ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಪೊಲೀಸ್ ಕಾನ್ಸ್‍ಟೆಬಲ್‍ನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಕೋಲಾರ : 2019-20 ಮತ್ತು 2020-21ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸೆಟೆಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ರಾಜ್ಯದಲ್ಲಿನ ಪ್ರಸ್ತುತ ಪರಿಸ್ಧಿತಿಯನ್ನು ಅವಲೋಕಿಸಿ ಅರ್ಜಿಗಳ ಆಹ್ವಾನದ ದಿನಾಂಕವನ್ನು ವಿಸ್ತರಿಸಲಾಗಿದೆ. ಇನ್ನುಳಿದ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಸಿಪಿಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ)ದ 558 ಹುದ್ದೆಗಳಿಗೆ ಹಾಗೂ ಎ.ಪಿ.ಸಿ (ಪುರುಷ), (ಸಿಎಆರ್/ ಡಿಎಆರ್), (ಕಲ್ಯಾಣ ಕರ್ನಾಟಕ)ದ 444 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 22 ಹಾಗೂ ಶುಲ್ಕ ಪಾವತಿಸಲು ಜೂನ್ 25 ಕೊನೆಯ ದಿನಾಂಕವಾಗಿತ್ತು, ಈ ಅವಧಿಯನ್ನು ಅರ್ಜಿ ಸಲ್ಲಿಸಲು ಜುಲೈ 09 ಹಾಗೂ ಶುಲ್ಕ ಪಾವತಿಸಲು ಜುಲೈ 13 ಕ್ಕೆ ವಿಸ್ತರಿಸಲಾಗಿದೆ.
ಸಿಪಿಸಿ (ಪುರುಷ ಮತ್ತು ಮಹಿಳಾ) ವಿಭಾಗದ 2007 ಹುದ್ದೆಗಳಿಗೆ ಹಾಗೂ ಎ.ಪಿ.ಸಿ (ಪುರುಷ), (ಸಿಎಆರ್/ಡಿಎಆರ್)ನ 1005 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 22 ಹಾಗೂ ಶುಲ್ಕ ಪಾವತಿ ಮಾಡಲು ಜೂನ್ 25 ಕೊನೆಯ ದಿನಾಂಕವಾಗಿತ್ತು, ಈ ಅವದಿಯನ್ನು ಅರ್ಜಿ ಸಲ್ಲಿಸಲು ಜುಲೈ 13 ಹಾಗೂ ಶುಲ್ಕ ಪಾವತಿಸಲು ಜುಲೈ 15 ರ ವರೆಗೆ ವಿಸ್ತರಿಸಲಾಗಿದೆ.
ಸ್ಪೇ.ಆರ್.ಪಿ.ಸಿ (ಪುರುಷ ಮತ್ತು ಮಹಿಳಾ), (ಕೆಎಸ್‍ಆರ್‍ಪಿ ಮತ್ತು ಐಆರ್‍ಬಿ)ಯ 2420 ಹುದ್ದೆಗಳಿಗೆ ಹಾಗೂ ಸ್ಪೇ.ಆರ್.ಪಿ.ಸಿ(ಪುರುಷ), (ಬ್ಯಾಂಡ್ಸ್‍ಮನ್),(ಕೆಎಸ್‍ಆರ್‍ಪಿ ಮತ್ತು ಐಆರ್‍ಬಿ)ಯ 252 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 15 ಹಾಗೂ ಶುಲ್ಕ ಪಾವತಿ ಮಾಡಲು ಜೂನ್ 18 ಕೊನೆಯ ದಿನಾಂಕವಾಗಿತ್ತು, ಅರ್ಜಿ ಸಲ್ಲಿಸಲು ಜುಲೈ 06 ಹಾಗೂ ಶುಲ್ಕ ಪಾವತಿ ಮಾಡಲು ಜುಲೈ 08 ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕೋಲಾರ ಜಿಲ್ಲೆಯ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.