ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಾರ್ಚ್ 24ರಂದು 19ನೇ ವರ್ಷದ ಅರ್ಧ ವಾರ್ಷಿಕ ಸಭೆ

ವರದಿ:ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಾರ್ಚ್ 24ರಂದು
19ನೇ ವರ್ಷದ ಅರ್ಧ ವಾರ್ಷಿಕ ಸಭೆ


ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಮಾರ್ಚ್ 24ರಂದು ಆದಿತ್ಯವಾರ ಮಧ್ಯಾಹ್ನ 3 ಘಂಟೆಗೆ ಸರಿಯಾಗಿ ಸಂಘದ ಆಡಳಿತ ಕಛೇರಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ 19ನೇ ಅರ್ಧ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್‍ರವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಸಂಘದ ಸದಸ್ಯರೆಲ್ಲರೂ ಕ್ಲಪ್ತ ಸಮಯದಲ್ಲಿ ಆಗಮಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.