ಬೀಜಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ : ಉದ್ಯಮಿ ಆನಂದ ಸಿ.ಕುಂದರ್ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ

ಬೀಜಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ :
ಉದ್ಯಮಿ ಆನಂದ ಸಿ.ಕುಂದರ್ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ


ಕುಂದಾಪುರ,ಫೆ.18 :ಯುವ ಜನತೆ ಸಂಘಟನೆಗೊಂಡಾಗ ಸಮಾಜದ ಅಭಿವೃದ್ಧಿಗೆ ಅದು ಪೂರಕವಾಗಲಿದೆ. ಮಿತ್ರ ಸಂಗಮ ಜನಪರ,ಸಮಾಜ ಪರ ಕಾರ್ಯಕ್ರಮವನ್ನು ಸಂಘಟಿಸಿದ್ದನ್ನು ಕಂಡರೆ ಇಂತಹ ಸಂಘಟನೆಗಳು ಪ್ರತಿ ಊರಿನಲ್ಲೂ ಇದ್ದರೆ ಆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಸ್ಥೆ ಕೊಡಮಾಡುವ ಊರ ಗೌರವದ ನಮ್ಮೂರ ಪ್ರಶಸ್ತಿಯನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಟದ ಉದ್ಯಮಿ ಆನಂದ ಸಿ.ಕುಂದರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಉದ್ಯಮಿ ಆನಂದ ಸಿ.ಕುಂದರ್ ಪ್ರಶಸ್ತಿ ಸ್ವೀಕರಸಿ ಮಾತನಾಡಿ, ಯುವಕ ಸಂಘಟನೆಗಳು ನೆಲ, ಜಲ, ಪರಿಸರವನ್ನು ರಕ್ಷಿಸುವ ಕಾರ್ಯ ಮಾಡಬೇಕಾಗಿದೆ.ಊರಿನಲ್ಲಿ ಯುವ ಸಂಘಟನೆ,ದೇವಸ್ಥಾನ,ಶಾಲೆಗಳಿದ್ದರೆ ಆ ಊರು ಬೇಗನೆ ಪ್ರಗತಿ ಹೊಂದಲು ಸಾಧ್ಯವಿದೆ. ಮಿತ್ರ ಸಂಗಮ ಕಳೆದ 22 ವರ್ಷಗಳಿಂದ ಬೀಜಾಡಿ ಪರಿಸರದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪುರಸ್ಕøತ ಪ್ರಗತಿಪರ ಕೃಷಿಕ ರಾಮಕೃಷ್ಣ ಬಾಯರಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯಧನ, ಬಡ ಕುಟುಂಬಕ್ಕೆ ಹೊಲಿಗೆ ಯಂತ್ರ, ವಿಕಲಚೇತನರಿಗೆ ಊರುಗೋಲು ವಿತರಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು.ಕಾರ್ಯದರ್ಶಿ ಶ್ರೀಕಾಂತ್ ಭಟ್ ವರದಿ,ಅನುಪ್ ಕುಮಾರ್ ಬಿ.ಆರ್ ಸಂದೇಶ, ಚಂದ್ರ ಬಿ.ಎನ್, ಮಂಜುನಾಥ್ ಸನ್ಮಾನ ಪತ್ರ, ಗಿರೀಶ್ ಕೆ.ಎಸ್, ಪ್ರದೀಪ್ ದೇವಾಡಿಗ ಪ್ರತಿಭಾ ಪುರಸ್ಕøರದ ಪಟ್ಟ ವಾಚಿಸಿದರು. ಅಧ್ಯಕ್ಷ ನಾಗರಾಜ ಬಿ.ಜಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳಿಂದ ವಿವಿಧ ವಿನೋದಾವಳಿಗಳು, ನಿಖಿತ್ ಭಂಡಾರಿ ಇವರಿಂದ ಯಕ್ಷ ನಾಟ್ಯ, ಉಡುಪಿ ಅಭಿನಯ ಕಲಾವಿದರಿಂದ ಬಂದೇ ಬರ್ತಾನೆ ನಾಟಕ ಪ್ರದರ್ಶನಗೊಂಡಿತು.
ಚಿತ್ರ//17ಸಿಬಿ1//ಶನಿವಾರ ಬೀಜಾಡಿ ಮಿತ್ರ ಸಂಗಮದ 22ನೇ ವಾರ್ಷಿಕೋತ್ಸವದಲ್ಲಿ ಉದ್ಯಮಿ ಆನಂದ ಸಿ.ಕುಂದರ್ ಅವರಿಗೆ ನಮ್ಮೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.