ಪ್ರತಿಯೊಬ್ಬ ಪತ್ರಕರ್ತರಿಗೂ ಅರೋಗ್ಯ ಕಾರ್ಡ್ ಅವಶ್ಯಕತೆ ಇದೆ: ಸಚಿವ ಎಚ್. ನಾಗೇಶ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಸೆ.11: ಪ್ರತಿಯೊಬ್ಬ ಪತ್ರಕರ್ತರಿಗೂ ಅರೋಗ್ಯ ಕಾರ್ಡ್ ಅವಶ್ಯಕತೆ ಇದೆ. ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ವಾರಿಯರ್ಸ್‍ಗಳಿಗಿಂತ ಹೆಚ್ಚಾಗಿ ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಲು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ರಿಯಾಯಿತಿ ದರದ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ರಾಜ್ಯದಲ್ಲಿ ಈಗಾಗಲೇ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮಾತ್ರ ಆಯುಷ್ಮಾನ್ ಕಾರ್ಡ್ ವಿತರಿಸಲಾಗುವ ಜೂತೆಗೆ ಇತರೆ ಪತ್ರಕರ್ತರಿಗೂ ಆರೋಗ್ಯ ಕಾರ್ಡ್ ವಿತರಿಸಲು ಆಪ್ತ ಸಚಿವರೊಂದಿಗೆ ಚರ್ಚಿಸಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೊರಪ್ಪ ಅವರಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ವಯಸ್ಸು ಅದಂತೆಲ್ಲಾ ನಾವು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಇಂದು ಯಾವೂದೇ ದುರಭ್ಯಾಸಗಳು ಇಲ್ಲದವರಿಗೂ ಆರೋಗ್ಯದ ಸಮಸ್ಯೆಗಳು ಬರುತ್ತದೆ ಎಂದ ಅವರು ತಮ್ಮ ಅಣ್ಣನವರಿಗೆ ಬಂದ ಕಾಯಿಲೆಯನ್ನು ಉದಾಹರಿಸುತ್ತಾ ಇಂದು ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
40 ವರ್ಷ ಮೇಲಪಟ್ಟವರು ಪತ್ರಿ ನಿತ್ಯ ವಾಯು ವಿಹಾರ ಸೇರಿದಂತೆ ಪ್ರತಿನಿತ್ಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಸೇವಿಸುವ ಆಹಾರದಲ್ಲಿ ಮಿತಿಯನ್ನು ಕಾಪಾಡಿ ಕೊಳ್ಳಬೇಕು. ಮನೆಯ ವಾತಾವರಣ ಸರಿ ಇದ್ದರೆ ಮಾತ್ರ ಹೊರಗೆ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದು ಕಿವಿ ಮಾತು ತಿಳಿಸಿದರು.
ಕೋಲಾರ ಕಾರ್ಯನಿರತ ಪತ್ರಕರ್ತರ ಸಂಘವು ಮಾದರಿ ಸಂಘವಾಗಿದ್ದು ನಿಮ್ಮ ಬೇಡಿಕೆಗಳಲ್ಲಿ ಒಂದಾದ ನಿವೇಶನ ಮಂಜೂರಾತಿ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಮಂಜೂರಾತಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆ ಆಡಳಿತ ಮಂಡಳಿ ಪತ್ರಕರ್ತರಿಗೆ ಶೇ 20ರ ರಿಯಾಯಿತಿ ದರದ ಆರೋಗ್ಯ ಕಾರ್ಡ್ ವಿತರಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಪತ್ರಕರ್ತರು ಕೊರೋನಾ ಸಂದರ್ಭದಲ್ಲಿ ವಾರಿಯರ್ಸ್‍ಗಳಿಗಿಂತ ಹೆಚ್ಚಿನ ಶ್ರಮ ಪಟ್ಟಿರುವುದು ಅಭಿನಂದನಾರ್ಹವಾಗಿದೆ. ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಅತ್ಯಂತ ಅವಶ್ಯಕವಾಗಿದೆ. ಸರ್ಕಾರದಿಂದ ಆಯುಷ್ಮಾನ್ ಆರೋಗ್ಯ ಕಾರ್ಡ ಶೀಘ್ರದಲ್ಲೇ ವಿತರಿಸಲು ವಾರ್ತ ಮತ್ತು ಪ್ರಚಾರ ಇಲಾಖೆಗೆ ಸೂಚಿಸಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಶೋಭಿತಾ ಮಾತನಾಡಿ ಮಣಿಪಾಲ್ ಆಸ್ಪತ್ರೆಯು ಖಾಸಗಿ ಆಸ್ಪತ್ರೆಯಾಗಿದ್ದರೂ ಸಹ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ವಿತರಣೆ, ಹಾಗೂ ಉಪನ್ಯಾಸದಂತ ಜಾಗೃತಿ ಕಾರ್ಯಕ್ರಮಗಳಂತ ಸಾಮಾಜಿಕ ಸೇವೆ ಸ್ವಾಗತಾರ್ಹವಾಗಿದ್ದು ಇದನ್ನು ಪತ್ರಕರ್ತರು ಸದ್ಬಳಿಸಿ ಕೊಳ್ಳುವಂತಾಗಬೇಕೆಂದು ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ. ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ ಖಾಸಗಿ ಆಸ್ಪತ್ರೆಯಾಗಿದ್ದರೂ ಸಾಮಾಜಿಕ ಸೇವೆಯ ಬಗ್ಗೆ ಕಾಳಜಿ ಹೊಂದಿದೆ. ಈ ಹಿಂದೆ ಕೊರೋನಾ ಬಗ್ಗೆ ವೆಬಿನಾರ್ ಮೂಲಕ ಪತ್ರಕರ್ತರಿಗೆ ಕಾರ್ಯಗಾರವನ್ನು ಆಯೋಜಿಸಿತ್ತು. ಈಗಾ ಹೃದಯಾಘತಾದ ಬಗ್ಗೆ ವೆಬಿಗಾರ್‍ನಲ್ಲಿ ಸಂವಾದವನ್ನು ಆಯೋಜಿಸುವ ಜೂತೆಗೆ ಜಿಲ್ಲೆಯ 250 ಪತ್ರಕರ್ತರಿಗೆ ಅರೋಗ್ಯ ಕಾರ್ಡ್ ವಿತರಿಸುತ್ತಿರುವುದಕ್ಕೆ ಸಂಘದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಹಿರಿಯ ಪತ್ರಕರ್ತ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನಗರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಶೇ. 25ರಷ್ಟು ವಿನಾಯಿತಿ ಅಧಿಕೃತವಾಗಿ ನೀಡಿದ್ದು, ಇನ್ನು ಹೆಚ್ಚಿನ ರಿಯಾಯಿತಿ, ಉಚಿತವಾಗಿಯೋ ಚಿಕಿತ್ಸೆ ನೀಡುತ್ತಿದ್ದನ್ನು ನೆನಪಿಸಿ ಕೊಳ್ಳುತ್ತಾ ಅಭಿನಂಧಿಸಿದರು. ಅದೇ ಮಾದರಿಯಲ್ಲಿ ಮಣಿಪಾಲ್ ಆಸ್ಪತ್ರೆಯ ಸುದರ್ಶನ್ ಬಲ್ಲಾಳ್ ಅವರು ಮಾನ್ಯತ ಪತ್ರಕರ್ತರಿಗೆ ಮಾತ್ರ ಶೇ 20 ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿದಾಗ ಸಂಘದ ಒತ್ತಾಯ ಮನವಿಯ ಮೇರೆಗೂ ಎಲ್ಲರಿಗೂ ರಿಯಾಯಿತಿಯ ಆರೋಗ್ಯ ಕಾರ್ಡ್ ವಿತರಣೆಗೆ ಸಮ್ಮತಿಸಿದರು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿದರು. ಖಜಾಂಚಿ ಎ.ಜಿ ಸುರೇಶ್‍ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.