ಬೆಂಗಳೂರಿನಲ್ಲಿ ವಿಮಾನಗಳ ಏರ್ ಶೋ ಬದಲು ಕಾರುಗಳ ಫೈರ್ ಶೋ – 500 ಹೆಚ್ಚು ಕಾರುಗಳು ಬೆಂಕಿಯಲ್ಲಿ ಸುಟ್ಟು ಕರಕಲು – ಕಾರುಗಳಲಿದ್ದ ಅಮೂಲ್ಯ ದಾಖಲೆಗಳು ನಾಶ
ಬೆಂಗಳೂರು: ಫೆ.20: ರಾಜ್ಯದ ರಾಜಧಾನಿ ಬೆಂಗಳೂರಿನಲ ಯಲಹಂಕದಲ್ಲಿ ವರ್ಷಪ್ರತಿ ದೇಶಿಯ ಮತ್ತು ಅಂತರ್ ದೇಶಿಯ ವಿಮಾನಗಳ ಏರ್ ಶೋ ಪ್ರದರ್ಶನ ಗೊಳ್ಳುತ್ತದೆ. ಆದರೆ ಈ ವರ್ಷ ಏರ್ ಶೋ ಆರಂಭದ ಮುನ್ನಾ ದಿನವೇ ದೇಶೀಯ ಎರಡು ವಿಮಾನಗಳು ಡಿಕ್ಕಿಯಾಗಿ, ಎರಡು ವಿಮಾನಗಳು ಸುಟ್ಟು ಹೋಗಿದ್ದವು. ಅದರಲ್ಲಿ ಒಬ್ಬ ಫೈಲೆಟ್ ವಿಮಾನದಿಂದ ಪ್ಯಾರಾಚೂಟ್ ಕಟ್ಟಿಕೊಂಡು ಜಿಗಿಯುಯಾಗ ಆತನ ಪ್ಯಾರಾಚೂಟ್ ತೆರೆಯದೆ ಸಾವನ್ನಪ್ಪಿದ್ದ, ಅಂದರೆ ಆತನು ಧರಿಸಿದ ಪ್ಯಾರಚೂಟ್ ಹಾರಾಟದ ಮುನ್ನಾ ಪರೀಕ್ಷೆ ಮಾಡಲಿಲ್ಲವೆಂದು ಅನುಮಾನ ಕಾಡುತ್ತದೆ. ಇಲ್ಲಿ ನಿರ್ಲಕ್ಷ ಎದ್ದು ಕಾಣುತ್ತದೆ.
ಈಗ ಪುನಹ ಎರ್ ಶೋ ಮುಗಿಯಲು ಒಂದು ದಿವಸ ಇರುವಾಗ ಎರ್ ಶೋ ನೋಡಲು ಬಂದಿದ್ದ ಜನರು ವೈಮಾನಿಕ ಪ್ರದರ್ಶನದ ಡೊಮೆಸ್ಟಿಕ್ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಿದ್ದ 500 ಕ್ಕೂ ಬೆಂಕಿ ಹೊತ್ತಿಕೊಂಡು ಅಧಿಕ ಕಾರುಗಳು ಸುಟ್ಟು ಕರಕಲಾಗಿದೆವೆ. ಕಾರಿನ ಎಂಜಿನ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಒಂದು ಕಾರಿಗೆ ಹೊತ್ತಿಕೊಂಡ ಬೆಂಕಿ ಒಣ ಹುಲ್ಲಿನ ಕಾರಣ ಪಕ್ಕದ ಕಾರುಗಳಿಗೂ ವ್ಯಾಪಿಸಿದೆ ಎನ್ನಲಾಗಿದೆ. ಸುಮಾರು 10 ಅಗ್ನಿಶಾಮಕದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ಸಂಪೂರ್ಣ ನಂದಿಸಲಾಗಿದ್ದು, ವಿಮಾನಗಳ ಪ್ರದರ್ಶನ ಎಂದಿನಂತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಎನೇ ಆಗಲಿ ಬೆಂಕಿ ಈ ರೀತಿ ವ್ಯಾಪಿಸಲು ನಿಲಕ್ಷವೇ ಕಾರಣ ಎನ್ನ ಬಹುದು. ಕಾರುಗಳು ಪಾರ್ಕ್ ಮಾಡಿದ ಜಾಗ ಸೂಕ್ತವಾಗಿರಲಿಲ್ಲಾ. ಅಲ್ಲಿ ಒಣ ಹುಲ್ಲು ಬೆಳೆದು ನಿಂತಿತ್ತು. ಹತ್ತಿರದಲ್ಲೆ ಎರ್ ಶೋ ನೆಡೆಯುತಿತ್ತು ಅಂತಾ ಗೊತ್ತಿದ್ದು ಇಂತಹ ಒಣ ಹುಲ್ಲು ಅಪಾಯ ಎಂದು ಚಿಂತಿಸದಿದ್ದದ್ದು, ನಿಲಕ್ಷವೇ ಕಾರಣವಾಗಿದೆ, ವಿಮಾನಗಳು ಡಿಕ್ಕಿಯಾಗಿ ಅಥವ ಕೆಟ್ಟು ಹೋಗಿ ಈ ಹುಲ್ಲಿನ ಮೇಲೆ ಬಿದ್ದಿದ್ದರೂ ಕೂಡ ಈ ರೀತಿಯ ಅಪಾಯ ಆಗುವ ಸಾಧ್ಯತೆ ಇತ್ತು. ಹಾಗಾದರೆ ಈ ಒಣ ಹುಲ್ಲಿನಿಂದ ಇಂತ ಶೋ ನೆಡೆಯುವಾಗ ಅಪಾಯ ಇದೆಯೆಂದು ಕಾರಣಿ ಕರ್ತರು ಯಾಕೆ ಎಣಿಸಲಿಲ್ಲಾ.
ಸಾವು ನೋವುಗಳು ಆಗಲಿಲ್ಲವೆಂಬುದುನ್ನು ಬಿಟ್ಟರೆ, ಕಾರಿನ ಮಾಲೀಕರಿಗೆ ಬಹಳವಾದ ನಷ್ಟ ಉಂಟಾಗಿದೆ, ಇದ್ದಕಿದ್ದಂತೆ ಅವರು ಕಾರು ಕಳೆದುಕೊಂಡಿದ್ದಾರೆ. ಕೆಲವು ಕಾರುಗಳ ಪಯ್ಕ್ಕಿ ಒಂದು 50 ಲಕ್ಷಕ್ಕೂ ಅಧಿಕ ಬೆಲೆಯ ಕಾರುಗಳು ಇದ್ದವು. 10 ಲಕ್ಷದ ಕಾರುಗಳು ಇದ್ದವು, ಸುಮಾರು ೫೦೦ ಕಾರುಗಳು ಸುಟ್ಟು ಕರಕಲಾಗಿವೆ ಎಂದು ತೀಲಿದು ಬಂದಿದೆ. ಇದಲ್ಲದೆ ಕಾರಿನ ಮಾಲೀಕರು ತಮ್ಮ ಅಮೂಲ್ಯವಾದ ದಾಖಲೆಗಳನ್ನು ಕಳೆದುಕೊಂಡು ಮರುಗುತಿದ್ದಾರೆ, ಕೆಲವರು ವೀಸಾ ಇದ್ದಂದಂತಹ ಪಾಸಪೊರ್ಟ್, ಬ್ಯಾಂಕ್ ಕಾರ್ಡ್, ಮತ್ತಿತರ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಕೆವದರು ಸಾಲ ಸೋಲ ಮಾಡಿಕೊಂಡು ಕಾರು ಕೊಂಡವರು ಈ ಅಗ್ನಿ ದುರಂತದಲ್ಲಿ ಏಕಾಎಕಿ ಕಾರು ಕಳೆದುಕೊಂಡು ದುಖದಿಂದ ಕಂಗಲಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಯೋಧರ ಮೇಲೆ ಉಗ್ರರು ಸಿನಿಮಾದವರಂತೆ ಬಂದು ಹಲ್ಲೆ ಮಾಡಿ 40 ಕ್ಕೂ ಅಧಿಕ ನಮ್ಮ ಪ್ರೀತಿಯ ಯೋಧರನ್ನು ಕೊಂದು ಬಿಟ್ಟರು. ನಮ್ಮ ರಕ್ಷಣೆ ವ್ಯವಸ್ಥೆ ಇಷ್ಟು ಸಡಿಲವೇ.? ನಾವು ಯಾವಾಗ ಇಂತಹ ಮುಂಜಾಗ್ರತೆಯನ್ನು ಕಲಿಯುವು ಮತ್ತು ಅದನ್ನು ಅಳವಡಿಕೊಳ್ಳುವುದು ಯಾವಾಗ? ಎಲ್ಲವೂ ನಮ್ಮಲ್ಲಿ ನಿರ್ಲಕ್ಷ. ರಸ್ತೆಗಳು ಸಮರ್ಪಕವಿಲ್ಲದೆ ವರ್ಷದಿಂದ ವರ್ಷಕ್ಕೆ ಎಷ್ಟೊ ಜನರ ಸಾಯುತಿದ್ದಾರೆ., ಕಟ್ಟಡಗಳಲ್ಲಿ ಅಸಮರ್ಪಕ ರಕ್ಷಣ ವ್ಯವಸ್ಥೆ, ರಕ್ಷಣಾ ಸಾಧನಗಳು ಅಳವಡಿಸ್ಕೊಳ್ಳದೆ,ರಕ್ಷಣ ನಿಯಮ ಪಾಲಿಸದೆ ಸಾವುಗಳಾಗುತ್ತೆವೆ, ಇದೇ ನಿರ್ಲಕ್ಷತೆಯಿಂದ ಅನೇಕ ರೀತಿಯ ಬೆಂಕಿ ಅನಾಹುತಗಳು ನೆಡೆದು ಜನರು ಸಾಯುತಿದ್ದಾರೆ. ಅಂದರೆ ಭಾರತದಲ್ಲಿ ಜನರ ಸಾವಿಗೆ, ಸೊತ್ತಿಗೆ ಎನೂ ಬೆಲೆ ಇಲ್ಲವೇ. ಭಾರತದಲ್ಲಿ ಸಾಮನ್ಯ ಜನರ ಜೀವಕ್ಕೆ ಸೊತ್ತಿಗೆ ಮೌಲ್ಯವೆ ಇಲ್ಲವೆಂಬ ಅನುಮಾನ ಕಾಡತೊಡಗಿದೆ.
ಚಿತ್ರಗಳು:ಕ್ರಪೆಯಿಂದ