ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ

ಲೇಖನ: ಬರ್ನಾಡ್ ಜೆ. ಡಿಕೋಸ್ತಾ: ಸಂಪಾದಕರು

ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ

 

ಪಾಂಬೂರು, ಫೆ.4: ಹುಟ್ಟುವಾಗ ನ್ಯೂನತೆ ಉಂಟಾಗಿ, ಮಾನಸಿಕ ಅಸಮೋತಲನ, ಅಂಗ ವೈಕಲ್ಯ, ಮುಖ, ಕಣ್ಣುಗಳ ವಕ್ರತೆ, ಮಾತನಾಡಲು ತೊದಲುವಿಕೆ, ನೆಡೆದಾಡಲು ಕಷ್ಟವಾಗುವ, ಊಟ ಮಾಡಲು ತಿಳಿಯದಂತಹ, ಇಂತಹ ಅದೇಷ್ಟೊ ನ್ಯೂನತೆಗಳಿಂದ ಬಳಲುತ್ತಿರುವ, ಹೆತ್ತವರಿಗೇ ಅವರನ್ನು ಪೋಷಿಸಲು ಅಸಹಯಾಕ  ಕಷ್ಟವಾಗುವಂತ ಮಕ್ಕಳನ್ನು ಆದರಿಸುವ, ಸಾಕುವ, ಕಲಿಸುವ, ಅವರನ್ನು ಜೀವನದಲ್ಲಿ ಇತರರಂತೆ, ಯೋಗ್ಯರನ್ನಾಗಲು, ಶ್ರಮಿಸುತ್ತಿರುವ ಒಂದು ವಸತಿ ಶಾಲೆ ಇದೆ, ಇದು ಉಡುಪಿ ತಾಲೂಕಿನ ಶಿರ್ವಾ ಹತ್ತಿರದ ಪಾಂಬೂರಿನಲ್ಲಿ ಈ ಶಾಲೆ ಇದೆ. ಇದನ್ನು ಮಾನಸ ಎಂದು ಹೆಸರು. ಇಲ್ಲಿ ಮುಂಬಯ್, ಕಲ್ಕೊತ್ತಾ, ಹಿಡಿದು ನಮ್ಮ ದೇಶದ ಎಲ್ಲಾ ಭಾಗಗಳ, ಎಲ್ಲಾ ಧರ್ಮಗಳ ಮಕ್ಕಳು ಈ ಶಾಲೆಯ ವಸತಿ ಗ್ರಹಗಳಲ್ಲಿ ನಿಂತು ಶಿಕ್ಷಣ ಪಡೆಯುತಿದ್ದಾರೆ.
ಈ ಶಾಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿರುವಾಗ ದಕ್ಷಿಣ ಕನ್ನಡ ಕೆಂದ್ರಿಯ ಕಥೊಲಿಕ್ ಸಭಾ ಈ ಮಾನಸ ಕೆಂದ್ರವನ್ನು ನ್ಯೂನ್ಯತೆಯಿರುವ ಮಕ್ಕಳ ಶ್ರೇಯೋಭಿವ್ರದ್ದಿಗಾಗಿ ನಿಸ್ವಾರ್ಥ ಧ್ಯೆಯದೊಂದಿಗೆ ಆರಂಭಿಸಿತು, ಈ ಶಾಲೆಗೆ ಸರಕಾರದಿಂದ ಮಕ್ಕಳ ಸಂಖ್ಯೆಯ ಆದಾರದಲ್ಲಿ ಅಲ್ಪ ಮೊತ್ತದ ಸಹಾಯ ಹಣ ಮಾತ್ರ ದೊರೆಯುತ್ತದೆ, ಇಂತಹ ಸಂಸ್ಥೆ ನೆಡಸಲು, ಇಂತಹ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಲು, ಬಹಳ ಕಷ್ಟವಿದೆ, ಇದೊಂದು ಸಾಹಸವೇ ಸರಿ, ಇದೆಲ್ಲವನ್ನು ಕಥೊಲಿಕ್ ಸಭಾ ದಾನಿಗಳ ಒಳ್ಳೆ ಮನಸ್ಸಿನವರು ಕೊಟ್ಟ ಸಹಾಯದಿಂದ ನೆಡೆಸಿಕೊಂಡು ಹೋಗುತ್ತದೆ.
ಇಂತ ಮಕ್ಕಳ ಆರೈಕೆ, ಅವರನ್ನು ಕಲಿಸುವುದು, ಸಾಮನ್ಯರಿಗೆ ಆಗುವಂತಹ ವಿಷಯವಲ್ಲಾ, ಇಂತಹ ಸೇವೆ ಮಾಡಲು, ಉದಾರ ಮನಸ್ಸಿರಬೇಕು, ಅಪಾರವಾದ ಸಹಿಷ್ಣುತೆ ಬೇಕು, ಜೊತೆಗೆ ಇವರು ಮಾಡುವಂತಹ ಹಟವನ್ನು ಮೆಟ್ಟಿ ನಿಲ್ಲಲು ದ್ರಢತೆ, ಗಟ್ಟಿ ಗುಂಡಿಗೆ, ಹಾಗೇ ನಿಶ್ಚಯವಾಗಿ ಅಪಾರವಾದ ಮಾನವೀಯತೆ ಇರುವಂತವರು ಬೇಕು, ಇಂತಹ ಸೇವೆಗಾಗಿಯೆ ಈ ಮಾನಸ ಕೇಂದ್ರದಲ್ಲಿ ಹಲವರು ಇಲ್ಲೆ ಸೇವೆ ನೀಡುತಿದ್ದಾರೆ. 16 ಮಂದಿ ಶಿಕ್ಷಕರು, 7 ಮಂದಿ ಶಿಕ್ಷಕೇತರ ಸಿಬಂದಿ, ಇವರನ್ನು ನೋಡಿಕೊಳ್ಳಲು 16 ಮಂದಿ ವಸತಿ ಗ್ರಹದ ಸಿಬ್ಬಂದಿ ಇದ್ದಾರೆ. ವಾರ್ಡನ್‍ಗಳಿದ್ದಾರೆ, ಹೋಲಿ ಸ್ಪಿರಿಟ್ ಮೇಳದ ಸಿಸ್ಟರ್ ಅನ್ಸಿಟಾ ಫೆರ್ನಾಂಡಿಸ್ ಈ ಶಾಲೆಯಲ್ಲಿ ಪ್ರಾಂಸುಪಾಲಾರಾಗಿ ಸೇವೆ ಸಲ್ಲಿಸುತಿದ್ದಾರೆ, ಇವರು ಹೇಳುವ ಪ್ರಕಾರ, ಇಂತಹ ಮಕ್ಕಳಿಗೆ ಕೂಡ ಕಂಪ್ಯೂಟರ ಪಾಠವನ್ನು ಕಲಿಸಿ ಒನ್ ಲಾಯ್ನ್ ಉದ್ಯೋಗದಲ್ಲಿ ತೊಡಗಿಸುವಂತೆ ಮಾಡುತ್ತಾರೆ, ಇತರ ಮಕ್ಕಳು, ಅಡಿಗೆ, ತರಕಾರಿ ಕತ್ತರಿಸುವಂತಹ ಕೆಲಸಗಳಲ್ಲಿ ತೊಡಗಿಸುವಂತಕ ಕ್ಷಮತೆಯನ್ನು ತುಂಬಿಸಿಸುತಿದ್ದಾರೆ. ಇತರ ಮಕ್ಕಳು ಮಾಡುವಂತೆ ಇವರನ್ನು ಹಾಡಲು, ಭಾಷಣ ಮಾಡಲು ಕಲಿಸಲಾಗುತ್ತದೆ, ವಿಶೇಷ ಮಕ್ಕಳ ಆಟೋಟಗಳ ಸ್ಫರ್ಧೆಗಳಲ್ಲಿ ಈ ಸಂಸ್ಥೆಯ ಹಲವಾರು ಮಕ್ಕಳು ಪ್ರಶಸ್ತಿಯನ್ನು ಗಳಿಸಿಕೊಂಡಿವೆ. ಇದಲ್ಲದೆ ಇವರನ್ನು ಭೇಟಿ ಮಾಡಲು ಬಂದರೆ, ಶುದ್ದ ಮನಸ್ಸಿನಿಂದ ಬೆರೆತು, ವಂದಿಸುತ್ತಾರೆ, ಮಾತನಾಡುತ್ತಾರೆ, ಸಂತೋಷಗೊಳ್ಳುತ್ತಾರೆ, ಅಂದರೆ ಈ ಮಕ್ಕಳಲ್ಲಿ ಉತ್ತಮ ಸಂಸ್ಕ್ರತಿಯನ್ನು ಬೆಳೆಸಿದ್ದಾರೆ.
ಇಲ್ಲಿ ಇಂತಹ ನ್ಯೂನ್ಯತೆ ಇರುವ 6 ವರ್ಷದ ಪ್ರಾಯದ ಮಕ್ಕಳನ್ನು ಭರ್ತಿ ಮಾಡಿಕೊಂಡು, ಅವರಿಗೆ 25 ವರ್ಷ ತುಂಬುವವರೆಗೆ ಶಿಕ್ಶಣವನ್ನು ನೀಡುತ್ತಾರೆ, ಇಂತಹ ಮಕ್ಕಳ ಪೋಷಕರಿಂದ ಇವರು ಧನ ಸಹಾಯವನ್ನು ಅಪೇಕ್ಷಿಸುವುದಿಲ್ಲಾ, ಸ್ವಮನಸ್ಸಿನಿಂದ ನೀಡಿದರೆ, ಧನ ಸಹಾಯ ಸ್ವೀಕರಿಸುತ್ತಾರೆ. ಇಲ್ಲಿ ಪ್ರಸ್ತೂತ ವರ್ಷದಲ್ಲಿ ಒಟ್ಟು 116 ಮಕ್ಕಳು ಇಲ್ಲಿ ಶಿಕ್ಷಣವನ್ನು ಪಡೆಯುತಿದ್ದಾರೆ,ಅದರಲ್ಲಿ ಹುಡುಗರು 76, ಹುಡುಗಿಯರು 40, ಇಅದರಲ್ಲಿ ಮಾನಸ ಕೇಂದ್ರದ ವಸತಿ ಗ್ರಹದಲ್ಲಿ 53 ಮಕ್ಕಳು ವಾಸಿಸುತ್ತಾರೆ, ಇದರಲ್ಲಿ 34 ಹುಡುಗರು, 19 ಹುಡುಗಿಯರು ವಾಸಿಸುತ್ತಾರೆ, ಇವರಿಗೆ ಯಾವುದೇ ರೀತಿಯ ಶುಲ್ಕವಿಲ್ಲಾ, ಉಟ ತಿಂಡಿ ವಸತಿ ಎಲ್ಲವೂ ಫ್ರಿ. ಇಲ್ಲಿ ಕಲಿಯಲು ಬರುವ ಮಕ್ಕಳಿಗಾಗಿ ಎರಡು ಬಸ್ಸಗಳ ವ್ಯವಸ್ಥೆ ಇದೆ. ಎನೊಂದು ಧನ ತೆಗೆದುಕೊಳ್ಳದೆ ಬೆಳಿಗ್ಗೆ ಕರೆದುಕೊಂಡು ಬಂದು ಸಾಯಂಕಾಲ ಮನೆಗೆ ಬಿಡುವ ವ್ಯವಸ್ಥೆ ಇದೆ. ಇಷ್ಟರ ತನಕ ಈ ವಿಶೇಷ ಶಾಲೆಯಿಂದ ಸುಮಾರು 684 ವಿಶೇಶ್ಕ ಮಕ್ಕಳು ವಿಧ್ಯೆ ಪಡೆದು ನಿರ್ಗಮಿಸಿ, ಅದರಲ್ಲಿ ಕೆಲವರು ಉದ್ಯೋಗ ಮಾಡಿಕೊಂಡು, ಒನ್ ಲೈನ್ ಕೆಲಸದಲ್ಲಿ ತೊಡಗಿದ್ದಾರೆ ಮತ್ತು ಕೆಲವರು ಮದುವೆಯಾಗಿ ದಾಂಪತ್ಯ ಜೀವನ ನೆಡೆಸುತಿದ್ದಾರೆಂದು ಪ್ರಾಂಶುಪಾಲೆ ಸಿಸ್ಟರ್ ಅನ್ಸಿಲ್ಲಾ ತಿಳಿಸಿದರು.
ನಾವು ಕುಂದಾಪುರ ಕಥೊಲಿಕ ಸಭಾ ಘಟಕದಿಂದ ಈ ಮಾನಸ ಕೇಂದ್ರಕ್ಕೆ ಭೇಟಿಮಾಡುವ ಕಾರ್ಯಕ್ರಮ ಹಮ್ಮಿಕೊಂಡು ಭಾನುವಾರ ನಾವು 29 ಮಂದಿ ಹೊರಟೆವು, ಅಲ್ಲಿ ನಮ್ಮಗೆ ಉತ್ತಮ ಸ್ವಾಗತ ದೊರೆಯಿತು. ಈ ಸಂಸ್ಥೆಯ ಅಧ್ಯಕ್ಷ ಹೆಂಡ್ರಿ ಮಿನೇಜಸ್ (ಕಥೊಲಿಕ್ ಸಭಾದಿಂದ ನಿಯೋಜಿಸಲ್ಪಟ್ಟವರು) ಇವರು ನಮ್ಮನ್ನು ಸ್ವಾಗತಿಸಿದರು, ಮತ್ತು ಮಾನಸ ಕೇಂದ್ರದ ಬಗ್ಗೆ ವೀಡಿಯೊ ಚಿತ್ರಣವನ್ನು ಮುಂದಿಟ್ಟರು. ಹಾಗೇ ಮಾನಸದ ವಸತಿ ಕೇಂದ್ರದಲ್ಲಿದ್ದು ಕಲಿಯುತ್ತಿದ್ದ ಹೆಣ್ಣ ಮಕ್ಕಳು ಗೀತೆಯ ಮೂಲಕ ಸ್ವಾಗತಿಸಿದರು. ಪ್ರಾಂಶುಪಾಲೆ ಸಿಸ್ಟರ್ ಅನ್ಸಿಟಾ ಫೆರ್ನಾಂಡಿಸ್ ಈ ಶಾಲೆಯ ಬಗ್ಗೆ ವಿವರಣೆ ನೀಡಿದರು. ವಿನಯಾ ಡಿಕೋಸ್ತಾ ಮತ್ತು ಲೋನಾ ಲುವಿಸ್ ವಿಶೇಷ ಮಕ್ಕಳ ಮನೋರಂಜನೆಗಾಗಿ ಒಳ ಆಟಗಳನ್ನು ನೆಡೆಸಿಕೊಟ್ಟರು. ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ಮತ್ತು ಇತರರು ಬಹುಮಾನಗಳನ್ನು ವಿತರಿಸಿದರು. ಹಾಗೇ ಸಂಘಟನೆಯಿಂದ ಸಂಗ್ರಹಿಸಿದ ಧನವನ್ನು ಹಸ್ತಾಂತರಿಸಲಾಯಿತು. ಮಾಜಿ ಕಥೊಲಿಕ್ ಸಭಾ ಅಧ್ಯಕ್ಷ ಜೇಕಬ್ ಡಿಸೋಜಾ ಮಾನಸ ಕೇಂದ್ರದ ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡುತ್ತಿರುವಿರಿ’ ಎಂದು ಶ್ಲಾಘಿಸಿದರು. ನಿಯೋಜಿತ ಅಧ್ಯಕ್ಷ ವಾಲ್ಟರ್ ಡಿಸೋಜಾ, ಉಪಾಧ್ಯಕ್ಷ ಬರ್ನಾಡ್ ಜೆ. ಕೋಸ್ತಾ, ಮಾಜಿ ಅಧ್ಯಕ್ಷರಾದ ಜಾನ್ಸನ್ ಡಿಆಲ್ಮೇಡಾ, ವಿನೋದ್ ಕ್ರಾಸ್ಟೊ, ಆಮ್ಚೊ ಸಂದೇಶ್ ಪ್ರತಿನಿಧಿ ವಿನ್ಸೆಂಟ್ ಡಿಸೋಜಾ, ಮುಂತಾದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸ್ವಲ್ಪ ಚಿಂತಿಸಿ ನೋಡಿ ನಮಗೆ ದೇವರ ದಯೆಯಿಂದ ಆರೋಗ್ಯದಲ್ಲಿ ಚೆನ್ನಾಗಿರುವ ಮಕ್ಕಳನ್ನು ಪಡೆದಿದ್ದೆವೆ, ದೇವರಿಗೆ ನಾವು ಕ್ರತ್ಜನೆತೆಯನ್ನು ಹೇಳ ಬೇಕು, ಹಸಿವೆ ಎನೆಂದು ಗೊತ್ತಿಲ್ಲದವರಿಗೆ ಹಸುವಿನ ನೋವು ನರಳಾಟ ತಿಳಿಯಲಾಗುತ್ತಿಲ್ಲಾ, ಹಾಗೇ ಆರೋಗ್ಯದಲ್ಲಿ ಚೆನ್ನಾಗಿರುವ ಮಕ್ಕಳನ್ನು ಪಡೆದಿರುವ ಹೆತ್ತವರಿಗೆ, ನ್ಯೂನ್ಯತೆ ಇರುವ ಮಕ್ಕಳ ಮತ್ತು ಅವರ ಹೆತ್ತವರ ದುಖ ತಿಳಿಯದು, ಒಂದು ಕ್ಷಣ ಯೋಚಿಸಿ ನೋಡಿ ನಮಗೆ ಅಂತಹ ಒಂದು ಮಗು ನಮಗೆ ದಯಾಪಾಲಿಸಿದ್ದದಾದ್ದಲ್ಲಿ, ನಮ್ಮ ಪರಿಸ್ಥಿತಿ ಹೇಗಾಗ ಬಹುದಿತ್ತು ?

   ನಾವು ಅವರ ಮೇಲೆ ಕನಿಕರ ಬಿರೋಣ, ನಮಗೆ ಅಂತವರ ಸೇವೆ ಮಾಡಲಾಗುತ್ತಿಲ್ಲಾ, ಆದರೆ, ಇಂತಹ ಮಕ್ಕಳಿಗೆ ಪೋಶಿಸುವ, ಕಲಿಸುವ ಅವರನ್ನು ಸಮಾಜದಲ್ಲಿ ಯೋಗ್ಯರಾಗುವಂತ್ತೆ ಶ್ರಮಿಸುತ್ತಿರುವ ಈ ಕೇಂದ್ರಕ್ಕೆ ಕಿಂಚ್ಚಿತ್ತು ಧನ ಸಹಾಯವನ್ನು ಮಾಡಲು ಖಂಡಿತ ಸಾಧ್ಯವಿದೆ, ಹೀಗೆ ಸಾಧ್ಯ ವಿದ್ದವರು, ದಯಾಳುಗಳು, ದಾನಿಗಳು ಧನ ಸಹಾಯ ಮಾಡುವ ಒಳ್ಳೆಯ ಮನಸಿದ್ದವರು, ಕೆಳಗೆ ಕಾಣಿಸಿದ ಖಾತೆಗೆ ಖಾತೆಗೆ ಕಳುಹಿಸಬಹುದು. ಅಥವ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿದ ದೂರವಾಣಿ ಅಥವ ಮೈಲ್ ಮೂಲಕ ಸಂಪರ್ಕಿಸ ಬಹುದು.

Account Name : Manasa Rehabilitation & Training Centre

Account No.     : 02382200000027

Account Type   : S.B. Account

Bank                  :Syndicate Bank

Branch              : Shankarapura

IFSC CODE       : SYNB0000238

MICR No            : 576025025

 

Henry Menezes

President

Manasa Rehabilitation & Training Centre

Pamboor, Paddubelle, Udupi – 574116
Tel:-0820-2559797, Mob: 8277219523
www.manasarehabilitation.org