ಬಂಗಾರಪೇಟೆ  ತಹಸೀಲ್ದಾರ್ ಚಂದ್ರಮೌಳೇಶ್ವರ್ ಅವರ ಅಮಾನುಷವಾಗಿ ಕೊಲೆ, ನಿವೃತ್ತ ಶಿಕ್ಷಕನಿಂದ ಅವರ ಎದೆಗೆ ಜಾಕುನಿಂದ ತಿವಿದು ಕೊಲೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಬಂಗಾರಪೇಟೆ  ತಹಸೀಲ್ದಾರ್ ಚಂದ್ರಮೌಳೇಶ್ವರ್ ಅವರ  ಅಮಾನುಷವಾಗಿ ಕೊಲೆ, ನಿವೃತ್ತ ಶಿಕ್ಷಕನಿಂದ ಅವರ ಎದೆಗೆ ಜಾಕುನಿಂದ ತಿವಿದು ಕೊಲೆ

 

 

 

ಬಂಗಾರಪೇಟೆ ; ಸ್ನೇಹಜೀವಿ, ಹಸನ್ಮುಕಿ, ದಕ್ಷ, ಪ್ರಾಮಾಣಿಕ ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ್ ರವರ ಎದೆಗೆ ಜಾಕುನಿಂದ ತಿವಿದು ಅಮಾನುಷವಾಗಿ ಕೊಲೆ ಮಾಡಲಾಗಿದೆ.ಯಾರಿಗೂ ತೊಂದರೆ ನೀಡದೆ ಎಲ್ಲರ ಜೊತೆಯಲ್ಲಿ ಸರಳವಾಗಿ ನಗುನಗುತ್ತಲೇ ಮಾತನಾಡಿಸಿ ಕಛೇರಿ ಬರುತ್ತಿದ್ದ ಸಮಸ್ಯೆಗಳನ್ನು ನಿವಾರಿಸಿಕೊಡುವ ಮೂಲಕ ಸಾರ್ವಜನಿಕರಲ್ಲಿ ಪ್ರಶಂಸೆಗೊಳಗಾಗಿದ್ದ ತಾಲ್ಲೂಕು ದಂಡಾಧಿಕಾರಿಯನ್ನು ಗುರುವಾರ ಹಾಡು ಹಗಲಲ್ಲೇ ಕೊಲೆ ಮಾಡಿರುವ ಘಟನೆ ಇಡೀ ಆಡಳಿತವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಕಾನೂನಿನಂತೆ ಸರ್ವೆ ಅಧಿಕಾರಿ ಮೂಲಕ ಸ್ಥಳಕ್ಕೆ ಬೇಟಿ ನೀಡಿ ವಿವಾದಗೊಂಡಿದ್ದ ಅಕ್ಕಪಕ್ಕದ ಜಮೀನುಗಳನ್ನು ಸರ್ವೆ ಮಾಡಿಸುವಾಗ ದುಷ್ಕರ್ಮಿ ತಹಸೀಲ್ದಾರ್ ಎದೆಗೆ ಚಾಕುನಿಂದ ತಿವಿದಿದ್ದಾನೆ.ಎದೆಯಲ್ಲಿ ಆಳವಾಗಿ ಚಾಕು ಹೋಗಿದ್ದರಿಂದ ಸ್ಥಳದಲ್ಲೆ ರಕ್ತದ ಸೋರಿಕೆಯಿಂದ ಕುಸಿದು ಬಿದ್ದಿದ್ದಾರೆ.ಬಂದೋಬಸ್ತ್‍ನಲ್ಲಿದ್ದ ಪೊಲೀಸ್ ಪೇದೆ ತಹಸೀಲ್ದಾರ್‍ರನ್ನು ಜೀಪ್‍ನಲ್ಲಿ ಎತ್ತಾಕಿಕೊಂಡು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆ ಬಂದಿದ್ದಾರೆ.ಪರಿಸ್ಥಿತಿ ಕೈಮೀರುತ್ತಿದ್ದನ್ನು ಗಮನಿಸಿದ ವೈದ್ಯರು ತಕ್ಷಣೆ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಆಂಬ್ಯುಲೆನ್ಸ್‍ನಲ್ಲಿ ಸಾಗಿಸುವಾಗ ಮಾರ್ಗದ ಮಧ್ಯೆ ಸಾವನ್ನೊಪ್ಪಿದ್ದಾರೆ.

ತಾಲ್ಲೂಕಿನ ಕಾಮಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತೊಪ್ಪನಹಳ್ಳಿ ಸ.ನಂ 4/1 ಮತ್ತು ಕಳವಂಚಿ ಸ.ನಂ 5/4 ಸಂಬಂಧಿಸಿದ ತೊಪ್ಪನಹಳ್ಳಿ ಸಮೀಪ ಇರುವ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ನಿವೃತ್ತ ಶಿಕ್ಷಕ ವೆಂಕಟಪತಿ ಮಧ್ಯೆ ಅಕ್ಕಪಕ್ಕದ ಅವರ ಜಮೀನು ತಕರಾರು ಇತ್ತು.ಸರ್ವೆ ಮಾಡಿಸಿ ಜಮೀನಿಗೆ ಅದ್‍ಬಸ್ತ್ ಕಲ್ಲುಗಳನ್ನು ಹಾಕಿಸಿ ಕೊಡಿವಂತೆ ಕೋರಿ ಸರ್ವೆ ಮಾಡಿಸಲು ಇಬ್ಬರೂ ತಹಸೀಲ್ದಾರ್‍ರಿಗೆ ಮನವಿ ಮಾಡಿಕೊಂಡಿದ್ದರು.ಅವರ ಮನವಿಯಂತೆ ತಹಸೀಲ್ದಾರ್ ಇಂದು ಸರ್ವೆ ಮಾಡಿಸಲು ದಿನಾಂಕವನ್ನು ನಿಗದಿ ಮಾಡಿ ಇಬ್ಬರೂ ಸ್ಥಳದಲ್ಲಿ ಹಾಜರಿರುವಂತೆ ತಿಳಿಸಿದ್ದರು.

ತಾಲ್ಲೂಕು ಸರ್ವೆ ಅಧಿಕಾರಿ ಸಂತೋಶ್ ಜೊತೆಯಲ್ಲಿ ಸರ್ವೆ ಕಾರ್ಯಕ್ಕೆ ಕಾಮಸಂದ್ರ ಠಾಣೆಯ ಪೊಲೀಸ್ ಪೇದೆಯನ್ನು ಬಂದೋಬಸ್ತ್‍ಗಾಗಿ ಕರೆದುಕೊಂಡು ತಹಸೀಲ್ದಾರ್ ವಿವಾದಿತ ಕಳವಂಚಿಯ ಜಮೀನು ಸ್ಥಳಕ್ಕೆ ಬೇಟಿ ನೀಡಿದ್ದರು.ಕಾನೂನಿನಂತೆ ತಹಸೀಲ್ದಾರ್ ಸರ್ವೆ ಮಾಡಿಸಿ ಅದರ ಪ್ರಕಾರ ಅದ್‍ಬಸ್ತ್ ಕಲ್ಲುಗಳನ್ನು ಹಾಕಿಸುತ್ತಿದ್ದರು.ಈ ವೇಳೆ ನಿವೃತ್ತ ಶಿಕ್ಷಕ ವೆಂಕಟಪತಿ ತಕರಾರು ತೆಗೆದು, ನಾನು ಅನುಭವದಲ್ಲಿರುವ ನನ್ನ ಜಮೀನಿನಲ್ಲಿ ಹಾಕಿರುವ ಅದ್‍ಬಸ್ತ್ ಕಲ್ಲ್‍ನ್ನು ಕಿತ್ತಾಕಬೇಕೆಂದು ರೇಗಾಡಿದ್ದಾನೆ.ಅದೇ ವೇಳೆಯಲ್ಲಿ ಸ್ಥಳದಲ್ಲಿದ್ದ ತಹಸೀಲ್ದಾರ್ ಮೇಲೂ ದೌರ್ಜನ್ಯ ನಡೆಸಿದ್ದಾನೆ.ಅವಾಚ್ಯಶಬ್ದಗಳಿಂದ ನಿಂದಿಸಿದ್ದಾನೆ.ತಹಸೀಲ್ದಾರ್ ವಾಪಸ್ ಬರಲು ಜೀಪ್ ಬಳಿ ಹೋಗುತ್ತಿದ್ದಾಗ ದುಷ್ಕರ್ಮಿ ವೆಂಕಟಪತಿ ದಾಖಲೆಗಳನ್ನು ತೋರಿಸುವ ನೆಪದಲ್ಲಿ ತಹಸೀಲ್ದಾರ್ ತನ್ನ ಬಳಿ ಇದ್ದ ಚಾಕುನಿಂದ ಎದೆಗೆ ಇರಿದು ಕೊಲೆ ಮಾಡಿದ್ದಾನೆ.

ತಹಸೀಲ್ದಾರ್ ಚಂದ್ರಮೌಳೇಶ್ವರ್ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ.ತಕ್ಷಣ ಜೀಪ್‍ನಲ್ಲಿ ಎತ್ತಾಕಿಕೊಂಡು ಬಂಗಾರಪೇಟೆ ಸಾರ್ವಜನಿಕರ ಆಸ್ಪತ್ರೆಗೆ ಆಗಮಿಸಿದ್ದಾರೆ.ತಹಸೀಲ್ದಾರ್‍ರ ಗಂಭೀರ ಪರಿಸ್ಥತಿಯನ್ನು ಅರಿತು ತಕ್ಷಣ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಆಂಬ್ಯುಲೆನ್ಸ್‍ನಲ್ಲಿ ರವಾನೆ ಮಾಡಿದ್ದಾರೆ.ಮಾರ್ಗದ ಮಧ್ಯೆ ತಹಸೀಲ್ದಾರ್ ಕೊನೆ ಉಸಿರು ಎಳೆದಿದ್ದಾರೆ.ತಹಸೀಲ್ದಾರ್ ರವರ ಕೊಲೆ ವಿಷಯ ಕಾಡ್ಗಿಚ್ಚಿನಂತೆ ಹರಡಿ ನೂರಾರು ಮಂದಿ ಆಸ್ಪತ್ರೆ ಮುಂದೆ ಜನರು ಆಗಮಿಸಿ ಅಯ್ಯೋ, ಒಳ್ಳೆ ಅಧಿಕಾರಿಯನ್ನು ಕಳೆದುಕೊಂಡವಲ್ಲ ಎಂದು ರೋಧಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಸ್ಪತ್ರೆಗೆ ಬೇಟಿ ನೀಡಿ ಪರಿಸ್ಥಿತಿಯನ್ನು ಗಮನಿಸಿದರು.ಮಾರ್ಗದ ಮಧ್ಯೆ ತಹಸೀಲ್ದಾರ್ ನಿಧನಗೊಂಡ ವಿಷಯ ತಿಳಿಯುತ್ತಿದ್ದಂತೆಯೇ ಕಣ್ಣೀರು ಸುರಿಸಿ ನೋವನ್ನು ತೋಡಿಕೊಂಡರು.

ಕೊಲೆ ಮಾಡಿ ಪರಾರಿಗೊಂಡಿದ್ದ ಆರೋಪಿ ದುಷ್ಕರ್ಮಿ ಕಳವಂಚಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಪತಿಯನ್ನು ಕಾಮಸಂದ್ರ ಪೊಲೀಸರು ಬಂಧಿಸಿದ್ದಾರೆ.ಕೃತ್ಯಕ್ಕೆ ಉಪಯೋಗಿಸಿದ್ದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಾಮಸಂದ್ರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲುಗೊಂಡಿದೆ.

ಕೆಜಿಎಫ್ ಎಸ್ಪಿ ಮೊಹಮದ್ ಸುಜೀತಾ, ಸರ್ಕಲ್ ಇನ್ಸ್‍ಫೆಕ್ಟರ್ ಶ್ರೀಕಂಠ, ಎಸಿ ಸೋಮಶೇಖರ್, ಸಬ್‍ಇನ್ಸ್‍ಫೆಕ್ಟರ್ ಜಗದೀಶ್‍ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶಂಶುದ್ದೀನ್‍ಬಾಬು, ಸದ್ಯಸ ಪಿ.ಸಾಧೀಕ್, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಅಪ್ಪಯ್ಯಗೌಡ ಮತ್ತಿತ್ತರರು ಆಸ್ಪತ್ರೆಗೆ ಬೇಟಿ ನೀಡಿದ್ದರು.

ಒಂದು ಕೋಟಿ ಪರಹಾರಕ್ಕೆ ಶಾಸಕ ಒತ್ತಾಯ ; ರಾತ್ರಿ ಹಗಲು ಜನರ ಸೇವೆಯನ್ನು ಮಾಡಿಕೊಂಡು ಪ್ರಾಮಾಣಿಕತೆಗೆ ಖ್ಯಾತಿಗೊಂಡಿದ್ದ ತಹಸೀಲ್ದಾರ್ ಚಂದ್ರಮೌಳೇಶ್ವರ್ ರವರನ್ನು ಕೊಲೆಯನ್ನು ತೀವ್ರವಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಖಂಡಿಸಿದ್ದಾರೆ.ದಕ್ಷ ಅಧಿಕಾರಿಗಳಿಗೆ ಬಿಜೆಪಿ ಸರ್ಕಾರದಲ್ಲಿ ರಕ್ಷಣೆಯಿಲ್ಲ.ಕೊಲೆಗುಡುಕರ ಸರ್ಕಾರ ಎಂದು ಆರೋಪ ಮಾಡಿದ್ದಾರೆ.ಪ್ರಾಮಾಣಿಕ ಸೇವೆಯಿಂದ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದ ತಹಸೀಲ್ದಾರ್ ಮೇಲೆ ಕೊಲೆ ನಡೆದಿದೆ.ಸರ್ವೆ ಕೆಲಸ ಮುಗಿಸಿ ಜೀಪ್‍ನ್ನು ಇನ್ನೇನು ಹತ್ತಬೇಕು ಅಂದಾಗ ಆರೋಪಿ ದಾಖಲೆಗಳನ್ನು ತೋರಿಸುವ ನೆಪದಲ್ಲಿ ಚಾಕುನಿಂದ ಕೊಲೆ ಮಾಡಿದ್ದಾನೆ.ಆರೋಪಿಯನ್ನು ಕಾಮಸಂದ್ರ ಪೊಲೀಸರು ಬಂಧಿಸಿದ್ದಾರೆ.ತಹಸೀಲ್ದಾರ್ ಚಂದ್ರಮೌಳೇಶ್ವರ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್‍ರನ್ನು ನೆನೆದುಕೊಂಡು ಕಣ್ಣೀರು ಹಾಕಿದರು.