ಬೀಜಾಡಿಯಲ್ಲಿ ಮನೆಯಂಗಳದಲ್ಲಿ ಶೋಭಾನೆ ಹಬ್ಬ ಭಾನುವಾರ ಬೆಳಿಗ್ಗೆ 10.30ಕ್ಕೆ ಬಾಯರಿ ಅವರ ಮನೆಯಂಗಳದಲ್ಲಿ

JANANUDI.COM NETWORK

ಬೀಜಾಡಿ: ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ,ಬೀಜಾಡಿ ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮನೆಯಂಗಳದಲ್ಲಿ ಶೋಭಾನೆ ಹಬ್ಬ
ಕಾರ್ಯಕ್ರಮ ಅ.4ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಬೀಜಾಡಿ ದಿವಂಗತ ನಾಗೇಶ್ವರ ಬಾಯರಿ ಅವರ ಮನೆಯಂಗಳದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಹಿರಿಯ ಶೋಭಾನೆ ಹಾಡುಗಾರರಾದ ತಲ್ಲೂರು ಕೋಟೆಬಾಗಿಲು ಗ್ರಾಮ ಸೀತು, ಬೀಜಾಡಿ ಗ್ರಾಮದ ಶಾರದಾ ಗಾಣಿಗ ತಲ್ಲೂರು ಕಂಬಳಗದ್ದೆ ದುರ್ಗಿ ಅವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.