ಭಂಡಾರ್ಕಾರ್ಸ್ ಐಕ್ಯೂಎಸಿ, ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳು – ರಾಷ್ಟ್ರೀಯ ವೆಬಿನಾರ್

JANANUDI.COM NETWORK

ಕುಂದಾಪುರ: ನವೆಂಬರ 11ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ, ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳು” ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಇಲ್ಲಿನ ಸಹಪ್ರಾಧ್ಯಾಪಕರಾದ ಕವಿತಾ ನಾಗಸಂಪಿಗೆ ಅವರು “ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳು” ಕುರಿತು ಮಾತನಾಡಿ ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳಿಗೆ ತೆರೆದುಕೊಳ್ಳುವುದಕ್ಕೆ ಮುನ್ನ ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿಯನ್ನು ಮಾಡಲು ಇಚ್ಚಿಸುವವರಿಗೆ ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಸೃಜನಶೀಲ ಕೌಶಲಗಳ ಕುರಿತು ತಿಳಿಸಿದರು. ಆನ್‍ಲೈನ್ ಮಾಧ್ಯಮದಲ್ಲಿ ಬರುವಂತಹ ಕ್ಷೇತ್ರಗಳನ್ನು ಮತ್ತು ಅಲ್ಲಿ ಇರುವಂತಹ ವೃತ್ತಿಗಳನ್ನು ಕುರಿತು ತಿಳಿಸಿದರು. ಬೇರೆ ಬೇರೆ ಕ್ಷೇತ್ರಗಳ ವೃತ್ತಿಗೆ ಪೂರಕವಾಗಿ ಬೇಕಾಗುವಂತಹ ಜ್ಞಾನವನ್ನು ಯಾವ ರೀತಿ ಬೆಳೆÉಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಐಕ್ಯೂಎಸಿ ಸಂಯೋಜಕರಾದ ಪ್ರೊ. ಶಶಿಕಾಂತ್ ಹತ್ವಾರ್ ಮತ್ತು ಐಟಿ ತಂಡದ ಸಂಯೋಜಕರಾದ ಡಾ.ನಟರಾಜ್ ಎಂ.ಬಿ ಉಪಸ್ಥಿತರಿದ್ದರು.
ಐಟಿ ತಂಡದ ಸದಸ್ಯರಾದ ಅಮರ್ ಸಿಕ್ವೆರಾ ಮತ್ತು ಶಂಕರನಾರಾಯಣ ಉಪಾಧ್ಯಾಯ ತಾಂತ್ರಿಕವಾಗಿ ಸಹಕರಿಸಿದರು.
ಐಟಿ ತಂಡದ ಸದಸ್ಯರಾದ ವಿಕ್ರಮ್ ಎನ್.ಬಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ವೆಬಿನಾರ್ ಸಂಯೋಜಕರಾದ ಸುಮಲತಾ ವಂದಿಸಿದರು.