ನಿರ್ದೇಶಕರಿಗೆ ಅಂಗನವಾಡಿ ಸಮಿತಿಯಿಂದ 18 ಬೇಡಿಕೆಗಳ ಮನವಿ ಪತ್ರ ಸಲ್ಲಿಕೆ ಕೆಲವು ಬೇಡಿಕೆಗಳ ಈಡೇರಿಕೆಗೆ ನಿರ್ದೇಶಕರ ಒಪ್ಪಿಗೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ನಿರ್ದೇಶಕರಿಗೆ ಅಂಗನವಾಡಿ ಸಮಿತಿಯಿಂದ 18 ಬೇಡಿಕೆಗಳ ಮನವಿ ಪತ್ರ ಸಲ್ಲಿಕೆ ಕೆಲವು ಬೇಡಿಕೆಗಳ ಈಡೇರಿಕೆಗೆ ನಿರ್ದೇಶಕರ ಒಪ್ಪಿಗೆ

 

 

ಕೋಲಾರ : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ. ಶಿವಣ್ಣ ನೃತೃತ್ವದ ಮಹಿಲಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ನಿರ್ದೇಶಕರಾದ ದಯಾನಂದ ರವರಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಸಾಮಾನ್ಯವಾಗಿ ಎಲ್.ಕೆ.ಜಿ. ಯು.ಕೆ.ಜಿ. ಪ್ರಾರಂಭಿಸಬೇಕು ಅಥವಾ ರಾಜ್ಯದಲ್ಲಿ ಎಲ್ಲಾ ಹೋಬಳಿಗೊಂದು ಅಥವಾ ಎರಡರಂತೆ ಎಲ್.ಕೆ.ಜಿ. ಯು.ಕೆ.ಜಿ. ಪ್ರಾರಂಭಿಸಬೇಕು. ಎಲ್.ಕೆ.ಜಿ. ಯುಕೆ.ಜಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸುತ್ತಿಸುತ್ತಿರುವುವರನ್ನು ಶಿಕ್ಷಕರನ್ನಾಗಿ ನೇಮಕ ಮಾಡಿ ಅವರಿಗೆ ಶಾಲಾ ಶಿಕ್ಷಕರಿಗೆ ನೀಡುವ ಸಂಬಳವನ್ನು ನೀಡಬೇಕು. ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕಾರ್ಯಕರ್ತೆಯರಿಗೆ ನೀಡಬೇಕು. ಸುಮಾರು 10-15 ವರ್ಷಗಳಿಂದ ಒಬ್ಬರೇ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರಿದ್ದು, ಇವರನ್ನು ತೆಗೆದು ಪ್ರತಿ ವರ್ಷ ಅಥವಾ ಮೂರು ವರ್ಷಕ್ಕೊಮ್ಮೆ ಉಸ್ತುವಾರಿಗಳನ್ನು ಬದಲಾಯಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಗೌರವ ಧನ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕು. ಈಗಿರುವ ಅಂಗನವಾಡಿ ವೇಳಾಪಟ್ಟಿಯನ್ನು 9-30 ರಿಂದ 1-30 ಗಂಟೆಗೆ ನಿಗಧಿಪಡಿಸಬೇಕು. 4 ಗಂಟೆಯವರೆಗೆ ಕೆಲಸ ನಿರ್ವಹಿಸಿದರೆ ಕಾರ್ಯಕರ್ತೆಯರಿಗೆ 21,500 ರೂ, ಸಹಾಯಕೀಯರಿಗೆ 15,000/- ರೂಗಳು ಪ್ರತಿ ಮಾಹೆಯಾನ ನೀಡಬೇಕು. ಕಾರ್ಯಕರ್ತೆಯರಿಗೆ ಟಿ.ಸಿ.ಡಿಎಸ್. ಯೋಜನೆಗೆ ಸಂಬಂಧಪಟ್ಟ ಕೆಲಸಗಳಿಗೆ ಸೀಮಿತ ಗೊಳಿಸಬೇಕು. ಬೇರೆ ಇಲಾಖಾ ಕೆಲಸಗಳಿಗೆ ನೇಮಕ ಮಾಡರಬಾರದು ಎಂಬ ಆದೇಶ ನೀಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಣಿ ವ್ಯವಸ್ಥೆ ನೀಡಬೇಕು. ನಿವೃತ್ತಿ ಹೊಂದಿರುವ ನೌಕರರಿಗೆ ಎನ್.ಪಿ.ಎಸ್. ಹಣ ತಕ್ಷಣ ನೀಡಬೇಕು. 5 ವರ್ಷ ಮೇಲ್ಪಟ್ಟು ಒಂದೇ ಕಡೆ ಮೇಲ್ವಿಚಾರಕಿಯರಾಗಿ ಕೆಲಸ ಸಲ್ಲಿಸುತ್ತಿರುವರನ್ನು ತಕ್ಷಣ ಬೇರೆಡೆಗೆ ವರ್ಗಾಯಿಸಬೇಕು ಎಂಬ ಇತ್ಯಾದಿ 18 ಬೇಡಿಕೆಗಳ ಮನವಿ ಪತ್ರವನ್ನು ನಿರ್ದೇಶಕರಿಗೆ ನೀಡಲಾಯಿತು.
ನಿರ್ದೇಶಕರು ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂಧಿಸಿ ಕೆಲವು ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದರು. ಅಂಗನವಾಡಿ ಸಮಿತಿಯ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ನಿರ್ಮಲಾಬಾಯಿ, ಸಂಚಾಲಕಿ ನಾಗವೇಣಮ್ಮ, ಸಂಘದ ಕಾರ್ಯದರ್ಶಿ ವಿಜಯಕುಮಾರಿ, ರಾಜ್ಯ ಖಜಾಂಚಿ ಡಿ.ಎನ್. ಗಂಗರತ್ನಮ್ಮ, ರಾಜ್ಯ ಯುವ ಮುಖಂಡರುಗಳಾದ ಮಂಜುಳ, ಮುನಿಯಮ್ಮ, ಚೌಡಮ್ಮ, ವಿಮಲಮ್ಮ, ಹೆಚ್.ಎನ್.ಸೀತಾಲಕ್ಷ್ಮಿ ಉಪಸ್ಥಿತರಿದ್ದರು.