡ್‍ಕ್ರಾಸ್‍ನ ಸಂಯೋಜಕಿ ಕುಮಾರಿ ವಿದ್ಯಾರಾಣಿ ಉಪಸ್ಥಿತರಿದ್ದರು.
ಕುಮಾರಿ ಸಹನಾ ಸ್ವಾಗತಿಸಿ, ಶ್ರೀ ದಿನೇಶ್ ವಂದಿಸಿ, ಕುಮಾರಿ ಅನುಷಾ ನಿರೂಪಿಸಿದರು.