ವರದಿ: ವಾಲ್ಟರ್ ಮೊಂತೇರೊ
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜೂನ್ 16ರಂದು ಒಂದು ತಿಂಗಳ ಉಚಿತ ಯೋಗ ಶಿಬಿರ ಉದ್ಘಾಟನೆ
ನಂದಳಿಕೆ, ಜೂ.16: ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಭಾರತ ಸರಕಾರದ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಜೂನ್ 16ರಂದು ಆದಿತ್ಯವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಒಂದು ತಿಂಗಳ ಉಚಿತ ಯೋಗ ಶಿಬಿರ ಉದ್ಘಾಟನೆಗೊಳ್ಳಲಿದೆ.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಕರಾಟೆಪಟು ಬೋಳ ರಾಕೇಶ್ ಪೂಜಾರಿ ಭಾಗವಿಹಿಸಲಿದ್ದಾರೆ. ಹರಿಪ್ರಸಾದ್ ಆಚಾರ್ಯ ಯೋಗ ತರಬೇತಿ ನೀಡಲಿದ್ದಾರೆ ಎಂದು ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಪ್ರತಿಕಾ ಪ್ರಕಟನೆಗೆ ತಿಳಿಸಿದ್ದಾರೆ.