ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020”

JANANUDI.COM NETWORK

 

 

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020”

 

 

ಕುಂದಾಪುರ: ಡಿಸೆಂಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಪ್ರೌಢಶಾಲಾ ಮುಖ್ಯೋಧ್ಯಾಪಕರ ಸಂಘ, ಉಡುಪಿ ಮತ್ತು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020” ಒಂದು ದಿನದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಪಂಚಾಯತ್‍ನಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳಾದಡಾ. ನಾಗಭೂಷಣ ಉಡುಪ ಮಾತನಾಡಿ ಕೆಲವು ಘಟನೆಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತವೆ, ಅವು ನಮಗೆ ಪ್ರೇರಣಾಶಕ್ತಿಯಾಗಿ ಕೆಲಸ ಮಾಡುತ್ತವೆ. ನಮ್ಮ್ ಜೀವನದಲ್ಲಿ ಬರುವ ನಮ್ಮ ಶಿಕ್ಷಕರು, ಮಾರ್ಗದರ್ಶಕರು ನಮಗೆ ಒಳ್ಳೆಯ ಮಾರ್ಗದರ್ಶನವನ್ನು ತೋರಿಸಿ ಒಳ್ಳೆಯ ದಾರಿಯನ್ನು ತೋರಿಸಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.ಹಾಗೆ ಕೆಲವರ ವೃತ್ತಿಜೀವನದಲ್ಲಿ ಮತ್ತು ನಿತ್ಯದ ಬದುಕಿನಲ್ಲಿ ಬರುವ ವ್ಯಕ್ತಿಗಳು ಮತ್ತ ಸಂದರ್ಭಗಳು ನಮ್ಮ್ಮ ಒಳ್ಳೆಯ ದಾರಿಗೆ ಬೆಳಕಾಗಿ ನಿಲ್ಲುತ್ತವೆ ಎಂದು ಕೆಲವು ಘಟನೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕಾ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಅಶೋಕ್ ಕಾಮತ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮತ್ತು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಸರೋಜಿನಿ ಮಧುಸೂzನ ಕುಶೆ ಸರಕಾರಿ ಪ್ರೌಢಶಾಲೆ, ವಡೇರಹೋಬಳಿ ಇಲ್ಲಿನ ಮುಖ್ಯೋಧ್ಯಾಪಕರಾದ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸರಕಾರಿ ಪ್ರೌಢಶಾಲೆ ಬಸ್ರೂರು ಇಲ್ಲಿನ ಮುಖ್ಯ ಶಿಕ್ಷಕರಾದ ಜ್ಯೋತಿ. ಬಿ ಕಾರ್ಯಕ್ರಮ ನಿರ್ವಹಿಸಿದರು. ಕುಂದಾಪುರ ವಲಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಮತ್ತು ಸರೋಜಿನಿ ಮಧುಸೂzನ ಕುಶೆ ಸರಕಾರಿ ಪ್ರೌಢಶಾಲೆ, ವಡೇರಹೋಬಳಿ ಇಲ್ಲಿನ ಸಹಶಿಕ್ಷಕರಾದ ಚೆನ್ನಯ್ಯ ಯು. ಅವರು ವಂದಿಸಿದರು. ಸರೋಜಿನಿ ಮಧುಸೂzನ ಕುಶೆ ಸರಕಾರಿ ಪ್ರೌಢಶಾಲೆ, ವಡೇರಹೋಬಳಿ ಇಲ್ಲಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹೇಳಿದರು.