ನೂತನ ಕೋಲಾರ ಜಿಲ್ಲಾ ಆಟೋಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ನೂತನ ಕೋಲಾರ ಜಿಲ್ಲಾ ಆಟೋಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ

 

ಕೋಲಾರ: ಪ್ರತಿ ಕ್ಷೇತ್ರವೂ ಸ್ಪರ್ಧಾತ್ಮಕತೆಯಿಂದ ಕೂಡಿದ್ದು ವ್ಯಾಪರಿಕರಣದಲ್ಲಿ ತಮ್ಮ ಛಾಪು ಮೂಡಿಸಲು ಶ್ರಮಪಡುವುದು ಅತ್ಯವಶ್ಯಕ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶಪ್ಪ ತಿಳಿಸಿದರು.
ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಕೆಜಿಎನ್ ಪ್ಯಾಲೇಸ್ ನಲ್ಲಿ ಮಂಗಳವಾರ ನೂತನ ಕೋಲಾರ ಜಿಲ್ಲಾ ಆಟೋಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಆಧುನಿಕ ಜೀವನ ಬಿರುಸಿನಿಂದ ಕೂಡಿದ್ದು, ಪ್ರತಿಯೊಬ್ಬರು ವಾಹನಕ್ಕೆ ಮೊರೆ ಹೋಗಿದ್ದಾರೆ. ಆ ವಾಹನಕ್ಕೆ ಬೇಕಾದ ಬಿಡಿಭಾಗಗಳ ವ್ಯಾಪರವು ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರವಾಗಿದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಲು ಶಿಸ್ತು, ಶ್ರಮ ಮುಖ್ಯವಾಗಿದೆ ಎಂದು ಹೇಳಿದರು. ಆಟೋಮೊಬೈಲ್ಸ್ ವ್ಯಾಪಾರ ಬಲು ಕಷ್ಟಕರವಾಗಿದ್ದು, ಇಲ್ಲಿ ದಿನಕ್ಕೆ ಹೊಸ ಹೊಸ ಅವಿμÁ್ಕರಗಳು ಉದ್ಭವಿಸುತ್ತದೆ. ಇದಕ್ಕೆ ಬಂಡವಾಳ ಹೂಡಿಕೆ ಮಾಡಲು ಸಾಲ ಮಾಡಿ ವ್ಯಾಪಾರ ಮಾಡುವುದಲ್ಲದೆ. ಸರ್ಕಾರಕ್ಕೆ ಲೆಕ್ಕ ತೋರಿಸುವುದು ಜಿಎಸ್ ಟಿ ಕಟ್ಟಿ ಲಾಭ ದೊರಕುವುದು ಅಸಾಧ್ಯವಾಗಿದೆ ಎಂದರು. ಯಾವುದೇ ಬಿಸಿನೆಸ್ ಮಾಡಿದರು ಗ್ರಾಹಕರ ನಂಬಿಕೆ, ಒಡಂಬಡಿಕೆ ಉಳಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಈ ಸಂಘವು ಪ್ರತಿ ತಿಂಗಳು ಸಭೆ ನಡೆಸುವುದು, ವಾರ್ಷಿಕೋತ್ಸವ ಆಚರಿಸಿ ಒಗ್ಗಟ್ಟಿನಿಂದ ಸಂಘವನ್ನು ಅಭಿವೃದ್ಧಿ ಪಡಿಸಿ ಎಂದು ಕರೆನೀಡಿದರು.
ಮಾನವ ಹಕ್ಕುಗಳ ಅಧ್ಯಕ್ಷ ಲಕ್ಷ್ಮಣ್ ಸಿಂಗ್ ಮಾತನಾಡಿ, ಸಂಘ, ಸಂಘಟನೆ ಮಾಡುವುದರ ಜತೆಗೆ, ವಾಹನದ ಬಿಡಿಭಾಗಗಳನ್ನು ಎಲ್ಲೆಂದರಲ್ಲಿ ಬಂದು ಮಾರುವ ಸ್ಥಿತಿ ನಿರ್ಮಾಣವಾಗಿದೆ. ಆ ಕಳಪೆ, ಗುಣಮಟ್ಟವಿಲ್ಲದ ವಸ್ತುವನ್ನು ಕೊಂಡರೆ ಏನಾಗುತ್ತದೆ ಎಂದು ಗ್ರಾಹಕರಿಗೆ ಅರಿವು, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು. ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ದಲ್ಲಾಳಿಗಳು ನೇರವಾಗಿ ಗ್ಯಾರೇಜ್ ಗಳಿಗೆ ತೆರಳಿ ಬಿಡಿಭಾಗಗಳು, ಇಂಜಿನ್ ಆಯಿಲ್ ಮುಂತಾದ ಹಲವಾರು ವಸ್ತುಗಳನ್ನು ಮಾರುತ್ತಾರೆ. ಅದನ್ನು ತಡೆಯುವ ಕಾರ್ಯ ಈ ಸಂಘದಿಂದ ಆಗಬೇಕಾಗಿದೆ. ನಿಮ್ಮ ಕುಟುಂಬಕ್ಕೆ ಹಾಗೂ ಮಕ್ಕಳ ಪ್ರಗತಿಗೆ ಬೇಕಾದ ಎಲ್ಲಾ ಚಟುವಟಿಕೆಗಳು ಸಂಘದಡಿ ನಡೆಯಲಿ ಎಂದು ನುಡಿದರು.
ಆಟೊಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ.ಖಾನ್ ಮಾತನಾಡಿ, ನೂತನವಾಗಿ ಸಂಘವು ಜನಿಸಿದ್ದು, ಇದು ಬೆಳೆದು ದೊಡ್ಡದಾಗಲು ಹೆಚ್ಚಿನ ಸಮಯ ಬೇಕಾಗಿದೆ. ಒಗ್ಗಟ್ಟಿನಿಂದ ಈ ಶಿಶುವನ್ನು ಜೋಪಾನವಾಗಿ ಹೆಮ್ಮರವಾಗಿ ಮಾಡಿಸುವ ಜವಾಬ್ದಾರಿ ನಮ್ಮೆಲ್ಲರದು. ಆಗ ನಮಗೆ ಈ ಸಂಘವು ನೆರಳು ನೀಡುತ್ತದೆ ಎಂದು ನುಡಿದರು.
ಈ ವೇಳೆ ಸಂಘದ ವತಿಯಿಂದ 6 ತಾಲೂಕಿನ ಆಟೋ ಮೊಬೈಲ್ಸ್ ಮಾಲೀಕರಿಗೆ ಗುರುತಿನ ಚೀಟಿ ಹಾಗೂ ಸಂಘದ ಸದಸ್ಯತ್ವ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಪಾಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಆಟೋ ಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎನ್.ಜೆ.ಅಜಯ್, ಕಾರ್ಯದರ್ಶಿ ಸಿ.ಸುರೇಶ್ ಕುಮಾರ್ ಬಫಾನ, ಖಾಜಾಂಚಿ ವಿ.ರಾಜೇಶ್ ಕುಮಾರ್, ಪದಾಧಿಕಾರಿಗಳಾದ ಧನಶೇಖರ್, ಅಬ್ದುಲ್ ವಾಜಿದ್ ಪಾಷ, ಸೈಯದ್ ಅಮೀರ್, ಬಿ.ಪಿ.ಸಂತೋμï, ಮೊಹಮದ್ ಜಮೀರ್, ಸೈಫುಲ ಷರೀಫ್, ಆರ್.ನಂದೀಶ್, ಶೇಕ್ ರಫೀಉಲ್ಲಾ, ಸೈಯದ್ ಅಫ್ಸರ್ ಮುಂತಾದವರು ಭಾಗವಹಿಸಿದ್ದರು.