“ಜೈಕೊಂಕಣಿ”  ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ರಾಜ್ಯಮಟ್ಟದ ಕೊಂಕಣಿ ಕಥೆ, ಕವನ ಸ್ಪರ್ಧೆ 

JANANUDI.COM NETWORK 

“ಜೈಕೊಂಕಣಿ”  ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ರಾಜ್ಯಮಟ್ಟದ ಕೊಂಕಣಿ ಕಥೆ, ಕವನ ಸ್ಪರ್ಧೆ 

ಕುಂದಾಪುರದಲ್ಲಿ ಸ್ಥಾಪನೆಗೊಂಡು ನೂರಾರು ಕೊಂಕಣಿ ಕಾರ್ಯಕ್ರಮಗಳನ್ನು ನಡೆಸಿರುವ “ಜೈಕೊಂಕಣಿ” ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ರಾಜ್ಯಮಟ್ಟದ ಕೊಂಕಣಿ ಕಥೆ, ಕವನ ಸ್ಪರ್ಧೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ದೇವನಾಗರಿ, ಕನ್ನಡ , ಇಂಗ್ಲೀಷ್ ಯಾವುದೇ ಲಿಪಿಯಲ್ಲೂ ಬರೆಯಬಹುದು. ಕಥೆ ನಾಲ್ಕು ಪುಟಗಳನ್ನು ಮೀರಬಾರದು. ಕವನ ಎರಡು ಪುಟಗಳನ್ನು ಮೀರಬಾರದು.
ಅತ್ಯುತ್ತಮ ಕಥೆಗಾರರು ಹಾಗೂ ಕವಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ, ಬಹುಮಾನ ನೀಡಲಾಗುತ್ತದೆ.
ಭಾಗವಹಿಸುವವರು ತಮ್ಮ ಕೃತಿಗಳನ್ನು ನವೆಂಬರ್ 20 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಬೇಕು.
ಯು.ಎಸ್.ಶೆಣೈ, ಜೈಕೊಂಕಣಿ ಕುಂದಪ್ರಭ ಕಛೇರಿ, ಕುಂದಾಪುರ 576201 ಉಡುಪಿ ಜಿಲ್ಲೆ, ಫೋನ್ 9448120765.
ಸ್ವರಚಿತ ಸಾಹಿತ್ಯಕ್ಕೆ ಮಾತ್ರ ಅವಕಾಶ ಎಂದು ಜೈಕೊಂಕಣಿ ಸಂಸ್ಥೆಯ ಕಾರ್ಯದರ್ಶಿ ಪಿ.ಜಯವಂತ ಪೈ ತಿಳಿಸಿದ್ದಾರೆ.