ನಿವಾಸಪುರದಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ನಂದಿನಿ ಮಿಲ್ಕ್‌ ಪಾರ್ಲರ್‌ ಅನ್ನು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ಉದ್ಘಾಟಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ನಿವಾಸಪುರದಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ನಂದಿನಿ ಮಿಲ್ಕ್‌ ಪಾರ್ಲರ್‌ ಅನ್ನು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ಉದ್ಘಾಟಿಸಿದರು.

ಶ್ರೀನಿವಾಸಪುರ: ರೈತರ ಹಿತದೃಷ್ಟಿಯಿಂದ ಗ್ರಾಹಕರು ನಂದಿನಿ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಮನವಿ ಮಾಡಿದರು.
  ಪಟ್ಟಣದ ಎಂಜಿ ರಸ್ತೆಯ ವಾಸವಿ ಕಲ್ಯಾಣ ಮಂಟಪದ ಸಮೀಪ ಹೊಸದಾಗಿ ತೆರೆಯಲಾಗಿರುವ ನಂದಿನಿ ಮಿಲ್ಕ್‌ ಪಾರ್ಲರ್‌ ಉದ್ಘಾಟಿಸಿ ಮಾತನಾಡಿ, ಮಳೆ ಹಾಗೂ ಅಂತರ್ಜಲ ಕೊರತೆಯಿಂದ ಬಳಲಿರುವ ರೈತರ ಪಾಲಿಗೆ ಕ್ಷೀರೋತ್ಪಾದನೆ ಭರವಸೆಯ ಬೆಳಕಾಗಿದೆ. ಬೇರೆ ಬೇರೆ ಕಾರಣಗಳಿಂದ ಕ್ಷೀರೋತ್ಪಾದನೆ ಲಾಭದ ಕಸುಬಾಗಿ ಉಳಿದಿಲ್ಲ. ಹಾಲು ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ. ಕೋಚಿಮುಲ್‌ ವಿವಿಧ ಸೌಲಭ್ಯ ಒದಗಿಸುತ್ತಿದೆ. ಇದರ ಮಧ್ಯೆ ಗ್ರಾಹಕರು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವುದರ ಮೂಲಕ ರೈತರ ನೆರವಿಗೆ ಬರಬೇಕು ಎಂದು ಹೇಳಿದರು.  
  ನಂದಿನಿ ಹಾಲಿನ ಉತ್ಪನ್ನಗಳನ್ನು ಅತ್ಯಂತ ಸ್ವಚ್ಛ ವಾತಾವರಣದಲ್ಲಿ, ಕಲಬೆರಕೆ ಇಲ್ಲದಂತೆ ತಯಾರಿಸಲಾಗುತ್ತಿದೆ. ಶುಚಿ ಹಾಗೂ ರುಚಿಗೆ ಹೆಸರಾದ ನಂದಿನಿ ಉತ್ಪನ್ನಗಳು ಜನರ ವಿಶ್ವಾಸಕ್ಕೆ ಪಾತ್ರವಾಗಿವೆ. ಉತ್ಸಾಹಿ ಯುವಕರು ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರುವುದರ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
  ರೈತರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೋಚಿಮುಲ್‌ ಸೌಲಭ್ಯ ಪಡೆಯಲು ಅದರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕಬೇಕು. ಕೆಲವರು ಖಾಸಗಿ ಡೇರಿಗಳಿಗೆ ಹಾಲು ಹಾಕುವುದರಿಂದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು. ಉತ್ತಮ ಗುಣಮಟ್ಟದ ಹಾಲಿನಿಂದ, ಅತ್ಯುತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
  ಕ್ಯಾಂಪ್‌ ಕಚೇರಿ ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್‌, ಸಹಾಯಕ ವ್ಯವಸ್ಥಾಪಕ ನರಸಿಂಹಯ್ಯ, ಮಾರುಕಟ್ಟೆ ಅಧಿಕಾರಿ ವಿಜಯ ಕುಮಾರ್, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್‌, ಗಣೇಶ್‌, ನರಸಿಂಹರಾಜು, ತಾಲ್ಲೂಕು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್‌.ಶಿವಪ್ರಕಾಶ್‌, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ, ವ್ಯವಸ್ಥಾಪಕರಾದ ಎಸ್‌.ಕಿಶೋರ್‌, ಎಸ್‌.ಲಕ್ಷ್ಮಣಬಾಬು ಇದ್ದರು.