ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ರಂಗಭೂಮಿ ಕಲಾಸ್ಪರ್ಧೆ – ಮಂಗಳೂರು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು ಇವರ ಆಶ್ರಯದಲ್ಲಿ

JANANUDI NETWORK
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ರಂಗಭೂಮಿ ಕಲಾಸ್ಪರ್ಧೆ
ಮಂಗಳೂರು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು ಇವರ ಆಶ್ರಯದಲ್ಲಿ


ಕುಂದಾಪುರ, ಜು.18: ‘ಮಂಗಳೂರು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು ಇವರ ಆಶ್ರಯದಲ್ಲಿ ಭಂಡಾರ್ಕಾರ್ಸ್ ಆಟ್ರ್ಸ್ ಮತ್ತು ಸಾಯನ್ಸ್ ಕಾಲೇಜಿನಲ್ಲಿ ಅಗೋಸ್ತ್ 19 ರಿಂದ 20 ರ ತನಕ 2019 -20ನೇ ಸಾಲಿನ ಅಂತರ್ ಕಾಲೇಜು ರಂಗಭೂಮಿ ಕಲಾ ಸ್ಪರ್ಧೆ ನಡೆಯಲಿದೆ’ ಎಂದು ಭಂಡಾರ್ಕಾರ್ಸ್ ಆಟ್ರ್ಸ್ ಮತ್ತು ಸಾಯನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಎನ್.ಪಿ. ನಾರಯಣ ಶೆಟ್ಟಿ ಇವರು ಕಾಲೇಜಿನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
‘ರಂಗಭೂಮಿ ಕಲಾಸ್ಪರ್ಧೆ ಎರಡು ದಿನ ನಡೆಯಲಿದ್ದು, ಈ ಕಲಾ ಸ್ಫರ್ಧೆಯಲ್ಲಿ ಏಕಾಂಕ ನಾಟಕ, ಮೂಕಾಭಿನಯ, ಪ್ರಹಸನ (ಕಿರು ನಾಟಕ) ಮಿಮಿಕ್ರಿ (ಅನುಕರಣೆ) ವಿಭಾಗಳು ಇದ್ದು, ವಿಶ್ವ ವಿದ್ಯಾಲಯ ಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ನಡೆಯುವುದು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಂಗಳೂರು, ಉಡುಪಿ ಮತ್ತು ಕೂರ್ಗ್ ಜಿಲ್ಲೆಯ ಕಾಲೇಜುಗಳು ಇದ್ದು ಒಟ್ಟು 22 ಕ್ಕೂ ಹೆಚ್ಚು ಕಾಲೇಜುಳು ಇವೆ. ಸುಮಾರು 40 ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ನೀರಿಕ್ಷೆಯನ್ನು ನಾವು ಇಟ್ಟು ಕೊಂಡಿದ್ದೆವೆ. ಈ ವಿಶ್ವವಿದ್ಯಾಲಯದ ಮಟ್ಟದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನಗಳು ದೊರಕಲಿದ್ದು, ಅವರುಗಳು ಸೌತ್ ಝೋನ್ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅಹರ್ತೆ ಪಡೆದುಕೊಳ್ಳುತ್ತಾರೆ, ಅಲ್ಲಿ ಗೆದ್ದವರು ರಾಷ್ಟ್ರ ಮಟ್ಟದಲ್ಲಿ ನವದೆಹಲಿಯಲ್ಲಿ ನಡೆಯುವ ಸ್ಪರ್ದೆಗೆ ಅಹರ್ತೆ ಗಳಿಸುತ್ತಾರೆ, ಈ ರಂಗ ಭೂಮಿ ಸ್ಪರ್ಧೆ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು ಇವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಈ ಸ್ಪರ್ಧೆ ನಡೆಸಲು ನಮ್ಮ ಕಾಲೇಜನ್ನು ಆಯ್ಕೆ ಮಾಡಿದ್ದು ನಮಗೆ ಹೆಮ್ಮೆಯ ವಿಚಾರವಾಗಿದೆ, ನಮ್ಮ ಕಾಲೇಜಿನಲ್ಲಿ ರಂಗೋತ್ಸವಗಳು ಯಶಸ್ವಿಯಾಗಿ ನಡೆಯುತ್ತವೆ ಆದರಿಂದ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ವಿದ್ಯಾರ್ಥಿ ರಂಗಭೂಮಿಯ ಕಲಾ ಸ್ಪರ್ಧೆಯನ್ನು ರಂಗೋತ್ಸವನ್ನು ನಾವು ಉತ್ತಮವಾಗಿ ನಡೆಸುತ್ತೇವೆ ಎಂಬುದು ನಮ್ಮ ವಿಶ್ವಾಸವಿದೆ’ ಎಂದು ಅವರು ಹೇಳಿದರು.
ಪ್ರಾದ್ಯಾಪಕಿ, ಫೈನ್ ಆಟ್ರ್ಸ್ ಕೋ ಒರ್ಡಿನೇಟರ್, ಎಚ್. ಒ.ಡಿ. ಡಿಪಾರ್ಟ್‍ಮೆಂಟ್ ಆಫ್ ಬ್ಯುಸಿನೆನ್ಸ್ ಅಡ್ಮಿಸ್ಟ್ರೇಷನ್ ಅರ್ಚನಾ ಅರವಿಂದ್ ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದು, ‘ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳು ಅಗಸ್ಟ್ 10 ರ ಒಳಗೆ ನೊಂದಾವಣೆಯನ್ನು ಮಾಡಿಕೊಳ್ಳ ಬೇಕು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9686917625 ಮೊಬೈಲ್ ಸಂಖ್ಯೆಗೆ ಸಂಪರ್ಕಿಸ ಬಹುದೆಂದು ತಿಳಿಸಿ ಧನ್ಯವಾದಗಳನ್ನು ಅರ್ಪಿಸಿದರು. ಪ್ರಾದ್ಯಪಕಿ, ಎಚ್.ಒ.ಡಿ. ಡಿಪಾರ್ಟ್‍ಮೆಂಟ್ ಆಫ್ ಜನರ್ಲಿಸಮ್ ಸುಮಲತಾ ಸುರೇಶ್ ಪ್ರಸ್ತಾವಣೆ ಗೈದು ಸ್ವಾಗತವನ್ನು ಕೋರಿದರು.


ಹಾಗೇಯೆ ಪ್ರಾಂಶುಪಾಲರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಮಳೆ ನೀರಿನ ಕೊಯ್ಲು ಪ್ರದೇಶ ಮತ್ತು ಟ್ಯಾಂಕಿಗಳನ್ನು ಪತ್ರಕರ್ತರಿಗೆ ತೋರಿಸಿ ಮಾಹಿತಿ ನೀಡಿದರು