ಪರಿಸರ ಮಾಲಿನ್ಯ ತಡೆಯಲು, ಸ್ವಚ್ಚ ಗಾಳಿಯನ್ನು ಪಡೆಯಲು ಗಿಡ ಮರಗಳನ್ನು ಬೆಳೆಸಬೇಕು : ಡಾ. ಕೆ.ಎನ್. ವೇಣುಗೋಪಾಲ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪರಿಸರ ಮಾಲಿನ್ಯ ತಡೆಯಲು ಹಾಗೂ ಸ್ವಚ್ಚ ಗಾಳಿಯನ್ನು ಪಡೆಯಲು ಪೂರಕವಾಗಿ ಗಿಡ ಮರಗಳನ್ನು ಬೆಳೆಸಬೇಕು, ಸ್ವಚ್ಚ ಪರಿಸರ ನಿರ್ಮಾಣಕ್ಕಾಗಿ ಸಮಾಜದ ಎಲ್ಲ ವರ್ಗದ ಜನರು ಸಹಕರಿಸಬೇಕು ಎಂದು ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಪೆÇಲೀಸ್ ವಸತಿ ಗೃಹದ ಆವರಣದಲ್ಲಿ ಶ್ರೀನಿವಾಸಪುರ ರೋಟರಿ ಸಂಸ್ಥೆಯ ವತಿಯಿಂದ ಈಗಾಗಲೆ ಹಲವಾರು ತರಹದ ಗಿಡಗಳನ್ನು ನಾಟಿ ಮಾಡಿದ್ದು, ರೋಟರಿ ಸಂಸ್ಥೆ ಮತ್ತು ಗೊರವಿಮಾಕಲಹಳ್ಳಿ ಗ್ರಾಮದ ವಿನಾಯಕ ಯುವಕ ಸಂಘದ ವತಿಯಿಂದ ಗಿಡಗಳಿಗೆ ಪಾತಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವೇಣುಗೋಪಾಲ್, ಉಸಿರಾಟಕ್ಕೆ ಶುದ್ದ ಗಾಳಿಯ ಅವಶ್ಯಕತೆ ಇದ್ದು, ಪರಿಸರ ಮಾಲಿನ್ಯ ಜನ ಹಾಗೂ ಜಾನುವಾರಗಳ ಅನಾರೋಗ್ಯಕ್ಕೆ ಕಾರಣವಾಗಿದೆ. ಗಿಡ ನೆಟ್ಟು ಪೆÇೀಷಿಸುವ ಕಾರ್ಯಕ್ಕೆ ಸಮಾಜದ ಎಲ್ಲರೂ ಕೈ ಜೋಡಿಸಬೇಕುಎಂದು ತಿಳಿಸಿದರು.
ಇದೆ ಸಮಯದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಶ್ರೀನಿವಾಸಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಸಬ್ ಇನ್ಸ್ ಪೆಕ್ಟರ್ ನಾರಾಯಣಪ್ಪ ಪರಿಸರ ಮಾಲಿನ್ಯದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎಂ. ಬೈರೇಗೌಡ, ಶ್ರೀಕಾಂತ್, ವಿನಾಯಕ ಯುವಕ ಸಂಘದ ಸುದರ್ಶನ್, ಮಂಜುನಾಥ ರೆಡ್ಡಿ, ರಾಜು ಮುಂತಾದವರು ಹಾಜರಿದ್ದರು.