ವರದಿ: ವಾಲ್ಟರ್ ಮೊಂತೇರೊ
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ವೇಸ್ಟ್ ಪ್ಲಾಸ್ಟಿಕ್ ಬಟಾಲಿನಿಂದ ಪರಿಸರ ಜಾಗೃತಿ ಅರಿವು
ಇದು ಪ್ಲಾಸ್ಟಿಕ್ ಯುಗವೆಂದರೂ ತಪ್ಪಿಲ್ಲ. ಪ್ಲಾಸ್ಟಿಕ್ ಇಲ್ಲದೆ ಜೀವನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗೆ ಹೋದರೂ ಬೇಕು. ಅಡುಗೆ ಮನೆಯಲ್ಲೂ ಅದರದೇ ಪಾರುಪತ್ಯ. ಊಟದ ಬಟ್ಟಲಿನಿಂದ ಹಿಡಿದು ನೀರು ಕುಡಿಯುವ ಲೋಟಗಳವರೆಗೂ ಪ್ಲಾಸ್ಟಿಕ್ ತನ್ನ ಕಬಂಧಬಾಹುವನ್ನು ಚಾಚಿದೆ. ನಮ್ಮಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಅರಿವು ಮೂಡಬೇಕಿದೆ. ಈ ನಿಟ್ಟಿನಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರೆಲ್ಲರೂ ಸೇರಿ ಕೊಂಡು ಸ್ವಚ್ಛತಾ ಪರಿಸರ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ರಸ್ತೆ ಬದಿಯಲ್ಲಿ ಬಿಸಾಡಿದ ನೀರಿನ ಬಟಾಲ್, ತಂಪು ಪಾನೀಯದ ಬಟಾಲ್‍ಗಳನ್ನು ಸಂಗ್ರಹಿಸಿ ಅದಕ್ಕೆ ಮಣ್ಣು ಗೊಬ್ಬರ ಮಿಶ್ರಣಗೊಳಿಸಿ ತರಕಾರಿ ಬೀಜ ಬಿತ್ತನೆ ಮಾಡುವ ಮೂಲಕ ವಿನೂತನ ರೀತಿಯ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಂಬಿಕೊಂಡಿದೆ ಎಂದು ಸಂಘದ ಕೋಶಾಧಿಕಾರಿ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ ತಿಳಿಸಿದರು.
ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಗೃತಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಈಗಗಲೇ ಹಲವಾರು ವಿನೂತನ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸತೀಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ, ವಿದಿನ್, ನೀಯಾ, ಸ್ಪರ್ಶ್ ಮೊದಲಾದವರಿದ್ದರು.