JANANUDI.COM NETWORK
ಭಂಡಾರ್ಕಾರ್ಸ್‍ಕಾಲೇಜು “ರಂಗೋತ್ಸವ 2019” ಸ್ಪರ್ಧೆಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ
ಕುಂದಾಪುರ: ಆಗಸ್ಟ್ 19 ಮತ್ತು 20ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮ ಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದರಂಗಭೂಮಿ ಸ್ಪರ್ಧೆ“ರಂಗೋತ್ಸವ 2019”ರಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. ವಿವಿಧ ರಂಗಕಲೆಗಳಾದ ಏಕಾಂಕ ನಾಟಕ, ಕಿರುಪ್ರಹಸನ, ಮೂಕಾಭಿನಯ, ಅನುಕರಣೆ ಸ್ಪರ್ಧೆಗಳು ನಡೆಯಿತು.
ಸ್ಪರ್ಧೆಗಳ ಫಲಿತಾಂಶ :ಅನುಕರಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ –ಶ್ರೀ ರಾಮಪ್ರಥಮದರ್ಜೆಕಾಲೇಜು, ಕಲ್ಲಡ್ಕ, ದ್ವಿತೀಯ ಸ್ಥಾನ –ಆಳ್ವಾಸ್ ಕಾಲೇಜು ಮೂಡಬಿದ್ರೆ, ತೃತೀಯ ಸ್ಥಾನ-,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ
ಮೂಕಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಆಳ್ವಾಸ್ ಕಾಲೇಜು ಮೂಡಬಿದ್ರೆ, ದ್ವಿತೀಯ ಸ್ಥಾನ –ಮಹಾತ್ಮಗಾಂಧಿ ಸ್ಮಾರಕಕಾಲೇಜು, ಉಡುಪಿ, ತೃತೀಯ ಸ್ಥಾನ-ತ್ರಿಶಾ ವಿದ್ಯಾಕಾಲೇಜ್‍ಆಫ್‍ಕಾಮರ್ಸ್,ಉಡುಪಿ
ಪ್ರಹಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ -ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ,ದ್ವಿತೀಯ ಸ್ಥಾನ –ಆಳ್ವಾಸ್ ಕಾಲೇಜು ಮೂಡಬಿದ್ರೆ, ತೃತೀಯ ಸ್ಥಾನ-ಮಹಾತ್ಮಗಾಂಧಿ ಸ್ಮಾರಕಕಾಲೇಜು, ಉಡುಪಿ,
ಏಕಾಂಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ- ಮಹಾತ್ಮಗಾಂಧಿ ಸ್ಮಾರಕಕಾಲೇಜು, ಉಡುಪಿ,ದ್ವಿತೀಯ ಸ್ಥಾನ –-,ಶ್ರೀ ಧರ್ಮಸ್ಥಳ ಮಂಜುನಾಥೇಶ್ವ ಕಾಲೇಜು, ಉಜಿರೆ,ತೃತೀಯ ಸ್ಥಾನ-ಆಳ್ವಾಸ್ ಕಾಲೇಜು ಮೂಡಬಿದ್ರೆ ಪಡೆಯಿತು.
ಬಹುಮಾನ ವಿತರಿಸಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಇದರ ನಿದೇಶಕರಾದ ಪ್ರೊ.ಬಾರ್ಕೂರು ಉದಯ ಮಾತನಾಡಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಂಗಭೂಮಿಯ ಬಗ್ಗೆ ಪಠ್ಯಕ್ರಮದಲಿ ್ಲಅಧ್ಯಯನ ಮಾಡುವುದಕ್ಕೆ ಪೂರಕವಾಗಿ ವಿಶ್ವವಿದ್ಯಾನಿಲಯದ ಅಕಾಡೆಮಿಕ್‍ಕೌನ್ಸಿಲ್‍ನಲ್ಲಿ ವಿಷಯ ಮಂಡಿಸುತ್ತೇನೆ. ವಿದ್ಯಾರ್ಥಿ ಸ್ನೇಹಿ ಅಧ್ಯಯನವನ್ನು ಕಾರ್ಯರೂಪಕ್ಕೆತರಲು ಪ್ರಯತ್ನಸುತ್ತೇನೆ ಎಂದು ಹೇಳಿದರು.
ರಂಗೋತ್ಸವದಕುರಿತು ನಿರ್ಣಾಯಕರಾಗಿ ಆಗಮಿಸಿದ್ದ ಬಾಸುಮ ಕೊಡಗು ಮತ್ತು ಸತೋಶ ಮರವಂತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿರ್ಣಾಯಕರಾಗಿ ಆಗಮಿಸಿದ್ದ ಪೂರ್ಣಿಮಾ ಸುರೇಶ್, ಸಂತೋಷ್ ಶೆಟ್ಟಿ ಹಿರಿಯಡ್ಕ, ಪ್ರವೀಣ ಕೊಡವೂರು, ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ರಂಗೋತ್ಸವ ಕಾರ್ಯಕ್ರಮ ಸಂಯೋಜಕರಾದ ಅರ್ಚನಾಅರವಿಂದ್ ಉಪಸ್ಥಿತರಿದ್ದರು.
ರಂಗೋತ್ಸವದಲ್ಲಿ ಭಾಗವಹಿಸಿದ್ದ ವಿವಿಧಕಾಲೇಜಿನ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಉಪನ್ಯಾಸಕ ಪ್ರಶಾಂತ ಹೆಗ್ಡೆ ವಂದಿಸಿದರು. ವಿದ್ಯಾರ್ಥಿನಿ ಕೀರ್ತಿಎಸ್‍ಕಾರ್ಯಕ್ರಮ ನಿರ್ವಹಿಸಿದರು.