ಬೆಂಗಳೂರಿನ ಲೇಕ್‍ಸೈಡ್ ರೋಟರಿ, ಕೋಲಾರ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ  ಅರೆವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಆರೋಗ್ಯ ಇಲಾಖೆಗೆ ಸಮರ್ಪಣೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ:- ಬೆಂಗಳೂರಿನ ಲೇಕ್‍ಸೈಡ್ ರೋಟರಿ ಸಂಸ್ಥೆ ಹಾಗೂ ಕೋಲಾರ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ ಸುಮಾರು 80 ಸಾವಿರ ಮೌಲ್ಯದ ಅರೆವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಆರೋಗ್ಯ ಇಲಾಖೆಗೆ ಸಮರ್ಪಿಸಲಾಯಿತು.
ನಗರ ಸಮೀಪದಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 50 ಪಿಪಿಇ ಕಿಟ್, 600 ನೈಟ್‍ರಯಲ್ ಗ್ಲೌಸ್, 600 ತ್ರಿಪ್ಲೇಯರ್ ಮಾಸ್ಕ್, 100 ಪೇಸ್‍ಶೀಲ್ಡ್, 2 ಡಿಜಿಟ¯ ïಥರ್ಮೋಮೀಟರ್, 2 ಆಕ್ಸೀಮೀಟರ್ ಇತ್ಯಾದಿ ಸಲಕರಣೆಗಳನ್ನು ಜಿಲ್ಲಾಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್ ಅವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಲೇಕ್ ಸೈಡ್ ರೋಟರಿ ಸಂಸ್ಥೆಯ ಅಧ್ಯಕ್ಷೆ ರಿಚ್ ಅಗರ್‍ವಾಲ್, ಕಾರ್ಯದರ್ಶಿ ಪ್ರಸನ್ನ ಕುಮಾರಿ, ಕಮ್ಯುನಿಟಿ ಸರ್ವೀಸ್ ನಿರ್ದೇಶಕ ಕಾಶಿನಾಥ್ ಪ್ರಭು, ನಿರ್ದೇಶಕರಾದ ಸ್ನೇಹ, ಸುನೀಲ್ ಕಾಂಡ್, ಸುಪ್ರಿಯಾ ಕಾಂಡ್, ಕೋಲಾರ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಆರ್.ಸೋಮಶೇಖರ್ ಗೌಡ, ಕಾರ್ಯದರ್ಶಿ ಎಂ.ಎಸ್. ರವಿ, ಖಜಾಂಚಿ ಶಂಕರ್ ಪ್ರಸಾದ್, ನಿರ್ದೇಶಕಟಿ.ಎಸ್.ರಾಮಚಂದ್ರೇಗೌಡ, ನಿಕಟಪೂರ್ವ ಅಧ್ಯಕ್ಷ ರಾಜಶೇಖರ್, ರೋಟೋರಿಯನ್‍ಗಳಾದ ರಾಮನಾಥ್, ಮುರುಳಿಧರ ರೆಡ್ಡಿ, ಬಿ.ಶಿವಕುಮಾರ್, ಸಿ.ಜಿ.ಮುರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.