ದೇಶದ ಐಕ್ಯತೆಗಾಗಿ ಪ್ರಾಣತೆತ್ತ ಧೀಮಂತ ನಾಯಕಿ ಇಂದಿರಾ ಗಾಂಧಿ: ಮಲ್ಯಾಡಿ

JANANUDI.COM NETWORK

 

ದೇಶದ ಐಕ್ಯತೆಗಾಗಿ ಪ್ರಾಣತೆತ್ತ ಧೀಮಂತ ನಾಯಕಿ ಇಂದಿರಾ ಗಾಂಧಿ: ಮಲ್ಯಾಡಿ

 

 

ಪ್ರತ್ಯೇಕತಾವಾದಿ ಖಲಿಸ್ಥಾನ್ ಚಳವಳಿಯ ಸಿಖ್ ಭಯೋತ್ಪಾದಕರ ಸಂಚಿಗೆ ಬಲಿಯಾದ ಮಾಜಿ ಪ್ರದಾನಿ ಇಂದಿರಾ ಗಾಂಧಿಯವರು ಈ ದೇಶ ಕಂಡ ಓರ್ವ ಅಧ್ಬುತ ಆಡಳಿತಗಾರ್ತಿಯಾಗಿದ್ದಾರೆ. ಅವರು ಜಾರಿಗೊಳಿಸಿದ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆಯ ಪರಿಣಾಮವಾಗಿ ಅಂದು ವಂಶಪಾರಂಪರ್ಯವಾಗಿ ಕೃಷಿ ಕಾರ್ಮಿಕರಾಗಿದ್ದ ಕರ್ನಾಟಕ ರಾಜ್ಯ ಒಂದರಲ್ಲೆ ಲಕ್ಷಾಂತರ ಹಿಂದುಳಿದ ವರ್ಗದ ಜನತೆಗೆ ಭೂಮಾಲಕತ್ವ ಲಭಿಸಿತು. ಶ್ರೀಮಂತ ವರ್ಗದ ಜನರ ವ್ಯವಹಾರಗಳಿಗಷ್ಟೆ ಸೀಮಿತವಾಗಿದ್ದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡ ಜನರಿಗೂ ಕೂಡ ಹೈನುಗಾರಿಕೆ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸಾಲ ದೊರಕುವಂತೆ ಮಾಡಿದ ಕೀರ್ತಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ.

ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿ ‘ಇಂದಿರಾ ಪ್ರಿಯದರ್ಶಿನಿ’ ಯಲ್ಲಿ ನಡೆದ ಇಂದಿರಾ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿರಾಗಾಂಧಿ ಯವರು ಜಾರಿಗೊಳಿಸಿದ ಇಪ್ಪತ್ತು ಅಂಶದ ಕಾರ್ಯಕ್ರಮಗಳು ದೇಶದ ಎಲ್ಲಾ ವರ್ಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಿತು. ಅವರು 60ರ ದಶಕದಲ್ಲಿ ಇದ್ದ ಅಹಾರ ಕೊರತೆ ನೀಗಿಸಲು ಜಾರಿಗೊಳಿಸಿದ ಹಸಿರುಕ್ರಾಂತಿ ಮತ್ತು ಕ್ಷೀರಕ್ರಾಂತಿ ಕೃಷಿ ವಲಯ ಮತ್ತು ಹೈನುಗಾರಿಕಾ ವಲಯವನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಿ ಭಾರತವನ್ನು ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಸಿದ ಕೀರ್ತಿ ಇಂದಿರಾರಿಗೆ ಸಲ್ಲುತ್ತದೆ ಎಂದು ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ಹೇಳಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜ್ಯೋತಿ ಪುತ್ರನ್, ಯುವ ಕಾಂಗ್ರೆಸ್ ಅದ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಪುರಸಭಾ ಸದಸ್ಯರಾದ ಪಿ.ದೇವಕಿ, ಲಕ್ಷ್ಮೀಬಾಯಿ ಪೂಜಾರಿ, ಇಂಟಕ್ ಅದ್ಯಕ್ಷ ಚಂದ್ರ ಅಮೀನ್, ಸೇವಾದಳ ಅದ್ಯಕ್ಷ ಕುಮಾರ ಖಾರ್ವಿ, ಯುವ ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೋಷನ್ ಶೆಟ್ಟಿ, ಯುವ ಇಂಟಕ್ ಅದ್ಯಕ್ಷ ಶಶಿರಾಜ್ ಪೂಜಾರಿ, ಮುಖಂಡರಾದ ಅಶ್ವಥ್ ಕುಮಾರ್, ಅಬ್ದುಲ್ಲಾ ಕೋಡಿ, ಕೇಶವ ಭಟ್, ಆಶಾ ಕರ್ವಾಲೋ, ಶೋಬಾ ಸಚ್ಚಿದಾನಂದ, ಜ್ಯೋತಿ ಎನ್‌.ನಾಯ್ಕ್, ಜ್ಯೋತಿ ಮೊಗವೀರ, ನಾಗರಾಜ ನಾಯ್ಕ, ವಿಠಲ್ ಕಾಂಚನ್, ಆನಂದ ಪೂಜಾರಿ, ರಟ್ಟಾಡಿ ಸಂಪತ್ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ವಿದ್ಯಾಧರ ಕೆ.ವಿ., ಮಂಜುಳಾ, ಧರ್ಮಪ್ರಕಾಶ್, ಶಿವ ಕುಮಾರ್, ಮುನಾಫ್, ಸುಭಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿದರು. ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.