ಪಿಯುಸ್ ನಗರ್ ಮಹಿಳಾ ದಿನಾಚರಣೆ: ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಧ್ರಡರಾಗೋಣ

ವರದಿ: ಲೀನಾ ತಾವ್ರೊ

ಪಿಯುಸ್ ನಗರ್ ಮಹಿಳಾ ದಿನಾಚರಣೆ: ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಧ್ರಡರಾಗೋಣ


ಕುಂದಾಪುರ, ಮಾ.5: ‘ಇವತ್ತು ಸಮಾಜದಲ್ಲಿ ಮಹಿಳೆಯರು ಸಾಕಸ್ಟು ಸಾಧನೆ ಮಾಡಿ, ಉನ್ನತ ಗೌರವವನ್ನು ಪಡೆದುಕೊಂಡಿದ್ದಾರೆ, ನಮ್ಮ ಜಿಲೆಯಲ್ಲೆ ನೋಡಿದರೆ, ಮಹಿಳೆಯರು ರಾಜಕೀಯದಲ್ಲಿ,ಆಡಳಿತದಲ್ಲಿ ಮತ್ತು ಇತರ ವಿಭಾಗಗಳಲ್ಲಿ ಉನ್ನತ ಮಟ್ಟದ ಸ್ಥಾನ ಗಳಿಸಿಕೊಂಡು ಪ್ರಜ್ವಲಿಸುತಿದ್ದಾರೆ, ಸರಕಾರವೂ ಕೂಡ ಮಹಿಳೆಯರ ಅಭಿವ್ರದ್ದಿ ಗೋಸ್ಕರ ಸಾಕಸ್ಟು ಯೋಜನೆಗಳನ್ನು ತಂದಿದೆ, ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು ನಾವು ಮಹಿಳೆಯರು ಸಮಾಜದಲ್ಲಿ ಸುಧ್ರಡರಾಗ ಬೇಕು’ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮಿ ಮಂಜು ಬಿಲ್ಲವ ಹೇಳಿದರು
ಅವರು ಕುಂದಾಪುರದ ಪಿಯುಸ್ ನಗರ್ ಇಗರ್ಜಿಯ ಮಹಿಳಾ ಸಂಘ, ಇಗರ್ಜಿಯ ಸಭಾಭವನದಲ್ಲಿ ಆಚರಿಸಲಾದ ಮಹಿಳಾ ದಿನಾಚರಣೆ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಪಿಯುಸ್ ನಗರ್ ಚರ್ಚಿನ ಧರ್ಮಗುರು ಸಂಘದ ಅಧ್ಯಾತ್ಮಿಕ ನಿರ್ದೇಶಕ ವಂ|ಜೋನ್ ಆಲ್ಫ್ರೆಡ್ ಬಾರ್ಬೊಜಾ ‘ಇವತ್ತು ಅನುಪಾತ ನೋಡಿದರೆ, ಹೆಣ್ಣು ಮಕ್ಕಳ ಸಂಖ್ಯೆ ಬಹಳ ಕಡಿಮೆ, ಇದೇ ಸ್ಥಿತಿ ಮುಂದುವರಿದರೆ, ಮುಂದೆ ಪರಿಸ್ಥಿತಿ ಬಹಳ ಕೆಟ್ಟದಾಗುತ್ತದೆ, ಆದರಿಂದ ಮಹಿಳೆಯರು ಹೆಚ್ಚು ಗಮನ ಕೊಡ ಬೇಕು, ಇವತ್ತು ಮಹಿಳೆ ಧಾರ್ಮಿಕತೆಯಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಪ್ರತಿಯೊಂದು ವಿಭಾಗದಲ್ಲಿ ಉತ್ತಮ ಸೇವೆ ನೀಡುತ್ತಾಳೆ’ ಎಂದು ಅವರು ಶ್ಲಾಗಿಸಿದರು,
ಈ ಸಂದರ್ಭದಲ್ಲಿ ‘ಕೊಂಕಣಿ ಸಾಹಿತ್ಯ ಆಕಾಡೆಮಿಯಿಂದ ಉತ್ತಮ ಕಥೆಗಳ ಪುಸ್ತಕ ಚಂದ್ರಮಚಿಂ ಖತಾಂ’ ಪ್ರಶಸ್ತಿ ಪಡೆದ ಲೇಖಕಿ ಶಿಕ್ಷಕಿ ಜೆವಿಲ್ ಮಂಜರಪಲ್ಕೆ (ಜ್ಯೋತಿ) ಇವರನ್ನು ಮತ್ತು ಪಶು ಸಂಗೋಪನೆ ಮಾಡಿ ಯಶಸ್ವಿಯಾಗಿ ಸಾಧನೆ ಮಾಡಿದ ಜೂಲಿಯಾನ ರೊಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಕುಂದಾಪುರ ತಾಲೂಕು ಮಟ್ಟದ ಭಾವನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಡೆಸಾ, ಪಾಲನ ಮಂಡಳಿ ಉಪಾಧ್ಯಕ್ಷ  ವಾಲ್ಟರ್ ಫೆರ್ನಾಂಡಿಸ್, ಪಾ.ಮ, ಕಾರ್ಯದರ್ಶಿ ಜೆನ್ನಿ ಡೆಸಾ ಉಪಸ್ಥಿತರಿದ್ದರು. ಮಹಿಳಾ ಮಂಡಳಿ ಅಧ್ಯಕ್ಷೆ ಎವ್ಲಿನ್ ಫೆರ್ನಾಂಡಿಸ್ ಸ್ವಾಗತಿಸಿದರು, ಕಾರ್ಯದರ್ಶಿ ರೇಶ್ಮಾ ಡಿಸೋಜಾ ವಂದನೆಗಳನ್ನು ಸಲ್ಲಿಸಿದರು. ಜ್ಯೋತಿ ಡಿಮೆಲ್ಲೊ ಇವರು ಕಾರ್ಯಕ್ರಮ ನಿರೂಪಿಸಿದರು.