JANANUDI.COM NETWORK
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕೇರಳದ ಪ್ರಸಿದ್ಧ ಒಟ್ಟನ್ ತುಲ್ಲೆಲ್ ಕಲಾಪ್ರಕಾರದ ಪ್ರಸ್ತುತಿ ಕಾರ್ಯಕ್ರಮ
ಕುಂದಾಪುರ; ಸೆಪ್ಟೆಂಬರ್ 14ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸ್ಪಿಕ್ ಮೆಕೆ ಕಾರ್ಯಕ್ರಮದ ಪ್ರಯುಕ್ತ ಕೇರಳದ ಪ್ರಸಿದ್ಧ ಒಟ್ಟನ್ ತುಲ್ಲೆಲ್ ಕಲಾಪ್ರಕಾರದ ಪ್ರಸ್ತುತಿ ಕಾರ್ಯಕ್ರಮ ನಡೆಯಿತು.
ಕೇರಳದ ಕಲೆ ಮತ್ತು ಸಾಂಸ್ಕøತಿಕ ವಿಶ್ವವಿದ್ಯಾಲಯದ ತುಲ್ಲೆಲ್ ವಿಬಾಗದ ಮುಖ್ಯಸ್ಥರಾದ ಕಲಾಮಂಡಲಮ್ ಮೋಹನಕೃಷ್ಣನ್ ಅವರು ಒಟ್ಟನ್ ತುಲ್ಲೆಲ್ ಕಲಾಪ್ರಕಾರವನ್ನು ಪ್ರಸ್ತುತಪಡಿಸಿದರು.
ಅವರೊಂದಿಗೆ ಹಾಡುಗಾರಿಕೆಯಲ್ಲಿ ಕಲಾಮಂಡಲಮ್ ಸುರೇಶ್ ಮತ್ತು ಮೃದಂಗದಲ್ಲಿ ರಾಜೀವ ಅವರು ಸಹಕರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮತ್ತು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.