ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಆಶಾ ಭಾವನೆಯನ್ನು ಇಟ್ಟಿಕೊಳ್ಳಬೇಕು: ಎಸ್.ಮುನಿಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಆಶಾ ಭಾವನೆಯನ್ನು ಇಟ್ಟಿಕೊಳ್ಳಬೇಕು ಸೋಲು ಗೆಲವು ದೈವಾದೀನ ಭಯಪಡದೇ ಧೈರ್ಯದಿಂದ ಚುನಾವಣೆಯನ್ನು ಎದುರಿಸಬೇಕೆಂದು ಸಂಸದ ಎಸ್.ಮುನಿಸ್ವಾಮಿ ಅಭ್ಯರ್ಥಿಗಳಿಗೆ ಧೈರ್ಯವನ್ನು ತುಂಬಿದರು.
ಪಟ್ಟಣದ ಹೊರವಲಯದ ಖಾಸಗಿ ಶಾಲಾ ಅವರಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಹಾಗೂ ಪಕ್ಷದ ಸಂಘಟನೆಯ ಕುಂದು ಕೊರತೆಗಳ ಸಬೆಯಲ್ಲಿ ಭಾಗವಹಿಸಿ ಮಾತನಾಡಿದ ಎಸ್.ಮುನಿಸ್ವಾಮಿ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ನಿಂತಿರುವುದು ಅಭಿನಂದನ ವಿಷಯ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭಾ ಚುನಾವಣೆಗಳಿಗೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ದಿಕ್ಸುಚಿಯಾಗಿದೆ. ಸ್ವರ್ಧೆ ಮಾಡುವುದು ಬಹಳ ಮುಖ್ಯ ಸೋಲು ಗೆಲವು ದೈವಯತ್ನ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ದೃತಿಕೆಡದೆ ಯಾರಿಗೂ ಅಂಜದೆ. ನಿಮ್ಮ ಪ್ರಚಾರ ನೀವು ಮಾಡಿಕೊಳ್ಳಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮದೇ ಇದೆ ನಿಮ್ಮ ಬೆನ್ನೇಲಬಾಗಿ ನಮ್ಮ ಪಕ್ಷ ಇರುತ್ತದೆ ಎಂದರು ಇವರು ಗ್ರಾಮಗಳಲ್ಲಿ ಚರಂಡಿ, ಮೋರಿ ಕೆಲಸ, ವಿದ್ಯುತ್, ಕುಡಿಯುವ ನೀರು, ಈ ಸಮಸ್ಯಗಳು ಏನೇ ಇದ್ದರೂ ನೀವುಗಳು ಜನತೆಗೆ ಇವುಗಳ ನಿವಾರಣೆ ಮಾಡಲು ಭರವಸೆಯನ್ನು ನೀಡಿ ಈ ಸಮಸ್ಯೆಗಳ ಪಟ್ಟಿ ನನ್ನ ಗಮನಕ್ಕೆ ತಂದರೆ ನಾನು ಇವುಗಳನ್ನು ವ್ಯವಸ್ಥೆ ಮಾಡಿಕೊಡಲು ಸಿದ್ದನಾಗಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನೇಕ ಜನಪರ ಯೋಜನೆಗಳಾದ ಅಯಷ್‍ಮಾನ್ ಭಾರತ್, ಬಾಲ ಸಂಜೀವಿನಿ, ಜನಧನ ಯೋಜನೆ, ಉಜ್ವಲಯೋಜನೆ, ಕಿಸಾನ್ ಯೋಜನೆ, ಇನ್ನೀತರೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಿರುವುದು ನಮಗೆ ಶ್ರೀರಕ್ಷೆಯಾಗಿದೆ ಎಂದರು.
ವಿಧಾನ ಪರಿಷತ್ ವೈ.ಎ. ನಾರಾಯಣಸ್ವಾಮಿ ಮಾತನಾಡಿ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ಕೇವಲ ಹಣ ಖರ್ಚುಮಾಡಿದರೆ ಸಾಲದು ಸ್ವಂತ ವ್ಯಕ್ತಿತ್ವ, ಸಜ್ಜನಿಕೆ, ನಡೆ ನುಡಿ ಬಹಳ ಮುಖ್ಯ ಇವುಗಳನ್ನು ಅಭ್ಯರ್ಥಿಗಳು ಮೈಗೂಡಿಸಕೊಳ್ಳಬೇಕು ಗ್ರಾಮ ಪಂಚಾಯಿತಿಯ ಚುನಾವಣಾ ಕಣದಲ್ಲಿ ಸುಮಾರು 150 ಮಂದಿ ನಿಂತಿರುವುದು ಸಾಮಾನ್ಯ ವಿಷಯವಲ್ಲ ಮುಂಬರುವ ಚುನಾವಣೆಗಳಿಗೆ ಈ ಚುನಾವಣೆಯ ಫಲಿತಾಂಶ ಸ್ಪೂರ್ತಿಯಾಗಿದೆ ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟಿಕೊಂಡು ಧೈೈರ್ಯವಾಗಿ ಚುನಾವಣೆಯನ್ನು ಎದುರಿಸಿ ಯಾವುದೇ ಪಕ್ಷ, ವ್ಯಕ್ತಿಗಳಿಗೆ ನೀವು ಬಯಪಡುವ ಅಗತ್ಯವಿಲ್ಲ ಈ ದೇಶದ ವ್ಯವಸ್ಥೆ ನಮ್ಮ ಕೈಯಲ್ಲಿದೆ, ಎರಡು ಸರ್ಕಾರಗಳು ನಮ್ಮದೇ ಇವೆ. ನಾವು ಸದಾ ನಿಮ್ಮ ನಿಮ್ಮಯೊಂದಿಗೆ ಕೈಜೋಡಿಸುವ ಕೆಲಸ ಮಾಡುತ್ತೇವೆ ಎಂದರು.
ಈ ದೇಶದಲ್ಲಿ ಪ್ರಪಥಮ ಬಾರಿಗೆ ಸುವರ್ಣಗ್ರಾಮ ಯೋಜನೆ ಕಾರ್ಯರೂಪಕ್ಕೆ ತಂದಿರುವುದು ನಮ್ಮ ಬಿಜೆಪಿ ಸರ್ಕಾರ ಮಾತ್ರ. ಪಿ ಎಂ ಜೆ ಎಸ್ ವೈ ಯೋಜನೆ ಸಫಲವಾದಂತೆ ಸುವರ್ಣಗ್ರಾಮ ಯೋಜನೆಯು ಸಹ ಯಶಸ್ವಿಯಾಗಿದೆ. ಯುವಕರು ಮೋದಿಜಿ ಯವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷತೀತಾವಾಗಿ ಸರ್ಕಾರದ ಸೌಲಭ್ಯಗಳು ಮನೆ ಬಾಗಿಲುಗಳಿಗೆ ತಲುಪುವ ಕೆಲಸವನ್ನು ನಮ್ಮ ಸರ್ಕಾರಗಳು ಮಾಡುತ್ತಿವೆ. ಈ ತಾಲ್ಲೂಕಿನಲ್ಲಿ ಬಿಜೆಪಿ ಕಮಲವನ್ನು ಅರಳಿಸಲು ನಾವು ನೀವು ಎಲ್ಲರು ಶ್ರಮಪಟ್ಟೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಾ|| ವೇಣುಗೋಪಾಲ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಅವಲಕುಪ್ಪ ಜಯರಾಮರೆಡ್ಡಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ಡಿ, ಅವಲಕುಪ್ಪ ಬೈರೆಡ್ಡಿ, ಪಾಪಿರೆಡ್ಡಿ, ನಾಮನಿ ಪುರಸಭೆ ಸದಸ್ಯ ಶೇಕ್‍ಷಪೀವುಲ್ಲಾ, ರಾಜು, ರಾಮಾಂಜಿ, ಇನ್ನೀತರರು ಹಾಜರಿದ್ದರು
.