ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ನಮ್ಮ ದೇಶವನ್ನು ಕಾಪಾಡಲಿಕ್ಕೆ ಸೈನಿಕರು ಯಾವ ರೀತಿ ಹೋರಾಟ ಮಾಡುತ್ತಿದ್ದಾರೋ ಆ ರೀತಿಯಲ್ಲಿ ಇವತ್ತು ಕರೋನ ವಿರುದ್ದ ಗೆಲ್ಲಲೇಬೇಕೆಂಬ ಪರಿಸ್ಥಿತಿಯಲ್ಲಿ ನೀವೆಲ್ಲರೂ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದು ಮಾವು ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಶ್ರೀನಿವಾಸಪುರ ರೋಟರಿ ಸಂಸ್ಥೆಯ ಚಾರ್ಟರ್ಡ್ ಪ್ರಸಿಟೆಂಡ್ ಎಲ್. ಗೋಪಾಲಕೃಷ್ಣ ತಿಳಿಸಿದರು.
ರೋಟರಿ ಸಂಸ್ಥೆ, ಶ್ರೀನಿವಾಸಪುರ ಇವರಿಂದ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ದ ಹೋರಾಡುತ್ತಿರುವ ವೈಧ್ಯರು, ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್. ಗೋಪಾಲಕೃಷ್ಣ, ದೇಶದಲ್ಲಿ ಕೋವಿಡ್-19 ಬಗ್ಗೆ ಇಲ್ಲಿ ನಾವು ಮಾತ್ರ ಮಾತನಾಡಿಕೊಂಡರೆ ಅರ್ಥವಿಲ್ಲ, ಈ ವಿಷಯವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಆಸ್ಪತ್ರೆಯ ಸಿಬ್ಬಂದಿಯಾದ ವೈಧ್ಯರು, ನರ್ಸುಗಳು ಸಿಬ್ಬಂದಿಯಾದ ತಾವುಗಳು ಹಗಲಿರುಳು ಮಾಡಿದಂತಹ ನಿಮ್ಮ ಸೇವೆಯನ್ನು ನಾವುಗುರ್ತಿಸಿ ನಿಮ್ಮನ್ನು ಗೌರವಿಸುವಂತಹುದು. ಪ್ರಾಣ ಕಾಪಾಡಿಕೊಳ್ಳುವಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಯು ಬಹಳ ಮೆಚ್ಚುಗೆಯ ರೀತಿಯಲ್ಲಿ ಸೇವೆಯನ್ನು ಮಾಡಿದ್ದೀರಿ. ಈ ದಿನ ನಿಮ್ಮನ್ನು ಗುರ್ತಿಸಿ ಸನ್ಮಾನ ಮಾಡುತ್ತಿರುವುದು ಬಹಳ ಅರ್ಥಪೂರ್ಣ ಕಾರ್ಯಕ್ರಮ ಎಂದರು. ಜೊತೆಗೆ ಕರೋನ ಬಂದವರಿಗೆ ಚಿಕಿತ್ಸೆ ನೀಡಿ ಅವರನ್ನುಗುಣಮುಖರಾಗಿ ಮಾಡುವುದರಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ವಿಚಾರ ಬಹಳ ಮುಖ್ಯ ಎಂದರು.
ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ: ರಂಗರಾವ್ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ, ಶ್ರೀನಿವಾಸಪುರ ಅನೇಕ ರೀತಿಯಲ್ಲಿ ತನ್ನದೇ ಆದಂತಹ ಹೆಸರನ್ನು ಮಾಡಿದೆ, ಅದೆ ರೀತಿ ಕೋವಿಡ್ 19 ನಿಯಂತ್ರಣದಲ್ಲೂ ಸಹ ವಿಶೇಷವಾಗಿ ತಾಲ್ಲೂಕು ಮಟ್ಟದಲ್ಲಿ ಕರೋನ ನಿಯಂತ್ರಣಕ್ಕೆ ಮೊದಲು ರೋಗಿಯನ್ನು ದಾಖಲು ಮಾಡಿಕೊಂಡು ವ್ಯವಸ್ಥೆ-ಚಿಕಿತ್ಸೆ ಎಲ್ಲವನ್ನು ಒದಗಿಸಿದಂತಹ ಆಸ್ಪತ್ರೆ ಎಂದರೆ ಸರ್ಕಾರಿ ಆಸ್ಪತ್ರೆ, ಶ್ರೀನಿವಾಸಪುರ. ನಮ್ಮ ವೈಧ್ಯಕೀಯ ತಂಡವು ಆಡಳಿತ ವೈಧ್ಯರ ಸೂಚನೆ ಮೇರೆಗೆ ಕರೋನ ನಿಯಂತ್ರಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಶ್ರೀನಿವಾಸಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಶಿವಮೂರ್ತಿ ಮಾತನಾಡಿ, ಕರೋನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಇಲ್ಲಿನ ವೈಧ್ಯರಾದ ಉಮಾ ಶಂಕರ್ ತುಂಬಾ ಯುವಕರಾಗಿದ್ದಾರೆ. ಅವರ ಹೆಸರಲ್ಲೇ ಉಮಾ-ಶಂಕರ್ ಈ ಇಬ್ಬರು ಇರುವುದರಿಂದ ಇವರನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಇಲ್ಲಿನ ವೈಧ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ಕಾರ್ಯಕ್ಕೆ ನಾವು ನೀಡುವ ಸನ್ಮಾನ ಏನೇನೂ ಇಲ್ಲ. ನಿಮ್ಮ ಮೇಲಿರುವ ಗೌರವ, ಪ್ರೀತಿಗೆ ರೋಟರಿ ಸಂಸ್ಥೆಯಿಂದ ಸನ್ಮಾನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕಆಸ್ಪತ್ರೆ, ಶ್ರೀನಿವಾಸಪುರ ಇಲ್ಲಿಯ ವೈಧ್ಯರುಗಳಾದ ರಂಗರಾವ್, ನಿರಂಜನ್, ಉಮ ಶಂಕರ್, ದೀಪ ಮತ್ತು ಕಮಲ ಹಾಗೂ ಸುಮಾರು 30 ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಸ್.ಆರ್. ಎಸ್.ವಿ. ಸುಧಾಕರ್, ಶ್ರೀನಿವಾಸಪುರ ರೋಟರಿ ಸಂಸ್ಥೆಯ ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಎನ್. ಬೈರೇಗೌಡ, ಆನಂದ ಕುಮಾರ್ ಹಾಜರಿದ್ದರು.