

ಶ್ರೀನಿವಾಸಪುರ ; ಭಾನುವಾರ ಸುದ್ದಿವಾಹಿನಿಯೊಂದರಲ್ಲಿ ಸುಣ್ಣಕಲ್ ಗ್ರಾಮದ ಬಳಿ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನವು ಅನ್ಯಕೋಮಿನವರು ದ್ವಂಸಗೊಳಿಸಲಾಗಿದೆ ಎಂದು ಸುದ್ದಿ ಬಿತ್ತರವಾಗುತ್ತಲೇ ಸೋಮವಾರ ಬೆಳಗ್ಗೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸ್ಥಳಕ್ಕೆ ಬೇಟಿ ಸ್ಥಳ ಪರಿಶೀಲಿಸಿ, ಗ್ರಾಮಸ್ಥರೊಂದಗೆ ದೇವಾಲಯದ ಹಿನ್ನೆಲೆಯ ಬಗ್ಗೆ ಹಾಗೂ ಸರ್ಕಾರದ ಜಮೀನಿನ ಬಗ್ಗೆ ಮಾಹಿತಿ ಪಡೆದರು . ಗ್ರಾಮಸ್ಥರು ಪಾಲೆಗಾರರರು ನಿರ್ಮಿಸಿರುವ ದೇವಸ್ಥಾನ ಹಾಗು ಕೋಟೆಯ ಇದಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸಂಬಂದಿಸಿದ ಜಮೀನು ಅಕ್ರಮವಾಗಿ ಉಳಿಮೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ರವರು ಗ್ರಾಮಸ್ಥರೊಂದಿಗೆ ಮಾತನಾಡಿ, ಇದಕ್ಕೆ ಸಂಬಂದಿಸಿದ ಜಮೀನನ್ನು ಅತಿ ಶೀಘ್ರವಾಗಿ ಸರ್ವೆ ಮಾಡಿಸುವುದಾಗಿ ಭರವಸೆ ನೀಡಿದರು.