ಮಾ. 8: ಪ್ರಕಾಶ್ ರೈ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರವಾಗಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆಯೆಂದು ತಿಳಿದು ಬಂದಿದೆ.
ಈ ಮಾನಹಾನಿಕರ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರಿಗೆ ನ್ಯಾಯಲಯ ಜಾಮೀನುರಹಿತ ವಾರೆಂಟ್ ಜಾರಿಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಲು ಪ್ರತಾಪ್ ಸಿಂಹ ಅವರನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಿಕ್ಕೆ ನ್ಯಾ. ರಾಮಚಂದ್ರ ಹದ್ದರ್ ಆದೇಶ ನೀಡಿದ್ದಾರೆ.
ಈ ಟ್ವೀಟ್ ಪ್ರಕರಣದಲ್ಲಿ ಪ್ರತಾಪ್ ಸಿಂಹ ಮತ್ತು ಪ್ರಕಾಶ್ ರೈ ನಡುವೆ ಶೀತಕ ಸಂಘರ್ಷ ಏರ್ಪಟ್ಟಿತ್ತು. ಹಾಗಾಗಿ ಪ್ರಕಾಶ್ ರೈ ತಮ್ಮ ವಿರುದ್ದದ ಮಾನಹಾನಿಕಾರಕ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದ ಪ್ರತಾಪ್ ಸಿಂಹ ವಿರುದ್ಧ ಕೇವಲ ಒಂದು ರೂ. ಪರಿಹಾರ ಕೋರಿ ಪ್ರಕಾಶ್ ರೈ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಸಂಬಂಧ ವಿಚಾರಣೆಗಾಗಿ ನ್ಯಾಯಲಯಕ್ಕೆ ಹಾಜರಾಗುವಂತೆ ಪ್ರತಾಪ್ ಸಿಂಹ ಅವರಿಗೆ ಅನೇಕ ಬಾರಿ ನ್ಯಾಯಲಯ ಸಮನ್ಸ್ ಕಳಿಸಿತ್ತು. ಆದರೆ, ಪ್ರತಾಪ್ ನ್ಯಾಯಾಲಯಕ್ಕೆ ಹಾಜರಾಗುತಿರಲಿಲ್ಲಾ,ಹಾಗಾಗಿ ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರು. ಇಂದು ಸಂಸದ ಪ್ರತಾಪ ಸಿಂಹ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾಗ ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಿಕ್ಕೆ ಆದೇಶ ನೀಡಿದ್ದಾರೆ.
ಚಿತ್ರಗಳು ಕ್ರಪೆಯಿಂದ