ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ಣು:ರೋಟರಿ ಕ್ಲಬ್ ಬೆಳ್ಮಣ್ ಒಂದಲ್ಲ ಒಂದು ವಿಶೇಷ ಸಾರ್ವಜನಿಕ ಕಾರ್ಯಕ್ರಮದಿಂದ ಕ್ಲಬ್ ಗುರುತಿಸಿಕೊಂಡಿದ್ದು, ಸಾರ್ವಜನಿಕ ರಂಗಮಂದಿರ, ಬಾಲವನ, ಸುಮಾರು ಲಕ್ಷದಲ್ಲಿ ಸುಸಜ್ಜಿತ ಪಾರ್ಕಿಂಗ್, ಸುಮಾರು ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ರುದ್ರಭೂಮಿ, ರಸ್ತೆ ವಿಭಜಕದ ಅಳವಡಿಕೆ ಮುಂತಾದ ಶಾಶ್ವತ ಯೋಜನೆಯೊಂದಿಗೆ ಮನೆಮಾತಾಗಿದೆ.
2020- 21 ಸಾಲಿನ ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋಟರಿಸುಭಾಷ್ ಕುಮಾರ್ ರವರ ನೇತೃತ್ವದಲ್ಲಿ ಕೃಷಿ ಕ್ರಾಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಸುಮಾರು ಎಕರೆಗಟ್ಟಲೆ 20 ವರ್ಷಕ್ಕೂ ಮಿಕ್ಕಿ ಹಡಿಲು ಬಿದ್ದಭೂಮಿಯನ್ನು ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕೃಷಿಭೂಮಿಯನ್ನು ಪುನಶ್ಚೇತನಗೊಳಿಸಿ ಈಗಲೇ ಬಿತ್ತನೆ ಕಾರ್ಯಕ್ಕೆ ಕೈ ಹಾಕಿದ್ದಾರೆ.ಇದರಿಂದ ಬಂದಂತಹ ಲಾಭಾಂಶವನ್ನು ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸಲು ಚಿಂತನೆ ಮಾಡಿದ್ದಾರೆ.ಇವರಿಗೆ ಇರುವ ಕೃಷಿಯ ಆಸಕ್ತಿಯನ್ನು ಕಂಡು ಪರಿಸರದ ಜನರು ಕೂಡ ಕೈ ಜೋಡಿಸಿದ್ದಾರೆ.ರೋಟರಿ ಅಧ್ಯಕ್ಷರಾದ ಸುಭಾಷ್ ಕುಮಾರ್ ಅವರೇಸ್ವತಃ ಹಾರೆಯ ಹಿಡಿದು ಕೃಷಿಯಲ್ಲಿ ತನ್ನನ್ನು ಮತ್ತು ಕಾರ್ಯದರ್ಶಿಯಾದ¤ತಹ ರೋ.ರವಿರಾಜ್ ಶೆಟ್ಟಿ ಇವರು ಮತ್ತು ಸರ್ವ ಸದಸ್ಯರನ್ನು ತೊಡಗಿಸಿಕೊಂಡು ಕೃಷಿಯ ಕ್ರಾಂತಿ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.

