ದುಬೈ ಜೆಬೆಲ್ ಅಲಿ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವತಿ ಮೃತ್ಯು

JANANUDI.COMNETWORK

ದುಬೈ ಜೆಬೆಲ್ ಅಲಿ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವತಿ ಮೃತ್ಯು
 

 

ದುಬೈ, : ಇಲ್ಲಿನ ಶೇಖ್ ಜಾಯೆದ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ಯುವತಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತವು ಜುಲೈ 12 ರಂದು ನಡೆದಿತ್ತು.

ಇಬ್ಬರು ಮೃತರ ಪೈಕಿ ಮಂಗಳೂರಿನ ವೆಲೇನ್ಸಿಯಾ ಮೂಲದ ಲುದಿನಾ ಮೊಂತೇರೋ (30) ಒಬ್ಬರೆಂದು ಗುರುತಿಸಲಾಗಿದೆ. 

 

ಅವರು ತನ್ನ ಕಂಪನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

 

ಜುಲೈ 12 ರಂದು 14 ಜನರಿದ್ದ ಮಿನಿ ಬಸ್‌ ಜೆಬೆಲ್ ಅಲಿ ಕಡೆ ಹೋಗುತ್ತಿದ್ದಾಗ ಅಲ್ ಮನಾರಾ ಸೇತುವೆಯಲ್ಲಿ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿದ್ದು ಬಸ್‌ಗೆ ಬೆಂಕಿ ಹತ್ತಿಕೊಂಡಿದೆ. ಈ ಸಂದರ್ಭ ಇಬ್ಬರು ಸಾವನ್ನಪ್ಪಿದರೆ 12 ಮಂದಿ ಗಾಯಗೊಂಡಿದ್ದಾರೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.

 

ಲುದಿನಾ ಅವರು ಲೂಯಿಸ್‌ ಹಾಗೂ ದಿವಂಗತ ಥೆರೆಸಾ ಮೊಂತೇರೋ ಅವರ ಪುತ್ರಿಯಾಗಿದ್ದು ಲೌಸನ್ ಹಾಗೂ ಬ್ಲಾಂದಿನಾ ಅವರ ಸಹೋದರಿಯರನ್ನು ಅಗಲಿದ್ದಾರೆ.