ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ರಾಯಲ್ಪಾಡು 4: ಜ್ಞಾನ ಸಂಪಾದನೆ ವ್ಯಕ್ತಿಗೆ ಉನ್ನತ ಸ್ಥಾನಮಾನ ತಂದುಕೊಡುತ್ತದೆ ಎಂದು ಸಾವಿತ್ರಿಬಾಯಿ ಪುಲೆ ಬದ್ದವಾಗಿ ನಂಬಿದ್ದರು ಎಂದು ಸಾವಿತ್ರಿಬಾಯಿ ಪುಲೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮಮತ ಹೇಳಿದರು.
ಮುದಿಮಡುಗು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಸಂಘ(ರಿ) ಧಾರವಾಡ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶನಿವಾರ ತಾಲೂಕು ಮಟ್ಟದ ಉತ್ತಮ ಶಿಕ್ಷಕಿಯರಿಗೆ ಸನ್ಮಾನಿಸಿ ಮಾತನಾಡಿದರು.
ದೇಶದಲ್ಲಿ ಮೊದಲನೇ ಮಹಿಳಾ ಶಿಕ್ಷಕಿಯಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕಾಂತ್ರಿ ಮಾಡಿದ್ದಾರೆ . ಅಲ್ಲಿನ ಅನಕ್ಷರಸ್ಥ ಮಕ್ಕಳಿಗೆ ಕಲಿಸಿ ಮುನ್ನೆಲೆಗೆ ತರುವುದೇ ಅವರ ಉದ್ದೇಶವಾಗಿತ್ತು ಎಂದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಕಿಯರು ಸಾವಿತ್ರಿಬಾಯಿ ಪುಲೆಯ ಆದರ್ಶಗಳನ್ನು ಪಾಲಿಸುತ್ತಾ , ಅಕ್ಷರ ಎಂಬ ಅನ್ನದ ತುತ್ತನ್ನು ನೀಡುವಂತೆ ಸಲಹೆ ನೀಡಿದರು. ಇದೇ ಮೊದಲ ಬಾರಿಗೆ ಸಾವಿತ್ರಿ ಬಾಯಿ ಪುಲೆ ಸಂಘದ ವತಿಯಿಂದ ಪುರಸ್ಕಾರಗಳನ್ನು ನೀಡಲಾಗಿದ್ದು, ಮುದಿಡಮುಗು ಪ್ರೌಡಶಾಲೆ ಹಿಂದಿ ಶಿಕ್ಷಕಿ ಶಾರದಮ್ಮ, ಮೊರಂಕಿಂದಪಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಕೆ.ಮಂಜುಳ ಈ ಪುರಸ್ಕಾರಕ್ಕೆ ಆಯ್ಕೆಯಾದ ಇಬ್ಬರು ಶಿಕ್ಷಕಿಯರಿಗೆ ಶುಭಕೊರಿದರು.
ತಾಲೂಕು ಕೋಶಾಧ್ಯಕ್ಷೆ ಕೆ.ವಿ.ಶಾರದಮ್ಮ,ಗೌರವಾಧ್ಯಕ್ಷೆ ಆದಿಲಕ್ಷ್ಮಮ್ಮ,ತಾಲೂಕು ಅಧ್ಯಕ್ಷೆ ವಿ.ಜಯಮ್ಮ, ಪ್ರತಿಭಾ ಪರಿಷತ್ ತಾಲೂಕು ಅಧ್ಯಕ್ಷ ಕೆ.ರಾಜಣ್ಣ,ಸಂಘಟನಾ ಕಾರ್ಯದರ್ಶಿ ಕೆ.ವೆಂಕಟಶಿವ, ಮುಖ್ಯ ಶಿಕ್ಷಕ ಕೆ.ಎಸ್.ಸತ್ಯನಾರಾಯಣರೆಡ್ಡಿ, ಸಂತೋಷ್ ಶಿರಾಗಾವೆ,ಜಿ.ವಿ.ಅಶೋಕ್,ಕೆ.ಜಿ.ಪ್ರದೀಪ್,ಈರಣ್ಣಗೌಡಪಾಟೀಲ್ ,ನವೀನ್ ಇದ್ದರು.
ಪೋಟು 4 : ಮುದಿಮಡುಗು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿಯರಾಗಿ ಆಯ್ಕೆಯಾದ ಎನ್. ಶಾರದಮ್ಮ,ಕೆ.ಮಂಜುಳರವರನ್ನು ಸನ್ಮಾನಿಸಲಾಯಿತು.