ತುಜೆಂ ರಾಜ್ – ಕೊಂಕಣಿ ಭಕ್ತಿ ಗೀತೆಗಳ ಸಿಡಿ ಬಿಡುಗಡೆ

JANANUDI.COM NETWORK

ಕುಂದಾಪುರ,ಡಿ.14: ಕುಂದಾಪುರ ಹಂಗಳೂರಿನ ಪಿಯುಸ್ ನಗರ ಚರ್ಚಿನ ಸಂಗೀತಗಾರ ಫೆಲಿಕ್ಸ್ ಡಿಸೋಜಾ ಇವರ ಭಕ್ತಿ ಗೀತೆಗಳ ಸಿಡಿ ತಾರೀಕು 13 ಭಾನುವಾರದಂದು ಪಿಯುಸ್ ನಗರ ಚರ್ಚಿನ ಧರ್ಮಗುರುಗಳಾದ ಫಾ|ಜಾನ್ ಆಲ್ಫ್ರೆಡ್ ಬಾರ್ಬೊಜಾ ನಿತ್ಯಾದರ ಸಭಾಭವನದಲ್ಲಿ ಬಿಡುಗಡೆ ಗೊಳಿಸಿದರು.
‘ಉದಯಿಸಿದ ದಿನ ಹೇಗೆ ಕಳೆಯುವುದೆಂದೇ ಕೊರೊನಾ ಕಾಲದಲ್ಲಿ ನಾವು ಚಿಂತಿತರಿರುವಾಗ ಫೆಲಿಕ್ಸ್ ತಲೆಯಲ್ಲಿ ಭಕ್ತಿ ಗೀತೆಗಳ ರಚನೆ ಮಾಡುವ ಯೋಚನೆ ಹೊಳೆದು ಭಕ್ತಿ ಗೀತೆಗಳ ರಚನೆ ಮಾಡಿ,ಕೆಲವೊಂದು ನಮ್ಮಂತಹ ಧರ್ಮಗುರುಗಳಿಂದ,ಮತ್ತು ಇತರರಿಂದ ಗೀತೆಗಳನ್ನು ರಚಿಸಿ, ಖ್ಯಾತ ಸಂಗೀತ ನಿರ್ದೇಶಕ ಮಂಗಳೂರಿನ ಜೊಯೆಲ್ ಪಿರೇರಾರವರ ಸಂಗೀತ ನಿರ್ದೇಡನದೊಂದಿಗೆ, ಬಹಳ ಶ್ರಮದಿಂದ ಸಿಡಿಯನ್ನು ತಯಾರು ಮಾಡಿದ್ದಾರೆ, ಭಕ್ತಿ ಗೀತೆಗಳು ಹ್ರದಯಕ್ಕೆ ಮುಟ್ಟುವಂತವು, ಇಂತಹ ಭಕ್ತಿ ಗೀತೆಗಳು ದೇವರಿಗೆ ಗೌರವಕ್ಕೆ ಪಾತ್ರವಾದುವು, ನಮ್ಮಭಕ್ತಿಯನ್ನು ಹೆಚ್ಚಿಸಲಿಕ್ಕೆ ಮಾಡಿದಂತವು, ನಾವು ಕುಟುಂಬಕ್ಕೆ ಒಂದು ಸಿಡಿಯಂತೆ ಬೆಲೆಗೆ ಕೊಂಡುಕೊಂಡರೆ, ಫೆಲಿಕ್ಸ್ ಇವರು ಮಾಡಿದ ಶ್ರಮ ಸಾರ್ಥಕವಗುತ್ತದೆ’ ಎಂದು ಫಾ|ಜಾನ್ ಆಲ್ಫ್ರೆಡ್ ಬಾರ್ಬೊಜಾ ಹರಸಿದರು.
ಅತಿಥಿಗಳಾದ ಹೊನ್ನಾವರದ ಧರ್ಮಗುರು ವಂ|ಆಂತೋನಿ ಲೊಫೆಜ್, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಪಿಯುಸ್ ನಗರ ಸಂತ.ಪಿಯುಸ್ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐರಿನ್ ಕ್ರಾಸ್ತಾ, ಈ ಸಂದರ್ಭದಲ್ಲಿ ಶುಭ ಕೋರಿದರು. ಇನ್ನೊಬ್ಬ ಸಂಗೀತಗಾರ ಕುಂದಾಪುರ ಪಾಸ್ಕಲ್ ಡಿಸೋಜಾ ಸಿಡಿಯಲ್ಲಿರುವ ಹಾಡುಗಳ ಪರಿಚಯವನ್ನು ನೀಡಿದರು. ಫೆಲಿಕ್ಸ್ ಡಿಸೋಜಾ ತಮ್ಮ ಅನ್ನಿಸಿಕೆಗಳನ್ನು ವ್ಯಕ್ತ ಪಡಿಸಿ ಸಿಡಿ ತಯಾರಿಕೆಗೆ ಸಹಾಯ ಹಸ್ತ ನೀಡಿದವರಿಗೆ ಸನ್ಮಾನಿಸಿದರು
ಈ ಸಿಡಿಗಾಗಿ ಫೆಲಿಕ್ಸ್ ಡಿಸೋಜಾ, ಫಾ|ಫ್ರಾನ್ಸಿಸ್ ಕರ್ನೆಲೀಯೊ, ಫಾ|ಜೀವನ್ ಮಾರ್ಟಿಸ್, ಪಾಸ್ಕಲ್ ಡಿಸೋಜಾ ಗೀತೆಗಳನ್ನು ರಚಿಸಿದ್ದಾರೆ. ಡಾ| ಪ್ರಶಾಂತ್ ರಾಜ್, ಆನಿಲ್ ಡೆಸಾ, ಹ್ಯಾರಿಯೆಟ್ ಬ್ರಗಾಂಜಾ, ಫಾ|ಜಾನ್ ಆಲ್ಫ್ರೆಡ್ ಬಾರ್ಬೊಜಾ, ಶಿಲ್ಪಾ ಕುಟಿನ್ಹಾ, ಜೂಲಿಯೆಟ್ ಒಲಿಪಿಂಯಾ ಲಾಜರಸ್, ಜೋನ್ಸನ್ ಡಿಸೋಜಾ, ಗ್ಲಾನಿಶ್ ಮಾರಿಯ ಲುವಿಸ್, ಫಾ| ಅಂತೋನಿ ಲೊಫೆಜ್, ಪ್ರಮೀತ ಡಿಸೋಜಾ, ವೇಲಿಟಾ ಸಿಬೊನ್ ಲೋಬೊ, ಜೂಲಿಯಾನ ಡಿಸೋಜಾ ಮತ್ತಿತರರು ಹಾಡಿದ್ದಾರೆ.
ಪಿಯುಸ್ ನಗರ ಚರ್ಚಿನ ಕಾರ್ಯದರ್ಶಿ ಜೆನ್ನಿ ಡೆಸಾ ಪ್ರಸ್ತಾವಿಕ ಮಾತುಗಳನ್ನಾಡಿದರು, ಚರ್ಚ್ ಉಪಾಧ್ಯಕ್ಷರಾದ ವಾಲ್ಟರ್ ಫೆರ್ನಾಂಡಿಸ್ ಸ್ವಾಗತಿಸಿದರು. ಆಯೋಗಗಳ ಸಂಚಾಲಕಿ ಲೀನಾ ತಾವ್ರೊ ವಂದಿಸಿದರು, ವಿಲ್ಸನ್ ಒಲಿವೆರಾ ಕಾರ್ಯಕ್ರ ನಿರೂಪಿಸಿದರು
.