ವರದಿ:ವಾಲ್ಟರ್ ಮೊಂತೇರೊ
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:
ರಾಷ್ಟ್ರೀಯ ಯುವ ದಿನಾಚರಣೆ ಹಾಗೂ
ಸ್ವಾಮಿ ವಿವೇಕಾನಂದರ 156ನೇ ವರ್ಷದ ಜನ್ಮ ದಿನಾಚರಣೆ
ಭಾರತ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾ ಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ)ನ ವತಿಯಿಂದ ಕೆದಿಂಜೆ ಶ್ರೀ ವಿದ್ಯಾ ಬೋದಿನಿ ಅನದುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮೀ ವಿವೇಕಾನಂದರ 156ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಮಕ್ಕಳಿಗೆ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮೀ ವಿವೇಕಾನಂದರ 156ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಭಾಷಣ ಸ್ಪರ್ಧೆ ಮತ್ತು ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್‍ರವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿದರು. ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ಜಗತ್ತು ಕಂಡ ಬಹಳ ಪ್ಭಾವಿತ ಪ್ರಸಿದ್ಧ ತತ್ವಜ್ಞಾನಿ, ಪ್ರತಿಯೊಬ್ಬರ ಬದುಕಿನ ಅದಮ್ಯ ಚೈತನ್ಯ ಸದಾ ಆಶಾವಾದ, ಸಕಾರಾತ್ಮಕತೆಯ ಮತ್ತೊಂದು ಮೊಗವೆ ಸ್ವಾಮಿ ವಿವೇಕಾನಂದರು. ಯುವಕರಿಗೆ ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳಿಗೆ ಗುರುವಾಗಿ, ಹಿರಿಯರಿಗೆ ತತ್ತ್ವಜ್ಞಾನಿಯಾಗಿ, ಆದ್ಯಾತ್ಮದ ಲೇಪನದ ಮೂಲಕ ಸದಾ ನೆಮ್ಮದಿ ನೀಡುವ ಮಗನಾಗಿ, ಬದುಕಿನ ಸಾರಂಶವನ್ನು ಸರಾಗವಾಗಿ ಎಲ್ಲರ ಎದೆಯಲ್ಲಿ ಅರಳುವಂತೆ ಮಾಡಿ ಪ್ರತಿಯೊಬ್ಬರ ಮನೆ ಮನಗೆದ್ದವರು ವಿವೇಕಾನಂದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಸಂಘದ ಮಹಿಳಾ ಸದಸ್ಯರಾದ ಲೀಲಾ ನಾರಾಯಣ ಪೂಜಾರಿ, ಮಮತಾ ಪ್ರಕಾಶ್, ಶಾಲಾ ಸಹಶಿಕ್ಷಕರಾದ ರೇಖಾ ಪೈ, ಮಮತಾ ಜೆ., ಗೌರವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೊದಲಾದವರಿದ್ದರು.