ಬಲಿಷ್ಟ ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಕಾರಣ ಗಣ ರಾಜ್ಯೋತ್ಸೊವ ದಿನ – ವಿಕಾಸ್ ಹೆಗ್ಡೆ

ಬಲಿಷ್ಟ ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಕಾರಣ ಗಣ ರಾಜ್ಯೋತ್ಸೊವ ದಿನ – ವಿಕಾಸ್ ಹೆಗ್ಡೆ


ಕುಂದಾಪುರ,ಜ.26: ಗಣ ರಾಜ್ಯೋತ್ಸೊವದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಣ ರಾಜ್ಯೋತ್ಸೊವ ಆಚರಿಸಲಾಯಿತು, ಈ ಸಂದರ್ಭದಲ್ಲಿ ನೂತನವಾಗಿ ಎ,ಐ.ಸಿ.ಸಿ. ಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಮತಿ ಪ್ರಿಯಾಂಕ ಗಾಂಧಿಯನ್ನು ಅಭಿನಂದಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ‘ಇಂದು ದೇಶದ ಪ್ರಗತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯೆ ಮುಖ್ಯ ಕಾರಣ. ಪ್ರಜಾ ಪ್ರಭುತ್ವದ ಅತ್ಯುತ್ತಮ ಸಂವಿಧಾನವನ್ನು ಕಾಂಗ್ರೆಸ್ ಪಕ್ಷ ಜ್ಯಾರಿ ಮಾಡಿತು. ಹಾಗಾಗಿ ಭಾರತ ಬಲಿಷ್ಟ ಪ್ರಜಾಪ್ರಭು ದೇಶವಾಗಿ ಮಾರ್ಪಟ್ಟಿತು. ಸಂವಿದಾನವನ್ನು ದೇಶದಲ್ಲಿ ಜಾರಿಗೊಳಿಸಲು ಶ್ರಮಿಸಿದ ಸಂವಿಧಾನದ ಶಿಲ್ಪಿ ಅಂಬೆಡ್ಕರನ್ನು ಅವರು ಸ್ಮರಿಸಿದರು. ಇನ್ನೂ ಮುಂದೆಯೂ ಸಂವಿಧಾನದ ಹೆಸರಿನಲ್ಲಿ ಸಂವಿಧಾನಕ್ಕೆ ದಕ್ಕೆ ಬಾರದಂತೆ ಕಾಂಗ್ರೆಸ್ ಪಕ್ಷ ಶ್ರಮಿಸಲಿದೆ’ ಎಂದರು.
ಈ ಸಂದರ್ಭದಲ್ಲಿ ಐ.ಟಿ. ಸೆಲ್ನ ರಾಜ್ಯ ಕಾರ್ಯದರ್ಶಿ ಚಂದ್ರ ಶೇಖರ ಶೆಟ್ಟಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜೇಕಬ್ ಎಸ್. ಡಿಸೋಜಾ, ಮಾಜಿ ಪುರಸಭಾ ಅಧ್ಯಕ್ಷ ಹಾರೂನ್ ಸಾಹೇಬ್, ದೇವಕಿ ಸಣ್ಣಯ್ಯ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಲಕ್ಷ್ಮಿ ಪೂಜಾರಿ, ಎ.ಪಿಎಮ್.ಸಿ. ಉಪಾಧ್ಯಕ್ಷ ಗಣೇಶ ಸೇರಿಗಾರ್, ಇಂಟಕ್ ಅಧ್ಯಕ್ಷರಾದ ಚಂದ್ರ ಅಮೀನ್, ನಾಮ ನಿರ್ದೇಶಿತ ಸದಸ್ಯರಾದ ಶಿವರಾಮ ಪುತ್ರನ್, ಹಿರಿಯರಾದ ಗುಲಾಬಿಯಮ್ಮ ಬೀಜಾಡಿ, ಸೇವಾದಳದ ಪ್ರಮುಖರಾದ, ಕುಮಾರ್ ಕೆ. ಜ್ಯೋತಿ ಕೆ, ಚಂದ್ರಕಾಂತ್ ನಾಯ್ಕ್, ಜನಾರ್ಧನ್ ಖಾರ್ವಿ, ಕೋಟಾ ಸುನೀಲ್ ಪೂಜಾರಿ, ಧರ್ಮ ಪ್ರಕಾಶ್, ಶೋಭಾ ಸಚ್ಚಿದಾನಂದ, ಜ್ಯೋತಿ ಡಿ ನಾಯ್ಕ್, ಸುವರ್ಣ ಆಲ್ಮೇಡಾ, ಹೇಮಾ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿವಾನಂದ್ ಕೆ. ಇವರು ವಂದಿಸಿದರು.