ಟಿ.ವಿ. ಮೊಬಾಯ್ಲ್ ಅಭ್ಯಾಸದಲ್ಲಿ ಹಿಡಿತವಿರಲಿ ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ : ಸಂತ ಜೋಸೆಫ್ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ – ಸಿಸ್ಟರ್ ಮರಿಯ ಶುಭ

JANANUDI.COM NETWORK

 

 

ಟಿ.ವಿ. ಮೊಬಾಯ್ಲ್ ಅಭ್ಯಾಸದಲ್ಲಿ ಹಿಡಿತವಿರಲಿ ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ : ಸಂತ ಜೋಸೆಫ್ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ – ಸಿಸ್ಟರ್ ಮರಿಯ ಶುಭ 

 

ಕುಂದಾಪುರ,ನ.೨೩: ‘ಟಿ.ವಿ. ಮೊಬೈಲ್‌ಗಳ ಅಭ್ಯಾಸದಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ, ಇವತ್ತು ಕುಟುಂಬದ ಎಲ್ಲಾ ಸದಸ್ಯರುಗಳಲ್ಲಿ ಮೊಬೈಲ್ ಇವೆ, ಯಾವತ್ತು ನೋಡಿದರೂ, ಮೊಬೈಲ್ ಟಿ.ವಿಗಳಲ್ಲಿ ಮುಳುಗಿ ಹೋಗುತ್ತೇವೆ. ಒದು ಕಡಿಮೆಯಾಗಿದೆ, ಹಿರಿಯವರೂ ಕೂಡ ಒದಿನತ್ತ ಗಮನ ಕಡಿಮೆ, ಮನೆಯಲ್ಲಿ ಲೈಬ್ರೆರಿಗಳಿದ್ದರೂ, ಅವು ಶೋ ಕೇಸಗಳಲ್ಲಿ ಅಡಗಿವೆ’ ಎಂದು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಪೊಸ್ತಲಿಕ್ ಕಾರ್ಮೆಲ್ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ನ.೨೨ ರಂದು ಶಾಲಾ ಮೈದಾನದಲ್ಲಿ ನಡೆದ ಸಂತ ಜೋಸೆಫ್ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ ಸಿಸ್ಟರ್ ಮರಿಯ ಶುಭ ಅವರು ಅಧ್ಯಕ್ಷಿಯ ಭಾಷಣದಲ್ಲಿ ನುಡಿದರು.
‘ಈ ಕನ್ನಡ ಮಾಧ್ಯಮ ಶಾಲೆಯ ವಿದ್ಯಾಥಿಗಳಲ್ಲಿ, ಹಲವಾರು ಪ್ರತಿಭೆಗಳಿ ಇವೆ. ಉತ್ತಮ ಸಂಸ್ಕಾರ ಇವೆ, ಇದನ್ನು ಅವರ ಹೆತ್ತವರಿಂದ ಬಂದದ್ದಾಗಿದೆ ಶಿಕ್ಷರು ಅದನ್ನು ಪ್ರೋತ್ಸಾಹಿಸಿ ಬೆಳಸಬೇಕಾಗಿದೆ’ ಎಂದರು
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟಾ÷್ಯನಿ ತಾವ್ರೊ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಇವತ್ತು ಮೊಬೈಲ್ ಟಿ.ವಿ ಬಂದ ಮೇಲೆ ಮೇಲೆ ಜಗತ್ತೆ ಹತ್ತಿರವಾಗಿದೆ, ಆದರೆ ಭಕ್ತಿ, ದೇವರು ದೂರವಾಗಿದ್ದಾರೆ, ೯೦ ವರ್ಷದ ಹಿಂದೆಯೆ ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ಈ ಸಂಸ್ಥೆ ಶಾಲೆ ಆರಂಭಿಸಿತ್ತು. ಅಂದರೆ ಈ ವರೆಗೆ ಹಲವು ಸಾವಿರ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ವಿದ್ಯೆ ನೀಡಿ ಅವರ ಬಾಳಲ್ಲಿ ಬೆಳಕು ನೀಡಿದೆ. ದೇವರು ಈ ಶಾಲೆಗೆ ಇನ್ನೂ ಹೆಚ್ಚು ಒಳ್ಳೆದನ್ನು ಮಾಡಲಿ’ ಎಂದು ಆಶಿರ್ವದಿಸಿದರು. ಮುಖ್ಯ ಅತಿಥಿ ಕೋಟ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಸಂದೀಪ್ ಶೆಟ್ಟಿ ಮಾತಾಡಿ ‘ವಿದ್ಯಾರ್ಥಿಗಳು ಒಮ್ಮೆ ಒದಿದ್ದನ್ನು. ಮರು ದಿನ ಅದನ್ನು ಬಾಯಿಪಾಠವಾಗಿ ಹೇಳಬಹುದು, ಆದರೆ ಅದು ಶಾಸ್ವತವಾಗಿ ಮೆದುಳಿನಲ್ಲಿ ಶೇಖರಣೆಯಾಗಿ ಉಳಿಯುವುದಿಲ್ಲಾ, ಒಮ್ಮೆ ಒದಿದ್ದು ೩ ನೇ ದಿನ ಪುನ: ಅಭ್ಯಾಸಿಸ ಬೇಕು, ಪುನ: ೭ ನೇ ದಿನ, ಮತ್ತು ೧ ತಿಂಗಳ ನಂತರವೂ ಅದೇ ವಿಷಯವನ್ನು ಅಭ್ಯಾಸಿಸಿದರೆ ಅದು ಮೆದುಳಿನಲ್ಲಿ ಶಾಸ್ವತವಾಗಿ ಉಳಿಯುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಇನ್ನೊರ್ವ ಮುಖ್ಯ ಅತಿಥಿ ರೋಟರಿ ರಿವರ್ ಸೈಡ್ ಅಧ್ಯಕ್ಷ ರಾಜು ಪೂಜಾರಿ ‘ಈ ಶಾಲೆಯ ಶಿಸ್ತಿಗೆ, ಸಹಾಯ ಸ್ವೀಕರಿಸುವ ರೀತಿ ನೋಡಿ ನಮಗೆ ಸಹಾಯ ಮಾಡಲು ಮನಸ್ಸಾಗುತಿದೆ. ಹಾಗೇ ಈ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಸಹಕಾರ ಸಿಗಬೇಕು’ ಎಂದರು.

 

ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ನಿರಂತರವಾಗಿ ಸ್ಕೌಟ್ ಗೈಡ್ ತರಬೇತಿದಾರಳಾಗಿ ನಿರಂತರವಾಗಿ 20 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಸೆಲಿನ್ ಡಿಸೋಜಾ ಇವರಿಗೆ ರಾಜ್ಯ ಸ್ಕೌಟ್ ಗೈಡ್ ಸಂಸ್ಥೆಯಿಂದ ಸೇವಾ ಪ್ರಶಸ್ತಿ  ಪಡೆದ ಸ್ಕೌಟ್ ಗೈಡ್ ಶಿಕ್ಷಕಿ ಸೆಲಿನ್ ಡಿಸೋಜಾ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ವರದಿ ವಾಚಿಸಿದರು. ಆಟ ಪಾಠಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ಹಂಚಿದರು. ಕಳೆದ ಸಾಲಿನಲ್ಲಿ ಉತ್ತಮ ಪಡೆದ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸಲಾಯಿತು. ವಿದ್ಯಾರ್ಥಿಗಳು ನ್ರತ್ಯ, ನಾಟಕ, ಹಾಡು ಮತ್ತು ಕವಾಯತ್ಗಳ ಪ್ರದರ್ಶನ ನೀಡಿದರು. ಶಾಲಾ ಸಂಚಾಲಕಿ ಸಿಸ್ಟರ್ ಕೀರ್ತನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಅಶೋಕ್ ದೇವಾಡಿಗ ವಂದಿಸಿದರು. ಶಿಕ್ಷರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.