ವರದಿ: ವಾಲ್ಟರ್ ಮೊಂತೇರೊ
ಬೆಳ್ಮಣ್ಣು : ಮತದಾನ ಜಾಗೃತಿ ಅಭಿಯಾನ
ಮತದಾನ ಅತ್ಯಂತ ಪವಿತ್ರ ಹಕ್ಕಾಗಿದೆ. ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದ ಅರಿವು ಮೂಡಿಸಲು ನಾವೆಲ್ಲ ಜಾಗೃತಿ ಮೂಡಿಸಬೇಕಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಿ ನಿಮ್ಮ ಹಕ್ಕನ್ನು ನಿರ್ಭಿತರಾಗಿ ಚಲಾಯಿಸಬೇಕು ಎಂದು ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿÀ ಮಾತನಾಡಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಬೆಳ್ಮಣ್ಣು ಜೇಸಿಐ, ಯುವ ಜೇಸಿ ವಿಭಾಗ, ಜೇಸಿರೇಟ್ ವಿಭಾಗ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಮತದಾನ ಜಾಗೃತಿ ಕುರಿತು ಕರಪತ್ರ ಬಿಡುಗಡೆ, ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಜೇಸಿ ವಲಯಾಧಿಕಾರಿ ಸುಭಾಸ್ ಕುಮಾರ್ ಮತದಾನದ ಕರಪತ್ರ ಬಿಡುಗಡೆ ಮಾಡಿದರು. ಬೆಳ್ಮಣ್ಣು ಯುವಜೇಸಿ ವಿಭಾಗದ ಅಧ್ಯಕ್ಷ ದಿಕ್ಷೀತ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೇಸಿರೇಟ್ ಅಧ್ಯಕ್ಷೆ ಪ್ರತಿಭಾ ರಾವ್, ಯುವಜೇಸಿ ವಿಭಾಗದ ಕಾರ್ಯದರ್ಶಿ ಸಂದೀಪ್ ಕುಮಾರ್ ಹಾಗೂ ಬೆಳ್ಮಣ್ಣು ಜೇಸಿಐನ ಹಾಗೂ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸದಸ್ಯರುಗಳು ಉಪಸ್ಥಿತಿತರಿದ್ದರು.