ನವೀಕರಿಸಬಹುದಾದ ಇಂಧನ ಮೂಲಗಳ ಸಂರಕ್ಷಣೆ ಕುರಿತು ಕಾರ್ಯಾಗಾರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ನ.04 : ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂರಕ್ಷಣೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ರಾಯಚೂರು ಚಿತ್ರದುರ್ಗ ಜಿಲ್ಲೆ ಕಡೆ ಫ್ಯಾನ್ ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸುತ್ತಾರೆ. ಸೂರ್ಯನ ಬೆಳಕಿನಿಂದ ಸೋಲಾರ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತಿದ್ದು, ಸಾಧಾರಣ ಬಲ್ಬ್‍ಗಳ ಬಳಕೆ ಬೇಡ, ಪ್ರತಿಯೊಬ್ಬರು ಕಡಿಮೆ ಹಣದಿಂದ ಸೋಲಾರ್ ಹಾಕಿಸಿಕೊಳ್ಳಿ ಅಥವಾ ಎಲ್.ಇ.ಡಿ ಲೈಟ್ ಗಳನ್ನು ಹಾಕಿಸಿಕೊಂಡು ವಿದ್ಯುತ್ ಉಳಿತಾಯ ಮಾಡಿ ಇದರಿಂದ ಹಣವೂ ಉಳಿತಾಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಎಸ್. ಎಚ್ .ಚೌಡಪ್ಪ ತಿಳಿಸಿದರು.
ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಶ್ರೀ ಸಾಯಿ ಕೃಪಾ ಕ್ಷೇಮಾಭಿವೃದ್ಧಿ ಫೌಂಡೇಶನ್ ಮುಳುಬಾಗಿಲು ಇವರ ಸಂಯುಕ್ತ ಆಶ್ರಯದಲ್ಲಿ ಮುಳಬಾಗಲು ತಾಲ್ಲೂಕು ಕಪ್ಪಲಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಆನೆಹಳ್ಳಿ ಗ್ರಾಮದಲ್ಲಿ 1 ದಿನದ ಶಿಬಿರವನ್ನು ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹಮ್ಮಿಕೊಂಡಿದ್ದ ನವೀಕರಿಸಬಹುದಾದ ಇಂಧನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ವಿಷಯದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಪ್ಪಲಮಡಗು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ವಿ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಬಚ್ಚಲು ಇಂಗುಗುಂಡಿ ಸೋಕ್ ಪಿಟ್ ಬದು ನಿರ್ಮಾಣ ಭೂ ಸಮತಟ್ಟು ದನದ ಶೆಡ್ಡು ಕೋಳಿ ಸೆಡ್ಡು ಇನ್ನೂ ಮುಂತಾದ ಯೋಜನೆಗಳಿದ್ದು ಗಂಡು ಹೆಣ್ಣು ಎಂಬ ಭೇದಭಾವ ಇಲ್ಲದೆ ಕೆರೆ ಕುಂಟೆಗಳಲ್ಲಿ ಹೂಳು ತೆಗೆಯುವುದು ನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಮೂಲಕ ಕೆಲಸ ನೀಡಲಿದ್ದು ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ಹತ್ತರಿಂದ ಹದಿನೈದು ಜನ ಸಂಘ ಮಾಡಿಕೊಂಡು ಉಳಿತಾಯ ಮಾಡುವುದು ಸಂಘವನ್ನು ಬೆಳೆಸುವುದು ಮತ್ತು ಗ್ರಾಮಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ರಸ್ತೆಯ ಪಕ್ಕದಲ್ಲಿ ಮಲಮೂತ್ರ ವಿಸರ್ಜನೆ ಮಾಡಿಸಬಾರದು. ಶೌಚಾಲಯಗಳನ್ನು ಬಳಸಿಕೊಳ್ಳಿ, ಪ್ರತಿ ಗ್ರಾಮದಲ್ಲಿ ಬೀದಿ ದೀಪದ ಕಂಬಗಳಲ್ಲಿ ಲೈಟು ಉರಿಯುತ್ತಿರುತ್ತವೆ ಹಳ್ಳಿಗಳಲ್ಲಿ ನಿಮ್ಮ ಊರಿನ ವಾಟರ್ ಮ್ಯಾನ್, ಲೈನ್ಮನ್ ನೋಡಿಕೊಳ್ಳುವÀ ಜವಾಬ್ದಾರಿಯಾಗಿದೆ ಇದು ಸಾರ್ವಜನಿಕ ಕಂದಾಯ ಕಟ್ಟುವ ಹಣದಿಂದ ಬೀದಿ ದೀಪಗಳನ್ನು ಹಾಕಿರುತ್ತೇವೆ ನಿಮ್ಮ ಮನೆಗಳ ಸುತ್ತಮುತ್ತ ಸೊಳ್ಳೆಗಳು ಬರದಂತೆ ಚರಂಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಮಿಣಿಜೇನಹಳ್ಳಿ ಆಶಾ ಮಾತನಾಡಿ ಮಳೆ ನೀರು ಕೊಯ್ಲು ಬಗ್ಗೆ ಶುದ್ಧವಾದ ನೀರು ಅಂದರೆ ಮಳೆ ನೀರಾಗಿದ್ದು ನಮಗೆ ಯಥೇಚ್ಚವಾಗಿ ಮಳೆಯಾಗುತ್ತಿದ್ದು ಆ ನೀರು ಹರಿದು ಹೋಗುತ್ತಿದೆ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಕೋಲಾರ ಜಿಲ್ಲೆಯ ನೀರಿನ ಬರ ಪೀಡಿತ ಪ್ರದೇಶವಾಗಿದ್ದು ಅಂದರೆ ಬಿದ್ದಂತ ನೀರನ್ನು ಯಾರು ಶೇಖರಣೆ ಮಾಡಲು ಹೋಗುತ್ತಿಲ್ಲ ನಮ್ಮ ಕೋಲಾರ ಜಿಲ್ಲೆಯಲ್ಲಿ ಮಳೆ ನೀರನ್ನು ಸಂಗ್ರಹಣೆ ಮಾಡೋದಿಕ್ಕೆ ಇರುವ ವ್ಯವಸ್ಥೆ ಬೇರೆ ಎಲ್ಲಿಯೂ ಇರುವುದಿಲ್ಲ ಅಂದರೆ ಕೆರೆ ಕುಂಟೆಗಳು ಕಲ್ಯಾಣಿಗಳು ಇರುತ್ತವೆ 2ರೀತಿಯಲ್ಲಿ ಮಳೆ ನೀರನ್ನು ನಾವು ಸಂಗ್ರಹಿಸಬಹುದಾಗಿದೆ 1ಕೆರೆ ಕುಂಟೆ ಕಲ್ಯಾಣಿ ಗಳಿಗೆ ನೀರನ್ನು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಎರಡನೇ ವ್ಯವಸ್ಥೆ ಮನೆಯ ಮೇಲ್ಚಾವಣಿ ಮೇಲೆ ಬಿದ್ದಂತಹ ನೀರನ್ನು ಸಂಗ್ರಹಣೆ ಮಾಡಿ ನಮ್ಮ ದಿನನಿತ್ಯದ ಬಳಕೆಗೆ ಬಳಸುವದು ಒಬ್ಬ ಮನುಷ್ಯನಿಗೆ 1ದಿನಕ್ಕೆ ಐವತ್ತೈದು ಲೀಟರ್ ನೀರಿನ ಅವಶ್ಯಕತೆಯಿದೆ ಇದಕ್ಕೆ ನಾವು ಮಳೆ ನೀರನ್ನೇ ಉಪಯೋಗಿಸಿಕೊಳ್ಳಬಹುದು ಎಂದು ವಿಡಿಯೋ ಮೂಲಕ ವಿವರವಾಗಿ ಅರ್ಥೈಸಿದರು ಸ್ವಚ್ಛತೆಯಲ್ಲಿ ಬೇಡವಾದ ತ್ಯಾಜ್ಯವನ್ನು ಕಸದ ಎನ್ನುತ್ತೇವೆ. ಇದರಲ್ಲಿ 4 ಭಾಗವಿದ್ದು ಹಸಿಕಸ ಒಣಕಸ ಈ ತ್ಯಾಜ್ಯ ಆಸ್ಪತ್ರೆಯಲ್ಲಿ ಬರುವಂತಹ ತ್ಯಾಜ್ಯ ಇವುಗಳನ್ನು ವಿವರಿಸಿ ತಿಳಿಸಿದರು ಘನತ್ಯಾಜ್ಯ ವಿಲೇವಾರಿ ಘಟಕ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಾಡುತ್ತಿದ್ದು ಅದರಿಂದ ನೀವು ಈಗಿನಿಂದಲೇ ಮನೆಯಲ್ಲಿರುವ ಕಸವನ್ನು ವಿಂಗಡಿಸಿ ಪಂಚಾಯಿತಿ ಗೆ ವಿಲೇವಾರಿ ಮಾಡಲು ತಿಳಿಸಿದರು
ಇದೇ ಸಂದರ್ಭದಲ್ಲಿ ಕನ್ನಡ ಜನಪದ ಕಲಾ ಸಂಘದ ಅಧ್ಯಕ್ಷರು ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ದೂರದರ್ಶನ ಆಕಾಶವಾಣಿ ಕಲಾವಿದ ಖ್ಯಾತ ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ತಂಡದವರಿಂದ ಆರೋಗ್ಯ ಸ್ವಚ್ಛತೆ ನೀರು ನೈರ್ಮಲ್ಯದ ಬಗ್ಗೆ ಜಾನಪದ ಹಾಡುಗಳ ಮೂಲಕ ಜಾಗೃತಿ ಮೂಡಿಸಿದರು
ವೇದಿಕೆಯಲ್ಲಿ ಕಾನೂನು ಸಲಹೆಗಾರರಾದ ವಕೀಲ ಹುತ್ತೂರು ಎಚ್ ಎಂ ರಾಜಶೇಖರ್ ಶ್ರೀ ಸಾಯಿ ಕೃಪಾ ಕ್ಷೇಮಾಭಿವೃದ್ಧಿ ಫೌಂಡೇಷನ್ ನ ಅಧ್ಯಕ್ಷರಾದ ಭಾಗ್ಯಮ್ಮ ಸ್ವಾಗತಿಸಿದರು ಪ್ರಾರ್ಥನೆ ನಗವಾರ ಚೆಂಗಲ್ ರಾಯಪ್ಪ ಶಂಕ್ರಪ್ಪ ಮಾಡಿದರು ವಡ್ಡಹಳ್ಳಿ ನಳಿನಿ ನಿರೂಪಿಸಿ ಕಪ್ಪಲಮಡಗು ರತ್ನಮ್ಮ ವರಲಕ್ಷ್ಮಿ ವಂದಿಸಿದರು