ನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ  ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚೆಕ್ ವಿತರಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ  ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚೆಕ್ ವಿತರಿಸಿದರು.

  • ನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ  ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚೆಕ್ ವಿತರಿಸಿದರು.

ಶ್ರೀನಿವಾಸಪುರ:  ಡಿಸಿಸಿ ಬ್ಯಾಂಕ್‌ ಸಾಲ ಪಡೆದವರು ಸಾಲ ಸದುಪಯೋಗ ಪಡೆಸಿಕೊಳ್ಳುವುದರ ಜೆಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

  ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಆವರಣದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ  ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಚೆಕ್ಕ ವಿತರಿಸಿ ಮಾತನಾಡಿ, .ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಸಾಲದ ಮೊತ್ತವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರುಬದಲಾದ ಪರಿಸ್ಥಿತಿಯಲ್ಲಿ ರೂ.50 ಸಾವಿರದಲ್ಲಿ ಒಂದು ಒಳ್ಳೆ ಸೀಮೆ ಹಸು ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾಲದ ಮೊತ್ತವನ್ನು ಹೆಚ್ಚಿಸುವ ಬ್ಯಾಂಕ್‌ ಸಾಲದ ಮೊತ್ತವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದರು.

  ಕ್ಷೇತ್ರದ 130 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ರೂ. 5 ಲಕ್ಷದಂತೆ ರೂ. 7 ಕೋಟಿ ಸಾಲ ನೀಡಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದಾಗ, ಈ ಸಾಲವನ್ನು ಬಡ್ಡಿರಹಿತ ಸಾಲವನ್ನಾಗಿ ಪರಿವರ್ತಿಸಲಾಯಿತು. ರೂ.50 ಸಾವಿರದ ವರೆಗೆ ಪಡೆದ ಸಾಲಕ್ಕೆ ಬಡ್ಡಿ ಇರುವುದಿಲ್ಲ. ರೂ.1 ಲಕ್ಷ ಸಾಲ ನೀಡಿದಾಗ ಅದರ ಅರ್ಧದಷ್ಟು ಮೊತ್ತಕ್ಕೆ ಬಡ್ಡಿ ಕಟ್ಟಬೇಕಾಗಿ ಬರಬಹುದು. ಅದು ಇಂದಿನ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿದೆ ಎಂದು ಹೇಳಿದರು.

  ಮಹಿಳೆಯರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಈ ಸಾಲ ನೀಡಲಾಗುತ್ತಿದೆ. ಪಡೆದುಕೊಂಡ ಸಾಲವನ್ನು ಉದ್ದೇಶಿತ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿ ಅಭಿವೃದ್ಧಿ ಸಾಧಿಸಬೇಕು. ಹಾಗೆಯಾ ಪಡೆದ ಸಾಲವನ್ನು ಕಾಲಕ್ಕೆ ಸರಿಯಾಗಿ ಬ್ಯಾಂಕ್‌ಗೆ ಹಿಂದಿರುಗಿಸಬೇಕು. ಸಂಘಗಳ ಆಡಳಿತವನ್ನು ಮಹಿಳೆಯರೇ ನಿರ್ವಹಿಸಬೇಕು. ಅದನ್ನು ಪುರುಷರ ಕೈಗೆ ಒಪ್ಪಿಸಿದರೆ ಪರಿಣಾಮ ಬೇರೆಯದೇ ಆಗುತ್ತದೆ ಎಂದು ಹೇಳಿದರು.

  ‘ನಾನು ಮೊಂಬತ್ತಿಯಂತೆ ಉರಿದು, ಬಡವರ ಬದುಕಿಗೆ ಬೆಳಕು ನೀಡುತ್ತಿದ್ದೇನೆ. ಬಡ ಕುಟುಂಬಗಳು ಪ್ರಗತಿ ಪಥದಲ್ಲಿ ಸಾಗಿದಾಗ ನನಗೆ ಸಂತೊಷವಾಗುತ್ತದೆ. ಇದಕ್ಕೆ ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರು ಹೆಚ್ಚಿನ ಶ್ರಮ ವಹಿಸಬೇಕು’ ಎಂದು ಹೇಳಿರು. 

  ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬ್ಯಾಂಕ್‌ ಹೆಣ್ಣು ಮಕ್ಕಳಿಗೆ ಋಣಿಯಾಗಿದೆ. ಅವರು ಪಡೆದ ಸಾಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಕಾಲ ಕಾಲಕ್ಕೆ ಮರುಪಾವತಿ ಮಾಡುತ್ತಿದ್ದಾರೆ. ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಅವರ ವಹಿಸಿದ ವಿಶೇಷ ಕಾಳಜಿಯಿಂದ ಬ್ಯಾಂಕ್‌ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಬಡವರ ಬದುಕು ಹಸನಾಗಲೆಂದು ಪಕ್ಷಾತೀತವಾಗಿ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.

  ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ವಾರಕ್ಕೊಮ್ಮೆ ಸಭೆ ನಡೆಸಿ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಬೇಕು. ಪಡೆದುಕೊಂಡ ಸಾಲ ಮರುಪಾವತಿಸಲು ಕ್ರಮ ಕೈಗೊಳ್ಳಬೇಕು. ಹಾಗೆ ಮಾಡಿದಾಗ ಆರ್ಥಿಕಾಭಿವೃದ್ಧಿಯ ಜತೆಗೆ ಬ್ಯಾಂಕ್‌ ಇನ್ನಷ್ಟು ಜನರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

  ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಬಾನುಪ್ರಕಾಶ್‌, ನಿರ್ದೇಶಕರಾದ ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಮುಖಂಡರಾದ ಮುನಿರಾಜು, ಜಯರಾಮರೆಡ್ಡಿ, ನಾರಾಯಣಸ್ವಾಮಿ ಇದ್ದರು.