ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಬಿಜೆಪಿ ಕಾರ್ಯಕರ್ತರು ಸೇವೆಯ ಮೂಲಕ ಪಕ್ಷ ಸಂಘಟನೆ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಆತ್ಮ ನಿರ್ಭರ ಭಾರತ ಘೋಷಣೆಯಂತೆ ಸ್ವದೇಶಿ ವಸ್ತುಗಳ ಬಳಕೆ ಮಾಡುವ ಸಂಕಲ್ಪ ಕೈಗೊಳ್ಳಲಾಗಿದೆ. ಈ ಆಂದೋಲನವನ್ನು ಗ್ರಾಮ ಮಟ್ಟದಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅಶೋಕ್ ರೆಡ್ಡಿ, ಡಾ. ಎಂ.ಎಸ್.ಕವಿತ, ಮುಖಂಡರಾದ ಜಯರಾಮರೆಡ್ಡಿ, ಕೊಟ್ರಗುಳಿ ನಾರಾಯಾಣಸ್ವಾಮಿ, ಅಂಕುಶಂ ನಾರಾಯಣಸ್ವಾಮಿ, ಸುಹಾಸ್, ರಾಜು, ಶಿವಶಂಕರರೇಗೌಡ, ರಾಮಾಂಜಿ, ನಾಗರಾಜ್, ವೆಂಕಟರಾಮರೆಡ್ಡಿ, ಶ್ರೀನಿವಾಸರೆಡ್ಡಿ, ಸುರೇಶ್, ವೆಂಕಟಾಚಲಪತಿ, ವಿಐಪಿ ನಾಗರಾಜ್ ಇದ್ದರು. ರಕ್ತದಾನ: ಶಿಬಿರದಲ್ಲಿ 110 ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಕೆಜಿಎಫ್ನ ಜನರಲ್ ಆಸ್ಪತ್ರೆ ವೈದ್ಯರು ರಕ್ತ ಪಡೆಯುವ ಪ್ರಕ್ರಿಯೆ ನಡೆಸಿಕೊಟ್ಟರು.