JANANUDI.COM NETWORK
ಬಡತನ ಎನ್ನುವುದು ಅನುಭವವೇ ಹೊರತು ಅವಮಾನವಲ್ಲ- ಡಾ.ಕೆ.ಚಿನ್ನಪ್ಪಗೌಡ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ
ಕುಂದಾಪುರ: ಬಡತನ ಎನ್ನುವುದು ಅನುಭವವೇ ಹೊರತು ಅವಮಾನವಲ್ಲ. ಅದು ಘನತೆ ಎಂದು ಭಾವಿಸಿದಲ್ಲಿ ಶಿಕ್ಷಣ ಮತ್ತು ಜೀವನದಲ್ಲಿ ಏನನ್ನಾದರೂ ಸಾಧೀಸಲು ಸಾಧ್ಯ. ಸರಿಯಾದ ಮಾರ್ಗಗಳನ್ನು ಆಯ್ದುಕೊಳ್ಳಿ ಸತ್ಯದ ಅರಿವಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿನ್ನಪ್ಪಗೌಡ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರುಜನೆವರಿ 31ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತಜಗತ್ತಿನಲ್ಲಿ ಹಲವಾರು ತಲ್ಲಣಗಳೊಂದಿಗೆ ಸಂಭ್ರಮದ ಸಂಗತಿಗಳು ಬಹಳವಿದೆ. ಮುಖ್ಯವಾಗಿ ವಸಾಹತು ಶಾಹಿಯಿಂದ ಪ್ರಜಾಪ್ರಭುತ್ವದೆಡೆಗೆ ಜೊತೆಯಲ್ಲಿ ಸಾರ್ವತ್ರಿಕ ಶಿಕ್ಷಣದೊಂದಿಗೆ ಅರ್ಧಾಂಶ ಮಹಳೆಯರು ಉನ್ನತ ಶಿಕ್ಷಣದ ಕಡೆಗೆ ಆಸಕ್ತಿ ತೋರಿಸಿದ್ದು ಶತಮಾನದವರೆಗೆ ಅವಕಾಶ ವಂಚಿತಜನರು ಶಿಕ್ಷಣಕ್ಕೆ ಒಳಪಟ್ಟಿರುವುದು ಅಲ್ಲದೇ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿದ್ದು ದೊಡ್ಡ ಸಾಧನೆಯಾಗಿದೆ. ವಿದ್ಯಾರ್ಥಿಗಳು ಮೋಬೈಲ್ ಗೀಳಿಗೆ ಒಳಗಾಗದೇ ಶಿಕ್ಷಣ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಮುಖ್ಯವಾಗಿ ಅರಿಯಬೇಕು. ಇಂದಿನ ಜಗತ್ತಿನಉನ್ನತ ಶಿಕ್ಷಣ ವ್ಯವಸ್ಥೆ ಕೌಶಲ ಆಧಾರಿತವಾಗಿರುವುದರಿಂದ ವಿದ್ಯಾರ್ಥಿಗಳು ಪಡೆದ ಮಾಹಿತಿಯನ್ನು ಜ್ಞಾನವನ್ನಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗದಿದ್ದರೆಅದು ವಿದ್ಯಾರ್ಥಿಗಳ ನಿಜವಾದ ಸೋಲು.ಜೊತೆಗೆ ತಮ್ಮದುಡಿಮೆಯೊಂದಿಗೆ ಕಲಿಯುವಂತಹ ಮನೋಬಾವವನ್ನು ಬೆಳೆಸಿಕೊಳ್ಳಬೇಕು.ಅಲ್ಲದೇ ಅನೇಕ ಒತ್ತಡ, ತಲ್ಲಣಗೊಳಿಸುವ ದಿಕ್ಕೆಡಿಸುವ, ಹತಾಶೆ ದ್ವಂದ್ವಗಳಿಂದ ಪಾರಾಗಬೇಕಾದರೆ ಒಂದು ನಿಮಿಷ ಧ್ಯಾನಸ್ಥರಾಗಿತಮ್ಮ ಜವಾಬ್ದಾರಿಗಳನ್ನು ಅರಿತ ಮೇಲೆ ಸರಿಯಾದ ಮಾರ್ಗಗಳನ್ನು ಆಯ್ದುಕೊಳ್ಳಿ ಎಂದುಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದಡಾ.ಹೆಚ್.ಶಾಂತಾರಾಂ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರಾಧ್ಯಾಪಕರುಗಳಾದ ಡಾ.ರಮಾನಂದ ಡಿ, ಡಾ.ಹಯವದನ ಉಪಾಧ್ಯಾಯ, ಡಾ.ರಮೇಶ್ ಚಿಂಬಾಳ್ಕರ್, ರಘುವೀರ್ ವೈ.ಎಸ್ ಮತ್ತು ಭೋಧಕೇತರ ಸಿಬ್ಬಂದಿಗಳಾದ ಮಹಾಬಲ ಕೆ ಮತ್ತುಯು. ದಿನಕರ ಶೆಟ್ಟಿಗಾರ್ ಅವರನ್ನುಗೌರವಿಸಲಾಯಿತು. ರ್ಯಾಂಕ್ ವಿಜೇತ ವಿಶೇಷ ಸಾಧನೆಗೈದ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕೆ.ಶಾಂತಾರಾಮ್ ಪ್ರಭು, ವಿಶ್ವಸ್ಥರಾದ ಭಂಡಾರ್ಕಾರ್ಸ್ಕಾಲೇಜು ವೊಕೇಶನಲ್ ಟ್ರಸ್ಟ್ಇದರ ಸದಸ್ಯರಾದ ರಾಜೇಂದ್ರ ತೋಳಾರ್ ಮತ್ತು ಎಸ್.ಸದಾನಂದ ಛಾತ್ರ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲೋನಾ ಲುವಿಸ್ ಕಾರ್ಯದರ್ಶಿಗಳಾದ ಸುಬ್ರಮಣ್ಯ , ವಿಜಯಲಕ್ಷ್ಮಿ ಶಾಂತಾರಾಮ, ಬೀನಾ ರಂಜಿತ್ಕುಮಾರ್ ಶೆಟ್ಟಿ, ಪೂರ್ಣಿಮಾ ದೇವದಾಸ್ಕಾಮತ್ ಮತ್ತು ಪ್ರಾಕ್ತನ ವಿದ್ಯಾರ್ಥಿಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಪ್ರೊ. ರಾಮಚಂದ್ರ ಸ್ವಾಗತಿಸಿದರು. ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಪ್ರಾಧ್ಯಾಪಕರಾದಡಾ. ಎಂ.ಬಿ. ನಟರಾಜ ನಿವೃತ್ತರಕುರಿತು ಮಾತನಾಡಿದರು. ಉಪನ್ಯಾಸಕರಾದ ವಿಜಯಲಕ್ಷ್ಮಿ ಶೆಟ್ಟಿ, ಸುಮಾಜಿ.ಆರ್ ಮತ್ತು ಹೀನಾ ಕೌಸರ್ ಅವರುರ್ಯಾಂಕ್ ಮತ್ತುಸಾಧಕ ವಿದ್ಯಾರ್ಥಿಗಳ ವರದಿ ವಾಚಿಸಿದರು.
ವಿದ್ಯಾರ್ಥಿಗಳಾದ ಕೀರ್ತಿಎಸ್. ಕಾರ್ಯಕ್ರಮ ನಿರ್ವಹಿಸಿ, ಮೇಘನಾ ಪ್ರಭು ಅತಿಥಿಗಳನ್ನು ಪರಿಚಯಿಸಿದರು.