ಬೈಂದೂರು: ಸಂಭ್ರಮದ ತೆರಾಲಿ ಹಬ್ಬ ಆಚರಣೆ

ವರದಿ:ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು

 

ಬೈಂದೂರು: ಸಂಭ್ರಮದ ತೆರಾಲಿ ಹಬ್ಬ ಆಚರಣೆ

 



ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು
ಬಲಿಪೂಜೆಯಲ್ಲಿ ಬೈಂದೂರು ಚರ್ಚಿನಲ್ಲಿ ಈ ಹಿಂದೆ ಗುರುಗಳಾಗಿ ಸೆವೆ ಸಲ್ಲಿಸಿದ ಹಾಗೂ ಪ್ರಸ್ತುತ ಶಂಕರಪುರ ಪಾಂಗ್ಳಾ ಚರ್ಚಿನ ಧರ್ಮಗುರುಗಳಾದ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ಬಲಿಪೂಜೆಯ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ನಾವುಗಳು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿದಲ್ಲಿ ದೇವರು ನಮಗೆ ನಮ್ಮ ಜೀವನದ ಕಷ್ಟ-ಸಂಕಷ್ಟಗಳಿಗೆ ಸದಾ ರಕ್ಷಾ-ಕವಚನಾಗಿರುತ್ತಾನೆ ಎಂದು ಸಂದೇಶವನ್ನು ನೀಡಿದರು.
ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಇ ೨ ದಿನದ ಹಬ್ಬದ ಆಚರಣೆಯಲ್ಲಿ ಉಡುಪಿಯ ರೆ. ಫಾ. ಚೇತನ್ ಲೋಬೊ, ಕಾರ್ಕಳ ಆತ್ತೂರು ಬಸಿಲಕಾದ ನಿರ್ದೇಶಕ ರೆ. ಫಾ. ಜಾರ್ಜ್ ಡಿ’ಸೋಜಾ, ಕುಂದಾಪುರದ ಮುಖ್ಯ ಧರ್ಮಗುರುಗಳಾದ ರೆ.ಫಾ. ಸ್ಟ್ಯಾನಿ ತಾವ್ರೊ, ಉಡುಪಿ ಧರ್ಮಪ್ರಾಂತ್ಯದ ಸಹಸ್ರಾರು ಧರ್ಮಗುರುಗಳು, ಚರ್ಚಿನ ಪಾಲನ ಮಂಡಳಿಯ ಉಪಾಧಕ್ಷ ಸ್ಟ್ಯಾನಿ ಡಾಯಸ್, ಕಾರ್ಯದರ್ಶಿ ಅನಿತಾ ನಜ್ರೆತ್, ವಿವಿಧ ಆಯೋಗದ ಸಂಯೋಜಕಿ ಮೇಬಲ್ ನಜ್ರೆತ್ ಉಪಸ್ಥಿತರಿದ್ದರು.
ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊರವರು ಚರ್ಚಿನ ಮಹೋತ್ಸವಕ್ಕೆ ಬೆಂಬಲ ನೀಡಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.