ವರದಿ: ವಾಲ್ಟರ್ ಮೊಂತೇರೊ
ಜೇಸಿಐ ಬೆಳ್ಮಣ್‍ನ ಜೇಸಿ ಸಪ್ತಾಹ ದಿ ಶೈನ್ ಉದ್ಘಾಟನೆ, ಮಾನವೀಯ ಮೌಲ್ಯಗಳ ಮಾಧ್ಯಮವಾಗಬೇಕು – ಜೇಸಿಐ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್
ಜೇಸಿಯಂತಹ ಸಂಸ್ಥೆಗಳು ಕೇವಲ ಸಾಂಸ್ಕøತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೇ ಸಮಾಜದ ಅಭಿವೃದ್ದಿ ಹಾಗೂ ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಯಲ್ಲಿಯೂ ಪಾತ್ರ ವಹಿಸುವಂತಿರಬೇಕು. ಜತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸುವ ಮಾಧ್ಯಮವಾಗಬೇಕು ಎಂದು ಜೇಸಿಐ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್ ಹೇಳಿದರು.
ಶನಿವಾರ ಬೆಳ್ಮಣ್ ಸರಕಾರಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ನಡೆದ ಜೇಸಿಐ ಬೆಳ್ಮಣ್‍ನ ಜೇಸಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳ್ಮಣ್ ಜೇಸಿಐ ಘಟಕದ ಅಧ್ಯಕ್ಷೆ ಶ್ವೇತಾ ಸುಭಾಷ್ ಅವರು ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಶಶಿಧರ್ ಶೆಟ್ಟಿ ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಸಾಲ್ಯಾನ್, ಕಾಲೇಜಿನ ಪ್ರಾಂಶುಪಾಲೆ ಕಿಶೋರಿ ಬಿ., ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಲಕ್ಷ್ಮೀ ಜಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ಆಚಾರ್ಯ, ಪೂರ್ವಾಧ್ಯಕ್ಷ ಜಯಂತ್ ರಾವ್ ಪಿ. ಕಾರ್ಯಕ್ರಮ ನಿರ್ದೇಶಕ ಸತೀಶ್ ಅಬ್ಬನಡ್ಕ, ನಿಕಟಪೂರ್ವಾಧ್ಯಕ್ಷ ಪ್ರದೀಪ್ ಆಚಾರ್ಯ, ಜೂನಿಯರ್ ಜೇಸಿ ಅಧ್ಯಕ್ಷ ದೀಕ್ಷಿತ್ ದೇವಾಡಿಗ, ಸುಭಾಷ್ ಕುಂಆರ್, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸರಿತಾ ದಿನೇಶ್ ವಂದಿಸಿದರು. ಬಳಿಕ ಆಹ್ವಾನಿತ ತಂಡಗಳಿಗೆ ಕಬಡ್ಡಿ ಪಂದ್ಯಾಟ ನಡೆಯಿತು.