ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರಥಮ ಸ್ಥಾನ ದೊರೆತಿದೆ : ಸರ್ಜನ್‍ಡಾ ರಂಗರಾವ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರಥಮ ಸ್ಥಾನ ದೊರೆತಿದೆ : ಸರ್ಜನ್‍ಡಾ ರಂಗರಾವ್

 

ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ವೈದ್ಯಾಧಿಕಾರಿಗಳ ದಿನಾಚರಣೆಯ ಪ್ರಯುಕ್ತ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದಡಾ. ರಂಗರಾವ್, ಆರೋಗ್ಯಇಲಾಖೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶ್ರೀನಿವಾಸಪುರಆಸ್ಪತ್ರೆರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಸಾರ್ವಜನಿಕಆಸ್ಪತ್ರೆಯಲ್ಲಿನಜನರಲ್ ಸರ್ಜರಿಯಲ್ಲಿರಾಜ್ಯಮಟ್ಟದಲ್ಲಿ 4ನೆ ಸ್ಥಾನಪಡೆದಿದ್ದು, ಮೊದಲನೆಯದಾಗಿ ವಿಕ್ಟೋರಿಯಾಆಸ್ಪತ್ರೆ, ಬೆಂಗಳೂರು, ಎರಡನೆಯದಾಗಿಜಿಲ್ಲಾಆಸ್ಪತ್ರೆ, ದಾವಣಗೆರೆ, ಹಾಗೂ ಮೂರನೆಯದಾಗಿಜಿಲ್ಲಾಆಸ್ಪತ್ರೆಚಿತ್ರದುರ್ಗಆಗಿದ್ದು, ಶ್ರೀನಿವಾಸಪುರ ಸಾರ್ವಜನಿಕಆಸ್ಪತ್ರೆ 4ನೆ ಸ್ಥಾನವನ್ನು ಪಡೆದಿದ್ದು, ತಾಲ್ಲೂಕು ಮಟ್ಟದಆಸ್ಪತ್ರೆಯಲ್ಲಿ ಶ್ರೀನಿವಾಸಪುರಕ್ಕೆ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆಎಂದು ತಿಳಿಸಿದರು.
ಒಂದು ಒಳ್ಳೆಯ ಕೆಲಸ ನಮ್ಮಆಸ್ಪತ್ರೆಯಿಂದಆಗಿದೆಎಂದರೆ, ಡಿ ನೌಕರರಿಂದ ಹಿಡಿದು, ಎ ಗ್ರೂಪ್ ಆಡಳಿತವರ್ಗದ ವೈಧ್ಯಾಧಿಕಾರಿಅವರಿಗೂ ಸೇರುತ್ತದೆ, ನನ್ನ ಬೆನ್ನು ಹಿಂದೆ ಸುಮಾರುಜನರ ಪರಿಶ್ರಮಇರುತ್ತೆ. ಅದರಿಂದಎಲ್ಲರಿಗೂ ಈ ದಿನ ಕೃತಜ್ನ ಪೂರಕವಾದ ಧನ್ಯವಾದಗಳನ್ನು ತಿಳಿಸುತ್ತೇನೆ. ಎಲ್ಲರಿಗೂ ಭಗವಂತಆಯುರಾರೋಗ್ಯವನ್ನು ನೀಡಿಇದೆರೀತಿ ನಿಸ್ಪೃಹವಾದ ಸೇವೆಯನ್ನು ಸಾರ್ವಜನಿಕರಿಗೆ ಸಲ್ಲಿಸಿ ಶ್ರೀನಿವಾಸಪುರದಕೀರ್ತಿರಾಜ್ಯ ಮತ್ತುರಾಷ್ಟ್ರಮಟ್ಟದಲ್ಲಿ ಮೆರೆಯುವಂತೆ ಆಗಲಿ ಎಂದು ಆಶಿಸಿದರು.
ಉತ್ತಮ ಸೇವೆ ಸಲ್ಲಿಸುತ್ತಿರುವ ಶುಶ್ರೂಕಿಯರಾದ ಶಾಂತ, ಲಿತಿಯಾ ಮತ್ತುಅನಿತಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿಡಾ: ಗೌಸಿಯಾ ಬಾನು, ಡಾ: ಲಾವಣ್ಯ, ಸೀನಿಯರ್ ಫಾರ್ಮಸಿ ಅಧಿಕಾರಿ ನಾಗರಾಜ್, ಶುಶ್ರೂಕಿಯರಾದಕವಿತಾ, ಸೈಯದ್, ಪ್ರಭಾವತಿ, ಸುಗುಣ, ಶಕುಂತಲ, ಸಿಂದು, ಚೈತ್ರ, ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷರಾದ ಶಿವಮೂರ್ತಿ, ಕಾರ್ಯದರ್ಶಿ ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾಂಚಿ ಮಂಜುನಾಥ್, ಸದಸ್ಯರಾದಶಿವಾರೆಡ್ಡಿ, ಶಂಕರ್, ಆನಂದ್,ಮೊದಲಾದವರು ಹಾಜರಿದ್ದರು.