ಬಡ ರಿಕ್ಷಾ ಚಾಲಕರನ್ನು ಮರೆತೆ ಬಿಟ್ಟ ಸರಕಾರ : ಸಂಘದಿಂದಲೇ ಸಹಾಯ

JANANUDI.COM NETWORK

 

ಬಡ ರಿಕ್ಷಾ ಚಾಲಕರನ್ನು ಮರೆತೆ ಬಿಟ್ಟ ಸರಕಾರ : ಸಂಘದಿಂದಲೇ ಸಹಾಯ

 

 

ಕುಂದಾಪುರ, ಎ.6:  ಕರೋನ ವೈರಸ್ ಹಾವಳಿಯಿಂದ ಕಳೆದ 12 ದಿನಗಳಿಂದ ಮುಂಜಾಗ್ರತ ಕ್ರಮಕ್ಕಾಗಿ ಸರಕಾರವು ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ.ರಿಕ್ಷಾ ಆದಾಯವನ್ನೇ ನಂಬಿ ಬದುಕುತ್ತಿರುವ ನಮ್ಮ ಸಂಘದ ಚಾಲಕರಿಗೆ ತಮ್ಮ ಕುಟುಂಬಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.ಸರಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆಗಳನ್ನು ನೀಡುತ್ತಿರುವ ಸಾರಿಗೆ ಚಾಲಕರನ್ನು ಸರಕಾರ ಮರೆತೆ ಬಿಟ್ಟಿದೆ.

   ಚುನಾವಣೆ ಸಂಧರ್ಭಗಳಲ್ಲಿಯೂ ನಮ್ಮ ಚಾಲಕರಿಂದ ಬೆಂಬಲ ಪಡೆದು ಗೆಲ್ಲುವ  ಜನಪ್ರತಿನಿಧಿಗಳು ಕಷ್ಟಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ. ಇಂದು  ಇಂತಹ ವೇಳೆಯಲ್ಲಿ ಸಂಘದ ಪ್ರಮುಖ ಸದಸ್ಯರು ಇಂದು ಸಂಘದ ಗೌರವ ಅಧ್ಯಕ್ಷರಾದ ಕಾಂ.ಕರುಣಾಕರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕಷ್ಟಕಾಲದಲ್ಲಿರುವ ನಮ್ಮ ಚಾಲಕರಿಗೆ  ಸಹಾಯ ಮಾಡಲು ಚರ್ಚೆ ನಡೆಸಿತು. ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು)ವು ಚಾಲಕರಿಗಾಗಿಯೇ ಉಳಿಸಿರುವ ಉಳಿತಾಯ ಖಾತೆಯಿಂದ ಸುಮಾರು ರೂ. 500000/-ಗಳನ್ನು ವಿಥ್ ಡ್ರಾ ಮಾಡಿಸಿ ಪ್ರತಿಯೊಬ್ಬರಿಗೂ ರೂ.1000/- ದಂತೆ ಸಹಾಯ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತೆಂದು ಕುಂದಾಪುರ ತಾಲೂಕು ಆಟೋರಿಕ್ಷ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ದ ಪ್ರಧಾನ ಕಾರ್ಯದರ್ಶಿ          ರಾಜುದೇವಾಡಿಗ ಮಾಧ್ಯಮಕ್ಕೆ ತಿಳಿಸಿದ್ದಾರೆ.