ಭಂಡಾರ್ಕಾರ್ಸ್‍ಕಾಲೇಜು: ಹಿಂದಿ ವಿಭಾಗದಿಂದ್ಲ “ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಬಾರತೀಯ ಭಾಷೆಗಳು”ಕುರಿತುರಾಷ್ಟ್ರೀಯ ವೆಬಿನಾರ್

JANANUDI.COM NETWORK

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನ ಹಿಂದಿ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘ (ವಿಹಾಸ್) ಇವರ ಸಂಯುಕ್ತಆಶ್ರಯದಲ್ಲಿ“ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಬಾರತೀಯ ಭಾಷೆಗಳು” ಎಂಬ ವಿಷಯದಕುರಿತುಒಂದು ದಿನದರಾಷ್ಟ್ರೀಯ ವೆಬಿನಾರ್ ನಡೆಯಿತು.
ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಸುಬ್ರಮಣ್ಯಯಡಪಡಿತಾರವರು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಭಾಗವಹಿಸಿರುವ, ಕಾಲೇಜು ಮತ್ತುತಾಂತ್ರಿಕ ಶಿಕ್ಷಣ ವಿಭಾಗ, ಕರ್ನಾಟಕ ಸರಕಾರಇದರ ವಿಶೇಷ ಅಧಿಕಾರಿಗಳಾಗಿರುವ ಪ್ರೊ. ಎ. ನಾರಾಯಣ ಪ್ರಸಾದ್‍ರವರು ವರ್ತಮಾನದಲ್ಲಿ ಶಿಕ್ಷಣದಲ್ಲಿ ಬದಲಾವಣೆ ಮತ್ತುಆನ್‍ಲೈನ್ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯ, ಆಂದ್ರಪ್ರದೇಶಇದರ ಕುಲಪತಿಗಳಾಗಿರುವ ಪ್ರೊ. ಟಿ.ವಿ.ಕಟ್ಟಿಮನಿಯವರುವೆಬಿನಾರ್‍ನ ದಿಕ್ಸೂಚಿ ಭಾಷಣ ಮಾಡಿದರು.
ಅವರುಮಾತನಾಡಿ ಮಾತೃ ಭಾಷೆಮತ್ತು ಭಾರತೀಯ ಭಾಷೆಗಳ ಮಹತ್ವ ವರ್ತಮಾನದಲ್ಲಿರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನ ಹಾಗೂ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಉದ್ದೇಶವನ್ನು ಸವಿಸ್ತಾರವಾಗಿ ತಿಳಿಸಿದರು.
ಈ ರಾಷ್ಟ್ರೀಯವೆಬಿನಾರ್‍ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಭಾರತೀಯ ಬಾಷೆಗಳ ಸಂವರ್ಧಕರು, ಹಿರಿಯ ಪತ್ರಕರ್ತರು ಮತ್ತುಎಸ್.ಟಿ.ಜಿ ವಿಶ್ವವಿದ್ಯಾಲಯ ನವದೆಹಲಿಯ ಪ್ರೊ.ರಾಹುಲ್‍ದೇವ್‍ಅವರು ಮಾತನಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು ಲೀಲಾಜಾಲವಾಗಿ ಸರಳವಾಗಿ ಅಭ್ಯಾಸ ಮಾಡುವುದಕ್ಕೆಅವಕಾಶವಿದೆ. ಮಕ್ಕಳ ಸಮಗ್ರ ವಿಕಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮಇಷ್ಟದಭಾಷಾ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸವನ್ನು ಪಡೆಯಬಹುದಾಗಿದೆ. ರಾಷ್ಟ್ರೀಯ ಶಿಕ್ಷಣ ಸಂಹಿತೆಯ ಪರಿಚಯ ಮಾಡಿ, ಭಾರತೀಯ ಭಾಷೆಗಳ ಕುರಿತು ಸಂರಕ್ಷಣೆಯ ಮಾರ್ಗಗಳನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದಎನ್.ಪಿ.ನಾರಾಯಣ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾಲಯ ಹಿಂದಿಅಧ್ಯಾಪಕರಸಂಘ(ವಿಹಾಸ್)ಇದರಅಧ್ಯಕ್ಷರಾದ ಪಾಂಪೈ ಕಾಲೇಜು, ಐಕಳ ಇಲ್ಲಿನ ಹಿಂದಿ ವಿಭಾಗ ಮುಖ್ಯಸ್ಥರಾಗಿರುವ ಡಾ.ಎಸ್.ಎ.ಮಂಜುನಾಥಕಾರ್ಯಕ್ರಮವನ್ನು ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಕಾಲೇಜಿನ ಹಿಂದಿ ಸ್ನಾತಕೋತ್ತರಕೇಂದ್ರದ ಹಿಂದಿ ಮುಖ್ಯಸ್ಥರಾಗಿರುವಡಾ.ಸುಮಾ.ಟಿ.ಆರ್, ಮಂಗಳೂರಿನ ಕೆನರಾಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥರಾಗಿರುವಡಾ.ಕಲ್ಪನಾ ಪ್ರಭು, ಸುಳ್ಯದ ಸರಕಾರಿಕಾಲೇಜಿನ ಹಿಂದಿ ಪ್ರಾಧ್ಯಾಪಕರಾದ ಶ್ರೀ ರಾಮಕೃಷ್ಣರವರು ಅತಿಥಿಗಳನ್ನು ಪರಿಚಯಿಸಿದರು.
ಭಂಡಾರ್ಕಾರ್ಸ್‍ಕಾಲೇಜಿನಹಿಂದಿ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಪ್ರಫುಲ್ಲಾ.ಬಿ ಅವರು ವಂದಿಸಿದರು. ಕಾಲೇಜಿನಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿರುವರಾಮಚಂದ್ರಆಚಾರ್‍ತಾಂತ್ರಿಕ ಸಹಾಯ ನೀಡಿದರು. ವಿದ್ಯಾರ್ಥಿನಿ ನೇಹಾ ಹೊಳ್ಳ ಪ್ರಾರ್ಥಿಸಿದರು.