ನಮ್ಮಲ್ಲಿ ಬುದ್ದಿಶಕ್ತಿ,ಸಾಮಾಥ್ರ್ಯ,ಪ್ರತಿಭೆ ಇದ್ದರೆ ನಾವು ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಸಹ ನಾವು ಜೀವಸಬಹುದಾಗಿದೆ: ಕೆ.ವಿಶ್ವನಾಥ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ನಮ್ಮಲ್ಲಿ ಬುದ್ದಿಶಕ್ತಿ,ಸಾಮಾಥ್ರ್ಯ,ಪ್ರತಿಭೆ ಇದ್ದರೆ ನಾವು ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಸಹ ನಾವು ಜೀವಸಬಹುದಾಗಿದೆ: ಕೆ.ವಿಶ್ವನಾಥ

 

 

ರಾಯಲ್ಪಾಡು 2 : ನಮ್ಮಲ್ಲಿ ಬುದ್ದಿಶಕ್ತಿ,ಸಾಮಾಥ್ರ್ಯ,ಪ್ರತಿಭೆ ಇದ್ದರೆ ನಾವು ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಸಹ ನಾವು ಜೀವಸಬಹುದಾಗಿದೆ ಎಂದರು. ಮುಖ್ಯಶಿಕ್ಷಕ ಕೆ.ವಿಶ್ವನಾಥ ತಿಳಿಸಿದರು.
ಬೈಕೊತ್ತೂರಿನ ಸರ್ಕಾರಿ ಶಾಲೆಯ ಹಳೇಯ ವಿದ್ಯಾರ್ಥಿ ಶಾಲೆಗೆ ನೀಡಲಾದ ಉಚಿತವಾಗಿ ಫ್ರಿಡ್ಜ್ ಹಾಗು ಕಲಿಕಾಸಾಮಗ್ರಿಗಳನ್ನು ಬುಧವಾರ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಸಲಷ್ಟೇ ಸೀಮಿತವಾಗದೆ ಶಿಕ್ಷಣವಂತರಾಗಿ,ಸುಸಂಸ್ಕøತರಾಗಿ,ಜ್ಞಾನಾಭಿವೃದ್ಧಿಗೆ ಮುಂದಾಗಬೇಕು.ಅಂತೆಯೇ ಉನ್ನತ ವ್ಯಾಸಂಗ ಮಾಡುವ ಮೂಲಕ ವಿದ್ಯಾವಂತರೂ,ಉನ್ನತ ಉದ್ಯೋಗಸ್ಥರೆಂದು ಅನಿಸಿಕೊಂಡು ನಿಮ್ಮ ಪೋಷಕರರಿಗೂ,ಶಾಲಾ ಶಿಕ್ಷಕರಿಗೂ ಸಂಸ್ಥೆಗೂ ಗೌರವ ತಂದುಕೊಡಬೇಕೆಂದರು.
ಹಳೆ ವಿದ್ಯಾರ್ಥಿ ಗಂಡರಾಜಪಲ್ಲಿ ಚಂದ್ರಮೋಹನ್ ಮಾತನಾಡಿ ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ . ಶ್ರದ್ದೆಯಿಂದ ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೀರ್ತಿ ತರುವ ಜವಬ್ದಾರಿ ವಿದ್ಯಾರ್ಥಿಗಳ ಮೇಲಿದೆ . ಸ್ವಶಕ್ತಿ,ಛಲ,ಗುರಿಯೊಂದಿಗೆ ವಿದ್ಯೆ ಪಡೆದು ಉನ್ನತ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು .